ಟಿವಿ ರಿಮೋಟ್ ವಿಚಾರಕ್ಕೆ ಇಬ್ಬರು ಮಕ್ಕಳ ನಡುವೆ ಗಲಾಟೆ ನಡೆದಿದ್ದು, ಇದರಿಂದ ಕೋಪಗೊಂಡ ತಂದೆ ಎಸೆದಿದ್ದ ಕತ್ತರಿ ಹಿರಿಮಗನನ್ನು ಬಲಿಪಡೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ, (ಅಕ್ಟೋಬರ್ 15): ‘ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು’ ಮಾತೇ ಇದೆ. ಒಂದು ವೇಳೆ ಸಿಟ್ಟಿನ ಕೈಗೆ ಬಿದ್ಧಿ ಕೊಟ್ಟರೆ ಏನೆಲ್ಲಾ ಅನಾಹುತ ಆಗಬಹುದು ಎನ್ನುವುದಕ್ಕೆ ಈ ಸುದ್ದಿ ಉದಾಹರಣೆ. ಹೌದು….ಟಿವಿ ರಿಮೋಟ್ಗಾಗಿ ಅಣ್ಣ-ತಮ್ಮನ ನಡುವೆ ಜಗಳ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದ ತಂದೆ ಕೈಗೆ ಸಿಕ್ಕ ಕತ್ತರಿಯನ್ನು ಜೋರಾಗಿ ಎಸೆದಿದ್ದು, ಅದು ಹೋಗಿ ಹಿರಿಮಗ ಚಂದ್ರಶೇಖರ್ ಕುತ್ತಿಗೆಗೆ ಬಿದ್ದು ಮೃತಪಟ್ಟಿದ್ದಾನೆ. ಈ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಂದ್ರಶೇಖರ್ (16) ಅಪ್ಪನ ಕೋಪಕ್ಕೆ ಬಲಿಯಾದ ಯುವಕ.
ಚಂದ್ರಶೇಖರ್(16), ಸಹೋದರ ಪವನ್ (14) ಟಿವಿ ರಿಮೋಟ್ ಗಾಗಿ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಲಕ್ಷ್ಮಣಬಾಬು, ಕೈಗೆ ಸಿಕ್ಕ ಕತ್ತರಿ ಎಸೆದಿದ್ದಾನೆ. ಅದು ನೇರವಾಗಿ ಹೋಗಿ ಹಿರಿಮಗ ಚಂದ್ರಶೇಖರ್ನ ಕುತ್ತಿಗೆಗೆ ತಾಗಿದೆ. ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಚಂದ್ರಶೇಖರ್ ಮೃತಪಟ್ಟಿದ್ದಾನೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1