ಈದ್-ಉಲ್-ಅಧಾ ವನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇಸ್ಲಾಂನಲ್ಲಿ ಪವಿತ್ರ ಮತ್ತು ಪ್ರಮುಖ ಹಬ್ಬ.

Eid-ul-Adha 2025 : ಬಕ್ರೀದ್‌ ಹಬ್ಬದ ಸಮಯದಲ್ಲಿ ಮೇಕೆಯನ್ನು ಬಲಿ ನೀಡುವುದು ವಾಡಿಕೆ. ಆದರೆ ಬಲಿ ನೀಡುವ ಮೊದಲು ಆಡಿನ ಹಲ್ಲುಗಳನ್ನು ಎಣಿಸಲಾಗುತ್ತದೆ.. ಈ ವಿಚಾರ ಅಷ್ಟಾಗಿ ಬಹಳ ಜನರಿಗೆ ತಿಳಿದಿಲ್ಲ. ಮುಸ್ಲಿಂ ಬಾಂಧವರು ಮೇಕೆಯನ್ನು ಬಲಿ ನೀಡುವ ಮೊದಲಿ ಈ ಪದ್ದತಿಯನ್ನು ಏಕೆ ಪಾಲಿಸುತ್ತಾರೆ ಗೊತ್ತೆ..?

Eid ul Adha 2025 history : ಈದ್-ಉಲ್-ಅಧಾ (ಈದ್-ಉಲ್-ಅಧಾ)ವನ್ನು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇಸ್ಲಾಂನಲ್ಲಿ ಪವಿತ್ರ ಮತ್ತು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳ 10ನೇ ದಿನದಂದು ಈ ಹಬ್ಬವನ್ನು ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. 

ಈ ದಿನದಂದು, ಮೇಕೆ ಅಥವಾ ಇತರ ಪ್ರಾಣಿಗಳನ್ನು ಬಲಿ ನೀಡಲಾಗುತ್ತದೆ. ಆದರೆ ಈ ದಿನದ ಬಗ್ಗೆ ಒಂದು ನಂಬಿಕೆ ಇದೆ, ಅದು ಜನರನ್ನು ಅಚ್ಚರಿಗೊಳಿಸುತ್ತದೆ. ಬಕ್ರಿದ್‌ ದಿನದಂದು ಬಲಿ ಕೊಡುವ ಮೊದಲು ಮೆಕೆಯ ಹಲ್ಲುಗಳನ್ನು ಎಣಿಸಲಾಗುತ್ತದೆ. ಈ ವಿಚಾರ ಕೆಲವೇ ಕೆಲವು ಜನರಿಗೆ ಗೊತ್ತು..

ಹಾಗಾದ್ರೆ, ಬಲಿಗೂ ಮುನ್ನ ಮೇಕೆಯ ಹಲ್ಲುಗಳನ್ನು ಏಕೆ ಏಣಿಸಲಾಗುತ್ತದೆ..? ಈ ಸಂಪ್ರದಾಯವು ಕೇವಲ ಧಾರ್ಮಿಕ ಕಾರಣಗಳಿಗಾಗಿ ಅಲ್ಲ, ಬದಲಾಗಿ ಒಂದು ಪ್ರಮುಖ ಅರ್ಥವನ್ನು ಹೊಂದಿದೆ. ಇಸ್ಲಾಂ ಪ್ರಕಾರ, ನಿರ್ದಿಷ್ಟ ವಯಸ್ಸಿನ ಮತ್ತು ಉತ್ತಮ ಆರೋಗ್ಯ ಹೊಂದಿರುವ ಮೇಕೆಯನ್ನು ಮಾತ್ರ ಬಕ್ರೀದ್ ದಿನದಂದು ಬಲಿ ನೀಡಲು ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಹಿನ್ನಲೆ : ಅಲ್ಲಾಹನ ಆಜ್ಞೆಯ ಮೇರೆಗೆ ಹಜರತ್ ಇಬ್ರಾಹಿಂ ತನ್ನ ಮಗ ಇಸ್ಮಾಯಿಲ್ ನನ್ನು ಬಲಿ ನೀಡಲು ನಿರ್ಧರಿಸಿದ ಘಟನೆಯ ಸ್ಮರಣಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ತ್ಯಾಗವನ್ನು ಅಲ್ಲಾಹನ ಮೇಲಿನ ಸಂಪೂರ್ಣ ನಂಬಿಕೆ ಮತ್ತು ಸಮರ್ಪಣೆಯ ಸಂಕೇತವೆಂದು ಪರಿಗಣಿಸಲಾಗಿದೆ.

Zee News

Leave a Reply

Your email address will not be published. Required fields are marked *