![](https://samagrasuddi.co.in/wp-content/uploads/2024/12/image-108.png)
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 15: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಸಂಘ, ಜಿಲ್ಲಾ ಶಾಖೆ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ರಾಜಕೀಯ ವಿಜ್ಞಾನದ ಶೈಕ್ಷಣಿಕ ಕಾರ್ಯಾಗಾರವು ಡಿ. 16ರ ಸೋಮವಾರ ಬೆಳಗ್ಗೆ
10.30 ಗಂಟೆಗೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಗಾರದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ದ . ಉಪನಿರ್ದೇಶಕರಾದ ಪುಟ್ಟಸ್ವಾಮಿ ಆರ್
ನೇರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಸಂಘದ ಅಧ್ಯಕ್ಷರಾದ ಡಾ. ಮೋಹನ್
ಜೆ.ವಹಿಸಲಿದ್ದಾರೆ. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನರಸಿಂಹಮೂರ್ತಿ ಬಿ.ಎಚ್. ಜಿಲ್ಲಾ
ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ದೇವೇಂದ್ರಪ್ಪ ಎಸ್. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ
ಅಧ್ಯಕ್ಷರಾದ ಮಲ್ಲೇಶ್ ಬಿ.ಆರ್‍ಸರ್ಕಾರಿ ಪದವಿ ಪೂರ್ವ ಕಾಲೇಜು, ಬೆಳಗಟ್ಟದ ಪ್ರಾಂಶುಪಾಲರಾದ ಲೋಕೇಶ್ ವಿ.ಬಾಲಕರ
ಸರ್ಕಾರಿ ಪದವಿ ಪೂರ್ವ ಕಾಲೇಜು, ಟಿ.ಎನ್. ಕೋಟಿ ಪ್ರಾಂಶುಪಾಲರಾದ ದೇವರಾಜ್ ಜಿ ಡಾ. ಎನ್. ಪ್ರಭಾಕರ ರಾಜ್ಯ ಮಟ್ಟದ
ಸಂಪನ್ಮೂಲ ವ್ಯಕ್ತಿಗಳು ಹಾಗೂ , ಬೆಂಗಳೂರಿನ ಬಸವಗುಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ
ಡಾ. ಎನ್. ಪ್ರಭಾಕರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದು, ಚಿತ್ರದುರ್ಗ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ
ಸಂಘದ ಅಧ್ಯಕ್ಷರಾದ ಮೋಹನ್ ಜೆ. ಕಾರ್ಯದರ್ಶಿಗಳಾದ ಬುಡೇನ್ ಸಾಬ್ ಖಜಾಂಚಿ ಡಾ. ಕವಿತ ಎ.ಭಾಗವಹಿಸಲಿದ್ದಾರೆ.