EaseMyTrip WCL Season 2 cricket tournament: ಜುಲೈ ದ್ವಿತೀಯಾರ್ಧದಲ್ಲಿ ನಡೆಯಲಿರುವ ಎರಡನೇ ಸೀಸನ್ನ ಈಸ್ಮೈಟ್ರಿಪ್ ವರ್ಲ್ಸ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತೀಯ ತಂಡಕ್ಕೆ ಯುವರಾಜ್ ಸಿಂಗ್ ನಾಯಕರಾಗಿದ್ದಾರೆ. ಕಳೆದ ಸೀಸನ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆಗಿದ್ದ ಭಾರತ ಸತತ ಎರಡನೇ ಬಾರಿ ಪಟ್ಟ ಪಡೆಯಲು ಹೊರಟಿದೆ. ಈಸ್ ಮೈ ಟ್ರಿಪ್ ಸಂಸ್ಥೆ ಈ ಟೂರ್ನಿಯನ್ನು ಆಯೋಜಿಸುತ್ತಿದೆ.

ಮಾರ್ಚ್ 22: ಬ್ರಿಟನ್ನಲ್ಲಿ ಜುಲೈ 18ರಿಂದ 31ರವರೆಗೆ ನಡೆಯಲಿರುವ ಈಸ್ಮೈಟ್ರಿಪ್ ಡಬ್ಲ್ಯುಸಿಎಲ್ನ ಎರಡನೇ ಸೀಸನ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ (EaseMyTrip WCL-2) ಭಾರತೀಯ ತಂಡಕ್ಕೆ ಯುವರಾಜ್ ಸಿಂಗ್ ನಾಯಕರಾಗಿದ್ದಾರೆ. ಚೊಚ್ಚಲ ಸೀಸನ್ನಲ್ಲಿ ಚಾಂಪಿಯನ್ ಆಗಿದ್ದ ಇಂಡಿಯಾ ಚಾಂಪಿಯನ್ಸ್ ತಂಡ ಸತತ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಕಳೆದ ಬಾರಿ ತಂಡದಲ್ಲಿ ಇಲ್ಲದ ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ಈ ಸೀಸನ್ನಲ್ಲಿ ತಂಡಕ್ಕೆ ಬಲ ನೀಡುತ್ತಿದ್ದಾರೆ. ಕರ್ನಾಟಕ ಕುವರ ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮೊದಲಾದ ಲೆಜೆಂಡ್ಗಳು ಇಂಡಿಯಾ ಚಾಂಪಿಯನ್ಸ್ ತಂಡದಲ್ಲಿದ್ದಾರೆ.
ಜುಲೈ 18ಕ್ಕೆ ಟೂರ್ನಿ ಆರಂಭವಾಗುತ್ತದೆ. ಭಾರತದ ಮೊದಲ ಪಂದ್ಯ ಜುಲೈ 20ರಂದು ಪಾಕಿಸ್ತಾನದ ಎದುರು ಇದೆ. ಮೊದಲ ಸೀಸನ್ನಲ್ಲಿ ಇದೇ ಪಾಕಿಸ್ತಾನ್ ವಿರುದ್ಧ ಗೆದ್ದು ಭಾರತ ಚಾಂಪಿಯನ್ ಆಗಿತ್ತು. ಬರ್ಮಿಂಗ್ಹ್ಯಾಂನ ಎಡ್ಜ್ಬಾಸ್ಟೋನ್ನ್ಲಲಿ ಆ ಫೈನಲ್ ಪಂದ್ಯ ನಡೆದಿತ್ತು. ಈಗ ಅದೇ ಗ್ರೌಂಡ್ನ್ಲಲಿ ಈ ಸೀಸನ್ನಲ್ಲಿ ಈ ಎರಡು ಬದ್ಧವೈರಿ ತಂಡಗಳು ಮುಖಾಮುಖಿಯಾಗಲಿವೆ.
ಭಾರತ, ಪಾಕಿಸ್ತಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾದ ತಂಡಗಳು ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಪಾಲ್ಗೊಂಡಿವೆ. ಲೈಸಿಸ್ಟರ್ಶೈರ್, ಲೀಡ್ಸ್, ನಾರ್ಥಾಂಪ್ಟನ್ ಕೌಂಟಿಗಳಲ್ಲಿ ವಿವಿಧ ಪಂದ್ಯಗಳು ನಡೆಯಲಿವೆ. ನಾಕೌಟ್ ಪಂದ್ಯಗಳು ಬರ್ಮಿಂಗ್ಹ್ಯಾಂನ ಎಡ್ಜ್ಬಾಸ್ಟೋನ್ನ್ಲಿ ನಡೆಯಲಿವೆ.
ಈಸ್ಮೈಟ್ರಿಪ್ ಪ್ರಾಯೋಜಕತ್ವದ ಟೂರ್ನಿ
ಈಸ್ಮೈಟ್ರಿಪ್ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಪಂದ್ಯಗಳು ಟಿ20 ಕ್ರಿಕೆಟ್ ಮಾದರಿಯದ್ದಾಗಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ಆಟಗಾರರು ಈ ಟೂರ್ನಿಗಳಲ್ಲಿ ಭಾಗವಹಿಸುತ್ತಾರೆ. ಈ ಬಾರಿ ನಡೆಯುತ್ತಿರುವುದು ಎರಡನೇ ಸೀಸನ್ನ ಟೂರ್ನಿ.
ಈಸ್ಮೈಟ್ರಿಪ್ ಸಂಸ್ಥೆಗೆ ಹೆಮ್ಮೆ
ಟ್ರಿಪ್ ಪ್ಲಾನರ್ ಮತ್ತು ಟಿಕೆಟ್ ಬುಕಿಂಗ್ ಪ್ಲಾಟ್ಫಾರ್ಮ್ ಆದ ಈಸ್ಮೈಟ್ರಿಪ್ ಸಂಸ್ಥೆ ಈ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯನ್ನು ಆಯೋಜಿಸುತ್ತಿದೆ. ‘ನಮ್ಮ ಸೂಪರ್ಸ್ಟಾರ್ಗಳನ್ನು ದಂತಕಥೆಗಳನ್ನಾಗಿಸಿದ ಅವರ ಕ್ರಿಕೆಟ್ ಪ್ರತಿಭೆಯ ಮ್ಯಾಜಿಕ್ ಮತ್ತೆ ಅನಾವರಣಗೊಳ್ಳುವುದನ್ನು ನೋಡುವುದೇ ಒಂದು ದೊಡ್ಡ ಭಾಗ್ಯ. ನಮ್ಮ ಕ್ರಿಕೆಟ್ ಹೀರೋಗಳು ನಮ್ಮ ಭಾವನೆಗಳೇ ಆಗಿದ್ದಾರೆ’ ಎಂದು ಡಬ್ಲ್ಯುಸಿಎಲ್ ಸಂಸ್ಥಾಪಕ ಹರ್ಷಿತ್ ತೋಮರ್ ಹೇಳುತ್ತಾರೆ.
‘ಈಸ್ಮೈಟ್ರಿಪ್ ವಲ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಒಂದು ಟೂರ್ನಿ ಮಾತ್ರವಲ್ಲ, ಕ್ರೀಡೆಯ ಸರ್ವಶ್ರೇಷ್ಠ ಆಟಗಾರರ ಆಚರಣೆ ಆಗಿದೆ’ ಎಂದು ಈಸ್ಮೈಟ್ರಿಪ್ ಛೇರ್ಮನ್ ಮತ್ತು ಸಂಸ್ಥಾಪಕ ನಿಶಾಂತ್ ಪಿಟ್ಟಿ ತಿಳಿಸುತ್ತಾರೆ.
Source: Tv9