ಚಿತ್ರದುರ್ಗ ಸೆ. 30 : ಪುಸ್ತಕವನ್ನು ಓದುವುದರಿಂದ ಉತ್ತಮವಾದ ಬದುಕನ್ನು ರೂಪಿಸಿಕೊಳ್ಳಬಹುದಾಗಿದೆ. ಇದ್ದಲ್ಲದೆ ಓದುವುರಿಂದ ಆತ್ಮವಿಶ್ವಾಸ ಮೂಡುತ್ತದೆ, ತಮ್ಮ ಜ್ಞಾನವನ್ನು ಸಹಾ ವೃದ್ದಿಸುತ್ತದೆ ಎಂದು ಚಿಂತಕರು ನಿವೃತ್ತ ಪ್ರಾಂಶುಪಾಲರಾದ ಜೆ.ಯಾದವ್ ರೆಡ್ಡಿ ತಿಳಿಸಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ದಾವಣಗೆರೆ ವಿಶ್ವ ವಿದ್ಯಾಲಯ, ನಗರದ ಪಿಳ್ಳೇಕೇರನಹಳ್ಳಿಯ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದವತಿಯಿಂದ ಬಾಪೂಜಿ
ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಸಾಹಿತ್ಯ ಸಿರಿಯಡಿಯಲ್ಲಿ ಪರಮೇಶ್ವರಪ್ಪ ಕುದರಿಯವರ ಗಣ್ಯರ ಸಂದರ್ಶನದ ಮನದಂಗಳ
ಹಾಗೂ ಕಥಾ ಸಂಕಲನವಾದ ಕೊನೆಗೂ ಅರ್ಥವಾಗದವಳು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ
ದಿನಮಾನದಲ್ಲಿ, ಜನತೆಯಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ, ಎಲ್ಲರು ನೋಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಇದರಿಂದ ನಮ್ಮಲ್ಲರ
ಜ್ಞಾನ ಕಡಿಮೆಯಾಗುತ್ತದೆ. ಓದುವ ಸಮಯದಲ್ಲಿ ಸಿಕ್ಕ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕಿದೆ, ಇದರಿಂದ ನಮ್ಮ
ಜ್ಞಾನ ವೃದ್ದಿಯಾಗುತ್ತದೆ. ಪುಸ್ತಕ ಜ್ಞಾನದಿಂದ ಜಗತ್‍ನ್ನೇ ಗೆಲ್ಲಬಹುದಾಗಿದೆ. ಪುಸ್ತಕ ಸಂಸ್ಕೃತಿ ಎಂದಿಗೂ ಸಹಾ ನಾಶವಾಗುವುದಿಲ್ಲ, ಇದು
ಯಾವಾಗಲೂ ಸಹಾ ನಿರಂತರವಾಗಿ ಇರುವಂತ ಜ್ಞಾನವಾಗಿದೆ ಎಂದರು.
ಪ್ರಪಂಚದಲ್ಲಿ 30,000 ಪುಸ್ತಕಗಳು ಮುದ್ರಣವಾಗುತ್ತವೆ, ಇದರಲ್ಲಿ ಕರ್ನಾಟಕದಲ್ಲಿ 8 ರಿಂದ 10 ಸಾವಿರ ಪುಸ್ತಕ ಗಳು
ಬಿಡುಗಡೆಯಾಗುತ್ತವೆ. 3000 ಪುಸ್ತಕಗಳು ಪ್ರಕಟವಾಗುತ್ತವೆ ಆದರೆ ಇದರ ಬಗ್ಗೆ ಯಾರಿಗೂ ಸಹಾ ಅಸಕ್ತಿ ಇಲ್ಲವಾಗಿದೆ.
ಎಸ್.ಎಸ್.ಎಲ್.ಸಿ.ವರೆಗೂ ಏನೂ ಬೇಕಾದರೂ ಓದಿ ತದ ನಂತರ ಪಠ್ಯಕ್ಕೆ ಅಗತ್ಯವಾದ ಪುಸ್ತಕಗಳನ್ನು ಓದಿ, ಇದರಲ್ಲಿ ಸಮಾಜ
ಮುಖಿಯಾದ ಪುಸ್ತಕಗಳನ್ನು ಓದುವುದರ ಮೂಲಕ ನಿಮ್ಮ ಬದುಕನ್ನು ಉತ್ತಮಗೂಳಿಸಬಹುದಾಗಿದೆ. ನಮ್ಮಲ್ಲಿ ವ್ಯವಸ್ಥೆಯ ವಿರುದ್ದ ಹಾಗೂ
ಪರವಾದ ಸಾಹಿತ್ಯ ಇದೆ. ಸಮಾಜವನ್ನು ಸರಿಪಡಿಸುವ ಸಾಹಿತಿಗಳ ಸಂಖ್ಯೆ ಕಡಿಮೆ ಇದೆ. ನಮ್ಮ ಬದುಕನ್ನು ಅಕ್ಷರ ಸಂಸ್ಕøತಿಯಿಂದ
ಬದಲಾಯಿಸಲು ಸಾಧ್ಯವಿದೆ. ನಮ್ಮಲ್ಲಿ ದೇಶ ಭಕ್ತರಗಿಂತ ದೇಶ ದ್ರೋಹಿಗಳಿಗೆ ಹೆಚ್ಚಿನ ಮನ್ನಣೆಯನ್ನು ಕೂಡಲಾಗುತ್ತಿದೆ. ಅವರಿಗೆ
ಗುಡಿಯನ್ನು ಕಟ್ಟುವುದರ ಮೂಲಕ ಪೂಜೆಯನ್ನು ಮಾಡಲಾಗುತ್ತಿರುವುದು ದುರಂತವಾಗಿದೆ ಎಂದರು.
ನಮ್ಮಲ್ಲಿ ಜೀವನದ ಭರವಸೆಯನ್ನು ಕಳೆದುಕೊಂಡಾಗ ಪುಸ್ತಕಗಳನ್ನು ಓದುವುದರ ಮೂಲಕ ಆತ್ಮವಿಶ್ವಾಸವನ್ನು
ಗಳಿಸಿಕೊಳ್ಳಬಹುದಾಗಿದೆ. ನಮ್ಮ ಜ್ಞಾನಾರ್ಜನೆಗೆ ಬೇರೆ ಸಲಕರಣೆಗಳಿಗಿಂತ ಪುಸ್ತಕ ಉತ್ತಮವಾದ ಹವ್ಯಾಸವಾಗಿದೆ. ಮನೆಯಲ್ಲಿ ಚಿಕ್ಕ
ಮಕ್ಕಳಿಂದ ಆಸೆಗಳನ್ನು ತುಂಬುವುದರ ಮೂಲಕ ಜೀವನವನ್ನು ಪ್ರಾರಂಭ ಮಾಡಲಾಗುತ್ತಿದೆ, ಇದು ನಿಲ್ಲಬೇಕು, ಮಕ್ಕಳಿಗೆ ಪುಸ್ತಕವನ್ನು
ಓದುವ ಹವ್ಯಾಸವನ್ನು ಬೆಳಸಬೇಕಿದೆ. ನಮ್ಮಲ್ಲಿ ಅಕ್ಷರ ಸಂಸ್ಕೃತಿಯ ಪ್ರಮಾಣ ಕಡಿಮೆ ಇದೆ ಸ್ವಾತಂತ್ರ್ಯ ಬಂದಾಗಿನಿಂದಲೂ
ಸಾಕ್ಷರತೆಯ ಪ್ರಮಾಣ ಈಗ ಶೇ.70 ರಷ್ಟು ಮಾತ್ರ ಆಗಿದೆ. ನಮ್ಮನ್ನು ಸರಿದಾರಿಗೆ ತರುವಂತ ಸಾಹಿತ್ಯವನ್ನು ಅಧ್ಯಯನ ಮಾಡಬೇಕಿದೆ.
ಇದರಿಂದ ನಮ್ಮಲ್ಲಿ ಭರವಸೆಗಳನ್ನು ಮೂಡಿಸುತ್ತದೆ. ಎಂದು ಯಾದವ್ ರೆಡ್ಡಿ ತಿಳಿಸಿದರು.
ಕೊನೆಗೂ ಅರ್ಥವಾಗದವಳು ಕಥಾ ಸಂಕಲನದ ಬಗ್ಗೆ ಮಾತನಾಡಿದ ಸಾಹಿತಿಗಳು ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಶೈಲಾ
ವಿಜಯಕುಮಾರ್ ಇಂದಿನ ದಿನಮಾನದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ, ರಾಕ್ಷಸರನ್ನು ಮೀರಿದ ಒಂದು ವರ್ಗ ತಲೆ
ಎತ್ತುತ್ತಿದೆ. ದೇಶದಲ್ಲಿ ಮೃಗಿಯ ಸಂಸ್ಕೃತಿಯನ್ನು ಹೊಂದಿದವರ ಪ್ರಮಾಣ ಹೆಚ್ಚಾಗುತ್ತಿದೆ. ಇಂದಿನ ದಿನದಲ್ಲಿ ಮಾನವರಾದ ನಾವುಗಳು
ಅಧುನಿಕತೆಗೆ ಹೊಂದಿಕೊಳ್ಳುವ ಕಾರ್ಯವನ್ನು ಮಾಡಲಾಗುತ್ತಿದೆ. ಸೀರೆಗಳಿಂದ ಮಿನಿ ಸ್ಕಟ್‍ಗಳಿಗೆ ಹೋಗಲಾಗುತ್ತಿದೆ. ನಮ್ಮ
ಸಂಸ್ಕೃತಿಯನ್ನು ಬಿಟ್ಟು ಪ್ರಾಶ್ಯಿಮಾತ್ಯರ ಸಂಸ್ಕೃತಿಯನ್ನು ಅನುಸರಿಸಲಾಗುತ್ತಿದೆ. ಇಷ್ಟರ ಮಟ್ಟಿಗೆ ನಮ್ಮ ಮೇಲೆ ಪ್ರಭಾವವನ್ನು ಅದು
ಬೀರಿದೆ. ಪರಮಶ್ವರಪ್ಪ ಕುದರಿಯವರ ಕೊನೆಗೂ ಅರ್ಥವಾಗದವಳು ಕಥಾ ಸಂಕಲದಲ್ಲಿ 13 ಸಣ್ಣ ಕಥೆಗಳಿಂದ್ದ ಇದರಲ್ಲಿ 8 ಪ್ರೇಮ
ಕಥೆಗಳಾದರೆ 5 ಆತ್ಮಹತ್ಯೆ ಕಥೆಗಳಾಗಿವೆ. ಇಂದಿನ ಜನತೆ ಸಣ್ಣ-ಪುಟ್ಟದಕ್ಕೆಲ್ಲಾ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ
ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ವ್ಯವದಾನ ಇಲ್ಲವಾಗಿದೆ ಎಂದು ವಿಷಾಧಿಸಿದರು.
ಮಹಿಳೆ ಇಂದಿನ ದಿನಮಾನದಲ್ಲಿ ಅರ್ಥ ಮಾಡಿಕೊಳ್ಳದ ವಸ್ತುವಾಗಿದ್ದಾಳೆ ಒಂದು ಸುಂದರವಾದ ಕುಂಟುಂಬ ಇರಬೇಕಾದರೆ
ಹೆಂಡತಿಯನ್ನು ಪ್ರೀತಿಸಬೇಕು ಗಂಡನನ್ನು ಹೊಗಳಬೇಕು ಅಗ ಮಾತ್ರ ಸುಂದರವಾದ ಸಂಸಾರವಾಗಲು ಸಾಧ್ಯವಿದೆ. ಕುದರಿಯವರ
ಕಥಾ ಸಂಕಲನದಲ್ಲಿ ಎಲ್ಲಿಯೂ ಸಹಾ ಅಶ್ಲೀಲತೆ ಮೂಡಿಲ್ಲ ಸರಳವಾಗಿ ಮೂಡಿಬಂದಿದೆ. ಸಣ್ಣ ಕಥೆಗಳಲ್ಲಿ ಬದಲಾವಣೆಯನ್ನು
ಕಾಣಲಾಗುತ್ತಿದೆ ಎಂದು ಶೈಲಾ ತಿಳಿಸಿದರು.
ಸಾಹಿತಿಗಳಾದ ಹುರಳಿ ಎಂ.ಬಸವರಾಜು ರವರು ಪರಮೇಶ್ವರಪ್ಪ ಕುದರಿಯವರ ಗಣ್ಯರೊಂದಿಗೆ ಸಂದರ್ಶನದ ಪುಸ್ತಕವನ್ನು
ಆವಲೋಕನ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳು, ಶರಣ ಸಾಹಿತ್ಯ
ಪರಿಷತ್‍ನ ಅಧ್ಯಕ್ಷರಾದ ಕೆ.ಎಂ.ವಿರೇಶ್ ವಹಿಸಿದ್ದರು. ಲೇಖಕರಾದ ಪರಮೇಶ್ವರಪ್ಪ ಕುದರಿ ಗಂಜಿಗಟ್ಟೆ ಕೃಷ್ಣಮೂರ್ತಿ, ಜಗನ್ನಾಥ್,
óಷರೀಫಾಬಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಶ್ರೀಮತಿ ತನುಜ ಪ್ರಾರ್ಥಿಸಿದರೆ. ಶಿವಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಪ್ರಸ್ತಾವಿಕವಾಗಿ
ಮಾತನಾಡಿದರೆ, ಡಾ.ಹನುಮಂತರೆಡ್ಡಿ ವಂದಿಸಿದರು. ಶ್ರೀಮತಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು.