ಬೆಂಗಳೂರು: ಸದ್ಯಕ್ಕೆ ಬೈಜೂಸ್ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಸಂಸ್ಥೆ. ಟ್ಯೂಷನ್ ಗಾಗಿ ಮಕ್ಕಳು ಈ ಆ್ಯಪ್ ಗೆ ಜಾಯಿನ್ ಆಗ್ತಾನೆ ಇದ್ದಾರೆ. ಇದೀಗ ಹಣದ ವಿಚಾರವಾವಿನೇ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿದೇಶ ಹಣ ಹೂಡಿಕೆ ಕಾನೂನುಗಳನ್ನು ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದು, ಈಗಾಗಲೇ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಜು ರವೀಂದ್ರನ್ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸಿಕ್ಕ ಮುಖ್ಯವಾದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ದಾಖಲೆಗಳ ಪರಿಶೀಲನೆಮಾಡಿದ ಬಳಿಕ ವಿದೇಶಿ ನೇರ ಹೂಡಿಕೆ ಮಾಡಿರುವುದು ಗಮನಕ್ಕೆ ಬಂದಿದೆ. 2011ರಿಂದ 2023ರ ತನಕದ ಅವಧಿಯಲ್ಲಿ ಕಂಪನಿಯೂ 28,000 ಹಣವನ್ನು ನೇರ ಹೂಡಿಕೆ ಮಾಡಿದೆ. ಬೈಜೂಸ್ ಕಂಪನಿಯ ಹೆಸರಿನಲ್ಲಿ ವಿವಿಧ ವಿದೇಶಿ ಸಂಸ್ಥೆಗಳಿಗೆ ಹಣ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ. 9,754 ಕೋಟಿ ಹಣ ವರ್ಗಾವಣೆಯಾಗಿರುವುದಲ್ಲದೆ, 944 ಕೋಟಿ ಜಾಹೀರಾತಿಗೂ ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳಿಗೆ ವಿವರಣೆ ಕೇಳಿದ್ದಾರೆ.
The post ಬೈಜೂಸ್ ಕಂಪನಿ ಮೇಲೆ ಇಡಿ ದಾಳಿ : ಇಷ್ಟೊಂದು ಕೋಟಿ ವರ್ಗಾವಣೆಯಾಗಿದ್ದೇಕೆ..? first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/eJfotgC
via IFTTT