ಮೇ. 1 ರಿಂದ 4ರವರೆಗೆ ದುರ್ಗನ್ಸ್ ಪುನೀತ್ ರಾಜಕುಮಾರ್ ಕ್ರಿಕೇಟ್ ಲೀಗ್-2025 ಲೀಗ್ ಕಮ್ ನಾಕೌಟ್ ಕ್ರಿಕೇಟ್ ಪಂದ್ಯಾವಳಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. 29 : ಯುವರತ್ನ ಕ್ರಿಕೇಟರ್ಸ್, ಐಕಾನ್ ಸ್ಟಾರ್ಸ್ ಜೆ.ಜೆ.ಹಟ್ಟಿ ಗೆಳೆಯರ ಬಳಗದವತಿಯಿಂದ 2ನೇ ಬಾರಿಗೆ ಮೇ. 1 ರಿಂದ 4ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಪುನೀತ್ ರಾಜಕುಮಾರ್ ರವರ 50ನೇ ಹುಟ್ಟು ಹಬ್ಬದ ಪ್ರಯುಕ್ತ ದುರ್ಗನ್ಸ್
ಪುನೀತ್ ರಾಜಕುಮಾರ್ ಕ್ರಿಕೇಟ್ ಲೀಗ್-2025 ಲೀಗ್ ಕಮ್ ನಾಕೌಟ್ ಕ್ರಿಕೇಟ್ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು
ಅರ್ಜುನ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಈಗಾಗಲೇ ಒಂದು ಬಾರಿ ಈ ರೀತಿಯಾದ
ಪಂದ್ಯಾವಳಿಯನ್ನು ನಡೆಸಲಾಗಿದೆ. ಇದು ಎರಡನೇ ಬಾರಿಯಾಗಿದೆ. ಚಿತ್ರದುರ್ಗದಲ್ಲಿ ಕ್ರಿಕೇಟ್ ಆಡುವ 30 ತಂಡಗಳು ಇದ್ದು ಇದರಲ್ಲಿ
ಒಂದೂಂದು ತಂಡದಿಂದ ತಲಾ ಮೂರು ಜನರನ್ನು ಆಯ್ಕೆ ಮಾಡು ಒಂದು ತಂಡವನ್ನು ನಿರ್ಮಾಣ ಮಾಡಲಾಗಿದ್ದು ಇದೇ ರೀತಿ
ಒಂದೊಂದು ತಂಡದ ಮಾಲಿಕರುಗಳು ಸೇರಿ 12 ತಂಡಗಳನ್ನು ರಚನೆ ಮಾಡಲಾಗಿದೆ ಎಂದರು.

ಈ ಪಂದ್ಯಾವಳಿಯಲ್ಲಿ 12 ತಂಡಗಳು ಆಟವನ್ನು ಆಡಲಿವೆ, ಇದರ ಪ್ರಥಮ ಬಹುಮಾನವಾಗಿ 1.50 ಲಕ್ಷ ದ್ವಿತೀಯ ಬಹುಮಾನವಾಗಿ
75.000ದ ಜೊತೆಗೆ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು ಇದ್ದಲ್ಲದೆ ಸರಣಿ ಶ್ರೇಷ್ಠರವರಿಗೆ ಟಿ.ವಿ. ಉತ್ತಮ ಬ್ಯಾಟ್ಸ್‍ಮನ್‍ರಿಗೆ
ವಾಷಿಂಗ್ ಮಿಷಿನ್, ಉದಯೋನ್ಮಖ ಆಟಗಾರನಿಗೆ ಮೊಬೈಲ್ ಹಾಗೂ ಉತ್ತಮ ಬೌಲರ್‍ಗೆ ರೆಫಿಜರೇಟರ್‍ನ್ನು ಬಹುಮಾನವಾಗಿ
ನೀಡಲಾಗುವುದು ಎಂದು ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ನಡೆದ ಪ್ರತಿಕಾ ಗೋಷ್ಟಿಯಲ್ಲಿ ನಗರಸಭಾ ಸದಸ್ಯರಾದ ನಸ್ರುಲ್ಲಾರವರು ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ
ಪಡೆದವರಿಗೆ ನೀಡುವ ಟ್ರೋಫಿಯನ್ನು ಕ್ರೀಡಾಪಟುಗಳಿಗೆ ನೀಡುವ ರ್ಜಸಿಯನ್ನು ಬಿಡುಗಡೆ ಮಾಡಿದರು. ಮೇ.1ರ ಗುರುವಾರ ಬೆಳಿಗ್ಗೆ
10 ಗಂಟೆಗೆ ಪಂದ್ಯಾವಳಿ ಉದ್ಘಾಟನೆಯಾಗಲಿದ್ದು ಮೇ. 4 ರ ಸಂಜೆ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಲಿದೆ
ಇದರಲ್ಲಿ ನಗರದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ
ಈ ಸಂದರ್ಭದಲ್ಲಿ ರಂಗನಾಥ್, ನಾಗರಾಜ್, ಚೇತನ್, ಇರ್ಫಾನ್, ಶಂಕರ್ ಮೂರ್ತಿ, ಸಲ್ಮಾನ್ ಖಾನ್ ಸೇರಿದಂತೆ ಇತರರು
ಭಾಗವಹಿಸಿದ್ದರು.

Leave a Reply

Your email address will not be published. Required fields are marked *