ನಿತ್ಯ ಭವಿಷ್ಯ| 13 ಆಗಸ್ಟ್ |: ಇಂದು ಈ ರಾಶಿಯವರಿಗೆ ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಬುಧವಾರ, ತಿಥಿ : ಚತುರ್ಥೀ / ಪಂಚಮೀ, ನಿತ್ಯನಕ್ಷತ್ರ : ರೇವತೀ, ಯೋಗ : ಅತಿಗಂಡ, ಕರಣ : ಬವ, ಸೂರ್ಯೋದಯ – 06 – 19 am, ಸೂರ್ಯಾಸ್ತ – 06 – 55 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:37 – 14:12 ಗುಳಿಕ ಕಾಲ 11:03 – 12:37 ಯಮಗಂಡ ಕಾಲ 07:54 – 09:29

ಮೇಷ ರಾಶಿ :

ಸಣ್ಣ ಹೊಣೆಗಾರಿಕೆಯನ್ನು ಜಯಿಸುವುದು ಕಷ್ಟವಾಗಬಹುದು. ಕಾರ್ಯವನ್ನು ಚೆನ್ನಾಗಿ ನಿರ್ವಹಿಸಿದರೂ ಕೊನೆಯಲ್ಲಿ ಏನಾದರೂ ಮಾಡಿಕೊಳ್ಳುವಿರಿ. ಅನುಭವಿ ಜನರಿಂದ ನೀವು ಸಹಕಾರ ಪಡೆಯುವಿರಿ. ಕುಟುಂಬದ ಸಂತೋಷಕ್ಕಾಗಿ ಕೆಲವನ್ನು ತ್ಯಾಗ ಮಾಡಬೇಕಾಗುವುದು. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಬಹುದು. ಕಲಾಪ್ರಪಂಚಕ್ಕೆ ನಿಮ್ಮ ಪ್ರವೇಶವಾಗಲಿದ್ದು, ಹಲವರಿಂದ ನಿಮ್ಮ ಬಗ್ಗೆ ಆಸ್ತೆಯನ್ನು ಕಾಣಬಹುದು. ವೃತ್ತಿಕ್ಷೇತ್ರದಲ್ಲಿ ಇಂದು ಅತಿಯಾದ ಉತ್ಸಾಹ ಬೇಡ. ನಿಮ್ಮ ನಿರೀಕ್ಷೆಗೆ ವಿರುದ್ಧವಾದುದು ನಡೆಯಬಹುದು. ಹಳೆಯ ಬಟ್ಟೆಯನ್ನು ಧರಿಸುವಿರಿ. ಅವಘಡಗಳು ಸಂಭವಿಸಬಹುದು. ಆರ್ಥಿಕ ಅಪಾಯವನ್ನು ತೆಗೆದುಕೊಳ್ಳಬೇಡಿ. ಮೃದು ಮಾತು ನಿಮಗೆ ಪ್ರಯೋಜನವನ್ನು ನೀಡುವುದು. ಕುಟುಂಬದಲ್ಲಿನ ಕಿರಿಕಿರಿ ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ಕ್ರೋಧಕ್ಕೆ ವಶವಾಗಬೇಕಾಗುವುದು. ಯಾವುದೇ ಅನಾಹುತಗಳು ಸಂಭವಿಸಿದಂತೆ ಎಚ್ಚರಿಕೆಯೂ ಬೇಕು.

ವೃಷಭ ರಾಶಿ :

ನ್ಯಾಯಾಲಯದ ಬಗ್ಗೆ ಅಪನಂಬಿಕೆ ಬರಬಹುದು. ನಿಮ್ಮನ್ನು ನಂಬಿ ಬಂದವರಿಗೆ ಬೇಸರಕೊಡುವುದು ಬೇಡ. ಹೊಸತನ್ನು ಹುಡುಕಲು ಆರಂಭಿಸುವಿರಿ. ದಿನವನ್ನು ನೀವು ಆರಾಮವಾಗಿ ಕಳೆಯುವುರಿ. ವೃತ್ತಿಜೀವನದಲ್ಲಿ ನಿಮ್ಮ ಪ್ರಯತ್ನವು ಫಲಕೊಡುವುದು. ನಿಮ್ಮ ನಾಯಕನಿಂದ ನಿಮಗೆ ಬೇಕಾದ ಸಂಪೂರ್ಣ ಬೆಂಬಲ ಸಿಗಲಿದೆ. ವೃತ್ತಿಜೀವನದಲ್ಲಿ ಪ್ರಭಾವ ಎಷ್ಟಿದೆ ಎಂದು ಇಂದು ತಿಳಿಯುವುದು. ಹಣಕಾಸಿನ ಬಗ್ಗೆ ಯಾರನ್ನೂ ನಂಬಿ ಹಣವನ್ನು ಕೊಡುವುದು ಬೇಡ. ನೀವು ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಇಂದು ತೆಗೆದುಕೊಳ್ಳುವ ಸೂಕ್ತ ನಿರ್ಧಾರವು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ದೈನಂದಿನ ಚಟುವಟಿಕೆಗಳ ಬಗ್ಗೆ ನಿಮಗೆ ನಿರಾಸಕ್ತಿ ಇರಲಿದೆ. ವೃತ್ತಿ ಯಲ್ಲಿ ಉದ್ಯೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಿ. ಯಾರನ್ನೂ ಅನವಶ್ಯಕವಾಗಿ ಬದೂರಬೇಡಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಇಂದು ನಿಮಗೆ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುವುದು.

ಮಿಥುನ ರಾಶಿ :

ಪುಣ್ಯನದಿಗಳಲ್ಲಿ ಸ್ನಾನ ಮಾಡುವಿರಿ. ನೀವು ಯಾರನ್ನೂ ನಿರ್ಲಕ್ಷ್ಯದಿಂದ ನೋಡುವುದು ಬೇಡ. ಕುಟುಂಬದಲ್ಲಿ ಬರುವ ಮಾತಿಗೆ ನೀವು ಪ್ರತಿಕ್ರಿಯೆ ಕೊಡುವುದು ಬೇಡ. ನಂಬಿಕೆ ದ್ರೋಹದಿಂದ ನಿಮಗೆ ಬೇಸರವಾಗಲಿದೆ. ಆರ್ಥಿಕವಾದ ಸಬಲತೆಯು ನಿಮಗೆ ಚೈತನ್ಯವನ್ನು ಕೊಡುವುದು. ಕಚೇರಿಯಲ್ಲಿ ಕೆಲಸದ ಒತ್ತಡ ಇಂದು ಅಧಿಕವಾಗಿರಲಿದೆ. ನಿಸ್ಪೃಹರಾಗಿ ದೇವರ ಸೇವೆಯಲ್ಲಿ ತೊಡಗುವಿರಿ. ಬರುವ ಹಣವು ಬಾರದೇ ತಾಳ್ಮೆ ಕಳೆದುಕೊಳ್ಳಬೇಕಾಗುವುದು. ನೂತನ ಗೃಹದ ನಿರ್ಮಾಣದ ಬಗ್ಗೆ ನಿಮಗೆ ಅತ್ಯಂತ ಬಲವಾದ ಬಯಕೆ ಇರಲಿದೆ. ಬಹುನಿರೀಕ್ಷಿತ ಕೆಲಸದ ಯೋಗದಿಂದ ಯಶಸ್ಸಿದೆ. ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಮಿತ್ರರ ಬೆಂಬಲವನ್ನು ಪಡೆಯುವಿರಿ. ಮಾತಿನಲ್ಲಿ ಕಠಿಣ್ಯವನ್ನು ನೀವು ಬೆಳೆಸಿಕೊಳ್ಳುವಿರಿ. ವಿವೇಚನೆಯಿಂದ ನಿಮಗೆ ಬರುವ ಆಪತ್ತಿನಿಂದ ಹೊರಬರಬಹುದು. ವಿವಾಹಕ್ಕೆ ನಿಮ್ಮೆ ದೃಢವಾದ ಮನಸ್ಸು ಇರದು. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ.

ಕರ್ಕಾಟಕ ರಾಶಿ :

ಪರರ ಕಾರಣದಿಂದ ನಿಮಗೆ ಸಂತೋಷ ದೂರಾಗಲಿದೆ. ನಿಮ್ಮ ಅನನುಕೂಲವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ನಿಮ್ಮ ಆದಾಯದ ಮೂಲವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ದಿನ ನೀವು ಗಮನ ಕೊಡದಿದ್ದರೆ, ಅನೇಕ ಉತ್ತಮ ಅವಕಾಶಗಳು ಕಳೆದುಹೋಗಬಹುದು. ಕುಟುಂಬ ಮಹತ್ವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರ ಜೊತೆ ನಿಮ್ಮ ವ್ಯವಹಾರವನ್ನು ಇಟ್ಟುಕೊಳ್ಳಿ. ಸಮಾಜದಿಂದ ಆರ್ಥಿಕವಾದ ಟೀಕೆಗೆ ಗುರಿಯಾಗಬೇಕಾದೀತು‌. ಅನಗತ್ಯ ಮಾತುಗಳನ್ನು ಯಾರ ಮೇಲೂ ಆಡಲು ಹೋಗಬೇಡಿ. ಅಹಂಕಾರವನ್ನು ತಗ್ಗಿಸಿಕೊಂಡು ಎಲ್ಲರ ಜೊತೆ ಇಂದು ಬೆರೆಯಿರಿ. ಅವರಿಂದ ಬೇಕಾದುದನ್ನು ಕೇಳಿ ಪಡೆಯಿರಿ. ಭೂಮಿಯ ವ್ಯವಹಾರವು ಬಹಳ ಕಷ್ಟವೆನಿಸಿ ಬಿಡುವ ಸಾಧ್ಯತೆ ಇದೆ. ವಾಸ್ತವದ ಅರಿವಿನೊಂದಿಗೆ ವ್ಯವಹರಿಸಿ. ಆಪ್ತರನ್ನು ಕಳೆದುಕೊಳ್ಳಬೇಕಾಗುವುದು. ಸಾಲವಾಗಿ ಪಡೆದ ಹಣವನ್ನು ತೀರಿಸುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಹೊಸ ಯೋಜನೆಯು ನಿಮಗೆ ಬರಲಿದೆ.

ಸಿಂಹ ರಾಶಿ :

ಕೋಲಾಹಲದಿಂದ ಶಿರೋವೇದನ ಆರಂಭವಾಗಲಿದೆ. ಆರ್ಥಿಕ ವಿಚಾರಕ್ಕೆ ದಾಂಪತ್ಯದಲ್ಲಿ ಇಂದು ಕಲಹವಾಗುವುದು. ಸಣ್ಣ ಮೊತ್ತವಾದರೂ ಅದನ್ನು ಉಳಿಸುವ ಬಗ್ಗೆ ಯೋಚಿಸುವಿರಿ‌. ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಈ ದಿನ ನಿಮ್ಮ ಸಮಯವು ಬಹಳ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆದುಹೋಗುವುದು. ಅತಿಯಾದ ಆಲೋಚನೆಯಿಂದ ತಲೆನೋವು ಉಂಟಾಗಬಹುದು. ಹೊಸತನ್ನು ಪಡೆಯದಿದ್ದರೂ ಇದ್ದುದನ್ನು ರಕ್ಷಿಸುವುದು ಹೊಣೆಗಾರಿಕೆ ಆಗಿರುವುದು. ಹಿತವಚನವನ್ನು ಅಪಹಾಸ್ಯ ಮಾಡುವುದು ಬೇಡ. ಸಹೋದರರ ನಡುವೆ ಕಲಹವಾಗುವ ಸಾಧ್ಯತೆ ಇದೆ. ದುರಾಸೆಯಲ್ಲಿ ಸಿಕ್ಕಿಕೊಂಡು ನಷ್ಟವನ್ನು ಅನುಭವಿಸುವಿರಿ. ಸ್ತ್ರೀಯರ ಜೊತೆ ಕಲಹ ಬೇಡ. ಸಮಸ್ಯೆಗಳು ಉಂಂಟಾದಾವು. ಸಂಬಂಧಿಕರ ಜೊತೆ ಮನಸ್ತಾಪ ಏಳಬಹುದು. ಈ ಕಾರಣಕ್ಕೆ ನಿಮ್ಮ ಕೆಲಸಕ್ಕೆ ಸಹಾಯವೂ ಸಿಗದೆ ಹೋಗಬಹುದು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು.

ಕನ್ಯಾ ರಾಶಿ :

ನಿಮ್ಮ ಮಾತು ಹೂಡಿಕೆಗೆ ಪೂರಕವಾಗಿರಲಿ. ಇಂದು ನಿಮ್ಮ ಮೇಲೆ ಎಲ್ಲರಿಂದ ಆಕ್ರಮಣವಾಗಬಹುದು. ಆದರೆ ನೀವು ಧೃತಿಗೆಡದೇ ಇಲ್ಲವನ್ನೂ ನಿಭಾಯಿಸವಿರಿ. ನೀವು ಮಾಡದ ಕಾರ್ಯಗಳಿಗೆ ನಿಮ್ಮ ಹಣೆಪಟ್ಟಿ ಬೀಳಬಹುದು. ಅದನ್ನು ಎದುರಿಸುವ ಚಾಕಚಕ್ಯತೆ ನಿಮ್ಮದಾಗಲಿದೆ. ಇಂದು ಜಾಣ್ಮೆಯಿಂದ ಮಾಡಿದ ಕೆಲಸಕ್ಕೆ ನಿಮಗೆ ಮೆಚ್ಚುಗೆ ಸಿಗುವುದು. ನಿಮ್ಮ ತಪ್ಪಿಗೆ ಮತ್ಯಾರನ್ನೋ ಗುರಿ ಮಾಡುವಿರಿ. ಏಕಾಂತದಿಂದ ಮನಸ್ಸು ನಿರಾಳ ಎನಿಸುವುದು. ಆಪ್ತರ ವರ್ತನೆಯಿಂದ ಕೋಪ ಉಂಟಾಗಬಹುದು. ಇಂದು ನೀವು ಭೋಗವಸ್ತುಗಳ ಜೊತೆ ಹೆಚ್ಚು ಕಾಲ ಕಳೆಯುವಿರಿ. ಅಲ್ಪ ಪ್ರಯತ್ನದಿಂದ ನೀವು ದೊಡ್ಡ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಪತ್ನಿಯಿಂದ ನೀವು ಶುಭವಾರ್ತೆಯನ್ನು ಕೇಳುವಿರಿ. ಸಾಲವಾಗಿ ತಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಸಾಧ್ಯ ಎನಿಸಿರುವುದನ್ನು ಬಲವಂತವಾಗಿ ಮಾಡುವುದು ಬೇಡ. ಏನನ್ನೋ ಮಾತನಾಡಲು ಹೋಗಿ ಸಿಕ್ಕಿಹಾಕಿಕೊಳ್ಳಬೇಡಿ. ಮನಸ್ಸಿಗೆ ಹಿಡಿಸದ್ದನ್ನು ಪ್ರಯತ್ನ ಪೂರ್ವಕವಾಗಿ ಮಾಡುವುದು ಬೇಡ. ನಿಮ್ಮ ಯೋಜನೆಯನ್ನು ಪ್ರಯೋಗಕ್ಕೆ ತರಲು ಪೂರ್ಣ ಯಶಸ್ಸನ್ನು ಪಡೆಯಲಾರಿರಿ.

ತುಲಾ ರಾಶಿ :

ಸೂಕ್ಷ್ಮ ವಿಚಾರಗಳನ್ನು ನಿರ್ವಹಣೆಗೆ ಹಿರಿಯರನ್ನು ಕಳುಹಿಸುವಿರಿ. ನಿಮ್ಮನ್ನು ಗೌರವಿಸಿಲ್ಲ ಎಂಬ ಅಳುಕು ಕಾಣಿಸುಬಹುದು. ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ಉತ್ತಮ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಲಿದ್ದೀರಿ. ನಿಮ್ಮ ಅಡಿಯಲ್ಲಿ ಬರುವ ನೌಕರರ ನಡವಳಿಕೆಯನ್ನು ಪ್ರಶ್ನಿಸಬೇಕಾದ ಸಂದರ್ಭವು ಬರಬಹುದು. ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಪ್ರೇಮದಲ್ಲಿ ಗೊಂದಲ ಉಂಟಾಗಬಹುದು. ಫಲತಾಂಶ ಸಿಗದೇ ಯಾವ ಕಾರ್ಯಕ್ಕೆ ಮುಂದುವರಿಯಲೂ ಕಷ್ಟವಾಗುವುದು. ಸಹೋದರನ ಪ್ರಗತಿಯಿಂದ ನಿಮಗೆ ಸಂತೋಷವಾಗಲಿದೆ. ನಿಮಗೆ ಪ್ರತಿ ಕಣವೂ ಬಹಳ‌ ಅಮೂಲ್ಯದಂತೆ ಕಾಣಿಸುವುದು. ಅತಿಥಿಗಳ ಆಗಮನವು ನಿಮ್ಮ ಅಂತಸ್ಸತ್ತ್ವನ್ನು ಹೆಚ್ಚಿಸುವುದು. ತಾಯಿಯ ಸಂಬಂಧಿಕರಿಂದ ಉದ್ಯೋಗದ ನಿಮಿತ್ತ ಒತ್ತಡ ಬರಬಹುದು. ದಾಖಲೆಗಳ ಬಗ್ಗೆ ಎಚ್ವರಿಕೆ ಅಗತ್ಯ. ವಿರುದ್ಧ ವಂಚನೆಯ ಆರೋಪವು ಬರಬಹುದು. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ಕೆಲವರಿಗಾಗಿ ಸಮಯವನ್ನು ನೀವು ಮಾಡಿಕೊಳ್ಳಬೇಕಾಗುವುದು.

ವೃಶ್ಚಿಕ ರಾಶಿ :

ವಿವಾಹ ಬೇಡವೆನಿಸಿದ ಸ್ಥಿತಿಯಲ್ಲಿ ಇದ್ದಾಗ ಅಪರಿಚಿತ ಸ್ಥಳದಿಂದ ವಿವಾಹದ ಮಾತುಕತೆಗೆ ಬರಬಹುದು. ಇಂದು ನಿಮ್ಮ ವಿದೇಶ ಪ್ರಯಾಣವು ಸಫಲವಗುವುದುಬೆಂಬ ಭರವಸೆ ಬರಲಿದೆ. ಸ್ವಾಭಿಮಾನವನ್ನು ಮರೆತು ನೀವು ಜೀವನ ಸಾಗಿಸುವುದು ಕಷ್ಟವಾದೀತು. ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ನಿಮ್ಮ ಆರೋಗ್ಯ ಸಮಸ್ಯೆಗೆ ಕಾಳಜಿ ಅತ್ಯವಶ್ಯಕ. ಕಷ್ಟವೆಂದು ಎಲ್ಲವನ್ನೂ ತ್ಯಾಗ ಮಾಡಲಾಗದು. ಸಹೋದ್ಯೋಗಿಯ ಸಲಹೆಯು ವಿರುದ್ಧ ಫಲವನ್ನು ನೀಡಬಹುದು. ಕಾರ್ಯದ ಅಪೂರ್ಣತೆಯು ಮನಸ್ಸಿಗೆ ತೊಂದರೆಯನ್ನು ಕೊಡುವುದು. ಇನ್ನೊಬ್ಬರಿಗೆ ಕಷ್ಟವಾಗುವ ನಿರ್ಧಾರಗಳನ್ನು ಕೈಬಿಡುವುದು ಯೋಗ್ಯ. ಅಪ್ರಬುದ್ಧರ ಮಾತಿಗೆ ಬೇಸರ ಬೇಡ. ವೃತ್ತಿಜೀವನದಲ್ಲಿ ಸವಾಲುಗಳು ಬರಬಹುದು. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ. ಕೇವಲ‌ ನಗುವಿನಿಂದ ಇನ್ಮೊಬ್ಬರನ್ನು ನೀವು ಸೋಲಿಸಬಹುದು.

ಧನು ರಾಶಿ :

ಆದಾಯವನ್ನು ಆರ್ಥಿಕ ವಿಭಾಗಕ್ಕೆ ತೋರಿಸಲಾರಿರಿ. ನೀವು ಕಾರ್ಯದ ಕಾರಣ ಸಹೋದ್ಯೋಗಿಗಳ ಜೊತೆ ದೂರ ಪ್ರಯಾಣಮಾಡಬೇಕಾಗುವುದು. ವಿದ್ಯಾರ್ಥಿಗಳು ತಮ್ಮ ಓದಿನ ಉತ್ಸಾಹವನ್ನು ಕಳೆದುಕೊಳ್ಳುವರು. ಸಾಮಾಜಿಕ ಗೌರವವು ಸಿಗುವಂತಹ ಕೆಲಸವನ್ನು ನೀವು ಮಾಡುವಿರಿ. ವೃತ್ತಿಯ ಆಧಾರದ ಮೇಲೆ ಸಾಲ ಪಡೆಯುವಿರಿ. ಇನ್ನೊಬ್ಬರನ್ನು ಬದಲಾಯಿಸುವ ಬದಲು ನೀವೇ ಬದಲಾಗಿ. ಹೊಸ ನಿರೀಕ್ಷೆಗಳು ನಿಮಗೆ ಸಂತೋಷವನ್ನು ತರುತ್ತವೆ. ಎದುರಾಳಿಯನ್ನು ಸೋಲಿಸಲು ನೀವು ಯೋಜನೆಗಳನ್ನು ಮಾಡುವಿರಿ. ಸಂತೋಷವನ್ನು ಹಂಚಿಕೊಳ್ಳಲು ಹೋಗಿ ದುಃಖಿಸಬೇಕಾಗುತ್ತದೆ. ಇಂದು ನೀವು ಅನಾದರಕ್ಕೆ ಒಳಗಾಗಬಹುದು. ಮಕ್ಕಳಿಂದ‌ ಸಂತೋಷವಾರ್ತೆ ಬರಲಿದೆ. ಹೊಸತನ್ನು ಏನಾದರೂ ಹುಟ್ಟುಹಾಕುವ ಹಂಬಲ ಅಧಿಕವಾಗುವುದು. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ವಸ್ತುಗಳನ್ನು ಸದುಪಯೋಗ ಮಾಡಲು ಕಲಿಯಬೇಕಾಗುವುದು.

ಮಕರ ರಾಶಿ :

ಸಂವಹನಕ್ಕೆ ಸಂಬಂಧಿಸಿದ ಕಾರ್ಯವು ಪೂರ್ಣ ಫಲಪ್ರದವಾಗದು. ನಿಮಗೆ ಅನ್ಯರ ಮಾತು ಬಹಳ ಹಿತವೆನಿಸವುದು. ನಿಮಗೆ ಇಂದು ಅವ್ಯಕ್ತ ಭಯವು ಕಾಡುವುದು. ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಇಂದು ನಿಮ್ಮ ಕುಟುಂಬದಲ್ಲಿ ನೆಮ್ಮದಿ ಇರಲಿದೆ. ವೆಚ್ಚವನ್ನು ನಿಯಂತ್ರಿಸಿ, ಆರ್ಥಿಕ ಲಾಭವನ್ನು ಪಡೆಯುವಿರಿ. ಯಾಂತ್ರಿಕ ಜೀವನಕ್ಕೆ ತಿಲಾಂಜಲಿ ನೀಡುವಿರಿ. ನಿಮ್ಮ ಒಂದು ತಪ್ಪು ನಿರ್ಧಾರವು ನಿಮ್ಮ ಆರ್ಥಿಕತೆಯನ್ನು ಸಡಿಲಿಸಬಹುದು. ಉತ್ಸಾಹ ಭಗಂವು ವೃತ್ತಿಯಲ್ಲಿ ಆಗುವುದು. ನಿಮಗೆ ಸಿಗಬೇಕಾದುದನ್ನು ಧೈರ್ಯದಿಂದ ಕೇಳಿ ಪಡೆದುಕೊಳ್ಳುವಿರಿ. ಸುತ್ತಲಿನ ವಾತಾವರಣದಿಂದ ಕಿರಿಕಿರಿಯಾಗಲಿದೆ.‌ ನಿಮ್ಮ ಉದ್ವೇಗದ ಮಾತು ಅಪಹಾಸ್ಯಕ್ಕೆ ತುತ್ತಾಗಬಹುದು. ಅನ್ನಿಸಿದ್ದನ್ನು ಅರೆಕ್ಷಣದಲ್ಲಿ ಹೇಳುವಿರಿ. ಸಂಗಾತಿಯ ಜೊತೆ ಹರಟೆ ಹೊಡೆಯುವಷ್ಟು ಅವಕಾಶ ಸಿಗುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು. ಸಂಗಾತಿಯಿಂದ ಮಾನಸಿಕ ಕಿರಿಕಿರಿ ಅಧಿಕವಾಗುವುದು.

ಕುಂಭ ರಾಶಿ :

ಹೊಸ ಉದ್ಯೋಗದಲ್ಲಿ ನಿಮಗೆ ಆರಾಮ‌ವೆನಿಸುವ ವಾತಾವರಣ ಇರುವುದು. ಇಂದು ವಿದ್ಯಾರ್ಥಿಗಳಿಗೆ ಶ್ರಮವು ನಿರ್ಥಕ ಎನಿಸಬಹುದು.‌ ನಿಮ್ಮ ಇಷ್ಟದ ವಸ್ತುಗಳನ್ನು ಪಡೆಯುವ ಖುಷಿಯೇ ಬೇರೆ. ನಿಮಗೆ ಉದ್ಯೋಗದಲ್ಲಿ ಬಡ್ತಿಯಿಂದ ಸಂತೋಷವು ಇಮ್ಮಡಿಸುವುದು. ನಿಮ್ಮ ನಿರ್ಧಾರಗಳು ಇಂದು ಈಡೇರಬಹುದು. ಸವಾಲುಗಳನ್ನು ಬಹಳ ಜಾಣ್ಮೆಯಿಂದ ಸ್ವೀಕರಿಸಬೇಕು‌ ಮತ್ತು ಎದುರಿಸಬೇಕು. ವೃತ್ತಿಜೀವನದಲ್ಲಿ ಅಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು. ನೀವು ಮಾಡಿದ ದಾನ ಇತರರಿಗೆ ಗೊತ್ತಾಗದಂತೆ ಇರುವಿರಿ. ನಿಮ್ಮ ಅಹಂಕಾರದಿಂದ ಇತರರಿಗೆ ಅಗೌರವವನ್ನು ಕೊಡುವುದು ಬೇಡ. ಸಂಗಾತಿಯ ಮಾತನ್ನು ವಿರೋಧಿಸುವಿರಿ. ನೀವು ಉಪಾಯದ ಜೊತೆ ಅಪಾಯವನ್ನು ಯೋಜನೆಯಲ್ಲಿ ಚಿಂತಿಸುವ ಅಗತ್ಯ ಬರುವುದು. ಎಲ್ಲರನ್ನೂ ಸಮಾಧಾನ ಮಾಡಲಾಗದು. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ.

ಮೀನ ರಾಶಿ :ಸಾಮಾಜಿಕ‌ ಕಾರ್ಯದಲ್ಲಿ ಜನಪ್ರಿಯತೆ ಆಕಸ್ಮಿಕವಾಗಿ ಬರುವುದು. ವ್ಯವಹಾರದ ವಿಚಾರದಲ್ಲಿ ಪೂರ್ವಾಪರ‌ ವಿವೇಚನೆಯಿಂದ ಮುಂದುವರಿಯುವುದು ಉತ್ತಮ. ನೀವು ಬಂಧುಗಳಿಂದ ಯಾವುದಾದರೂ ಸಹಾಯವನ್ನು ಬಯಸುವಿರಿ. ನೀವು ಇಂದು ವೃತ್ತಿಯನ್ನು ಬದಲಿಸುವ ನಿರ್ಧಾರ ಮಾಡಲಿದ್ದೀರಿ. ಕಛೇರಿಯಲ್ಲಿ ಏರು ದನಿಯಿಂದ ಕೆಲಸ ಮಾಡಿಸಿಕೊಳ್ಳುವಿರಿ. ನಿಮ್ಮ ವೃತ್ತಿಕ್ಷೇತ್ರದಲ್ಲಿ ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗಲಿದೆ. ಕಷ್ಟಕ್ಕೆ ಇಂದು ಫಲವು ಸಿಗಲಿದೆ. ನಿಮ್ಮ ಆತಂಕವೂ ದೂರವಾಗಬಹುದು. ತಂದೆಯ ಪ್ರೀತಿಯು ನಿಮಗೆ ಸಿಗಲಿದೆ. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತಿರುತ್ತದೆ. ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಿರಿ. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ಸಕಾರಾತ್ಮಕ ಯೋಚನೆಗಳೂ ನಿಮಗೆ ಬಾಧೆಯನ್ನು ತರುವುದುಂಟು.

Views: 47

Leave a Reply

Your email address will not be published. Required fields are marked *