ನಿತ್ಯ ಭವಿಷ್ಯ: 14 ಅಕ್ಟೋಬರ್: ನಿಮ್ಮ ಕುಶಲಕಾರ್ಯಗಳು ಎಲ್ಲರಿಗೂ ಇಷ್ಟವಾದೀತು.

ಅಕ್ಟೋಬರ್​ 14: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪುಷ್ಯಾ, ಯೋಗ : ಹರ್ಷಣ, ಕರಣ : ಬಾಲವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:03 – 16:31, ಗುಳಿಕ ಕಾಲ 12:05 – 13:34 ಯಮಗಂಡ ಕಾಲ 09:08 – 10:37

ಮೇಷ ರಾಶಿ: ವಾಹನದ ಚಾಲನೆಯಲ್ಲಿ ಸಿಟ್ಟಾಗುವಿರಿ. ತಾಯಿಯ ಪ್ರೀತಿಯು ನಿಮಗೆ ಉತ್ಸಾಹವನ್ನು ಕೊಡುವುದು. ನಿಮಗೆ ನಂಬಿಕೆಯ ಮೇಲೆ ಆದ ಪ್ರಹಾರವನ್ನು ಸಹಿಸಲಾಗದು. ಆರ್ಥಿಕತೆಯ ಮೇಲೆ ಹಿಡಿತ ಸಾಧಿಸದಿದ್ದರೆ ಕಷ್ಟವಾಗುತ್ತಿತ್ತು. ವೈವಾಹಿಕ ಜೀವನವು ನೆಮ್ಮದಿಯಿಂದ ಇರುವುದು. ಅನಗತ್ಯ ವಿಚಾರಗಳನ್ನು ಚರ್ಚಿಸುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ಮಗ್ನರಾಗುವುದು ಉತ್ತಮ. ಪ್ರಿಯಕರನ‌ ಜೊತೆ ಸುತ್ತಾಟ ಮಾಡುವಿರಿ. ಸಣ್ಣ ಸಂಪತ್ತನ್ನೂ ನಿರಾಕರಿಸಲಾರಿರಿ. ಉದ್ಯೋಗದಲ್ಲಿ ಎಂದಿಗಿಂತ ಹೆಚ್ಚಿನ ಸಂತಸವಿರುವುದು. ಪ್ರೀತಿಯ ಮಾತಿನಿಂದ ಇಂದಿನ ನಿಮ್ಮ ಕೆಲಸವು ಆಗುವುದು. ಚಿತ್ತಚಾಂಚಲ್ಯವು ನಿಮ್ಮ ಕಾರ್ಯದ ವೇಗವನ್ನು ಕಡಿಮೆ‌ಮಾಡಿಲುವುದು. ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು. ಮಕ್ಕಳ ಅವಿನಯವನ್ನು ಸರಿಮಾಡಲು ಪ್ರಯತ್ನ ಮಾಡುವಿರಿ. ಅನುರೂಪವಾದ ಸಂಗಾತಿಯು ನಿಮಗೆ ಸಿಗುವರು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಎಲ್ಲ ಮೋಡಗಳೂ ನಿಮಗೆ ಮಳೆಯನ್ನು ಸುರಿಸದು.

ವೃಷಭ ರಾಶಿ: ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಲಿದ್ದು, ಮನೆಯಲ್ಲಿ ಔಷಧಿ ಮಾಡಿಸಿಕೊಳ್ಳಿ. ನೇರ ಮಾತು ಎದುರಿನವರಿಗೆ ಕಹಿಯಾಗಲಿದೆ. ಇಂದು ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು ನಿಮಗೆ ಬೇಸರವನ್ನು ತರಿಸುವುದು. ಮಕ್ಕಳ‌ ಮುಂದಿನ ವಿದ್ಯಾಭ್ಯಾಸಕ್ಕೆ ಸರಿಯಾದ ಮಾರ್ಗವನ್ನು ಹಾಕಿಕೊಡುವಿರಿ. ಅಪೂರ್ಣವಾಗಿರುವ ಕಛೇರಿಯ ಕೆಲಸಗಳು ಇಂದು ಮುಗಿಸುವ ಕೆಲಸವನ್ನು ಮಾಡುವಿರಿ. ಧೈರ್ಯದಿಂದ ಇರುವ ನಿಮಗೆ ಹೇಡಿತನ ಆವರಿಸುವುದು. ನಿಮ್ಮದೇ ಆದೇ ಯೋಜನೆಗಳು ಕಾರ್ಯದ ವೇಗವನ್ನು ಹೆಚ್ಚಿಸಲು ಸಾಧ್ಯವಾಗುವುದು. ಆಸ್ತಿಯ ವಿಚಾರವಾಗಿ ವಾಗ್ವಾದಗಳು ಸಲ್ಲದು. ಕಾನೂನಿನ ಪಾಠವು ಅನುಭವದ ಮೂಲಕ ಆಗಲಿದೆ. ಒಂದೇ ವಿಚಾರದ ಬಗ್ಗೆ ಅಧಿಕ ಚಿಂತನೆಯನ್ನು ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ. ನೂತನ ವಸ್ತುಗಳ ಖರೀದಿಯಿಂದ ವಂಚಿತರಾಗುವಿರಿ. ನಿಮ್ಮ ವಿಶ್ರಾಂತ ಸ್ಥಿತಿಯನ್ನು ಇತರರು ಹಾಸ್ಯ ಮಾಡಬಹುದು. ಸಂಗಾತಿಯ ಮೇಲೆ‌ ಪ್ರೀತಿಯು ಹೆಚ್ಚಾಗಬಹುದು.

ಮಿಥುನ ರಾಶಿ: ವೃತ್ತಿಯಲ್ಲಿ ಉನ್ನತ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ನಿಮ್ಮದೇ ಸರಿ ಎನ್ನುವ ಅಹಂಭಾವ ಬಿಟ್ಟರೆ ನೆಮ್ಮದಿಯೂ ನಿಮ್ಮದೇ. ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ನಿಮ್ಮವರ ಭಾವನೆಗಳಿಗೆ ಬೆಲೆ ಕೊಡಿ. ದೂರ ಪ್ರಯಾಣವು ಸುಖಕರವಾಗುವುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ಸಲೀಸಾಗಿ ಮುಗಿಯುವುದು. ಕೃಷಿಯಲ್ಲಿ ತೊಡಗಿಕೊಂಡವರು ಹೊಸ ಆವಿಷ್ಕಾರವನ್ನು ಮಾಡುವರು. ನಿಮ್ಮ ವಿಶ್ವಾಸಕ್ಕೆ ಸರಿಯಾದ ಫಲಿತಾಂಶವು ಸಿಗುವುದು. ಸರ್ಕಾರದಿಂದ ಬರುವ ಹಣವು ಕಡಿಮೆಯಾಗಲಿದ್ದು, ಬಂದಷ್ಟಕ್ಕೆ ತೃಪ್ತಿಪಡುವಿರಿ. ಗೆಳೆತನವು ಕಲಹದಲ್ಲಿ ಮುಕ್ತಾಯವಾಗುವುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವು ಆಗಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಣಿಸುವುದು. ಇನ್ನೊಬ್ಬರನ್ನು ದೂರುವ ಅಭ್ಯಾಸವನ್ನು ಬಿಡುವುದು ಒಳ್ಳೆಯದು. ನಿಮ್ಮ ಮಾತುಗಳೇ ತಿರುಗಿಬರಬಹುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಸಂಕೀರ್ಣತೆಯನ್ನು ನೀವು ಕಡಿಮೆ‌ ಮಾಡಿಕೊಂಡರೆ ಉತ್ತಮ.

ಕರ್ಕಾಟಕ ರಾಶಿ: ನಿಮಗೆ ನೀಡುವ ಉತ್ತೇಜನ ಯಾವ ರೀತಿಯದ್ದು ಎನ್ನುವ ಕಲ್ಪನೆ ಇರಲಿ. ಸಂಗಾತಿಯ ಎಲ್ಲ ಮಾತಿಗೂ ನಿಮ್ಮ ಒಮ್ಮತ ಇರದು. ಇದು ಕಲಹಕ್ಕೆ ಕಾರಣವಾಗಬಹುದು. ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ಕಲಾವಿದರಿಗೆ ವೃತ್ತಿಯಲ್ಲಿ ಗೌರವ ಸಿಗುವುದು. ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವಿರಿ. ಕಛೇರಿಯ ಒತ್ತಡದ ಕೆಲವು ನಿಮಗೆ ಕಷ್ಟವಾದೀತು. ಗೆಲುವು ನಿಮ್ಮದಾದರೂ ಗೆಲ್ಲುವ ದಾರಿ ನಿಮ್ಮದಲ್ಲ. ಗೌರವವನ್ನು ಸಂಪಾದಿಸುವ ಪ್ರಯತ್ನದಲ್ಲಿ ಇರುವಿರಿ. ಪ್ರಯಾಣದಲ್ಲಿ ನಿಮ್ಮ ವಸ್ತುಗಳು ಕಾಣೆಯಾಗಲಿವೆ. ಹಿತಶತ್ರುಗಳಿಂದ ನಿಮ್ಮ ಮನಸ್ಸು ನೆಮ್ಮದಿಯಿಂದ ಇರದು. ಹೊಸ ವಿಚಾರಗಳು ನಿಮಗೆ ಆಸಕ್ರಿಯನ್ನು ಮೂಡಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯು ಆಗುವುದು. ಅವರ ಪ್ರಭಾವದಿಂದ‌ ನಿಮಗೆ ಉನ್ನತ ಸ್ಥಾನವೂ ಪ್ರಾಪ್ತವಾಗುವುದು. ತಪ್ಪು ಮಾರ್ಗವನ್ನು ನೀವು ಅರಿವಿಲ್ಲದೇ ಪ್ರವೇಶಿಸುವುರಿ. ಪ್ರಯಾಣದ ಅಡೆತಡೆಯು ನಿಮಗೆ ಕೋಪ ತರಿಸಬಹುದು.

ಸಿಂಹ ರಾಶಿ: ವ್ಯವಹಾರದಲ್ಲಿ ತೊಡಗಿದ್ದರೆ ಸಿಟ್ಟಿನಿಂದ ಇರದೇ ತಾಳ್ಮೆಯಿಂದ ಪಡೆಯುವುದನ್ನು ಪಡೆಯುವಿರಿ. ಧಾರ್ಮಿಕ ಮುಖಂಡರ ಅಧಿಕಾರದ ವಿಚಾರದಲ್ಲಿ ಗೊಂದಲ ಉಂಟಾಗುವುದು.‌ ನಿಮ್ಮ ಪ್ರತಿಷ್ಠೆಗಳಿಂದ ಯಾರಿಗೂ ತೊಂದರೆಯಾಗದು. ನೀವು ಉಢಾಫೆ ಮಾಡುವ ಸಂಗತಿಗಳೇ ನಿಮಗೆ ಅಂಟಿಕೊಳ್ಳುವುದು. ನಿಮ್ಮ ಯೋಜನೆಯ ಕೆಲಸಗಳಿಗೆ ವಿಘ್ನಗಳು ಬರುವುದು. ಸರಿಯಾದ ಮಾಹಿತಿಯ ಕೊರತೆ ಕಾಣುವುದು. ಯಾರೂ ನಿಮಗೆ ಸರಿಯಾಗಿ ಸ್ಪಂದಿಸದೇ ಇರುವವರು. ನೇರವಾದ ಮಾತು ನಿಮಗೆ ಖುಷಿಕೊಡಬಹುದು. ಎಲ್ಲ ಕಡೆಗಳಲ್ಲಿ ವಿಳಂಬವಾದಂತೆ ತೋರುವುದು. ಮಾತಿನ ಜಾಣ್ಮೆಯಿಂದ ಖರ್ಚನ್ನು ಕಡಿಮೆ‌ಮಾಡಿಕೊಳ್ಳುವಿರಿ. ಇದೆಲ್ಲವೂ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡಬಹುದು. ಪ್ರಭಾವೀ ವ್ಯಕ್ತಿಗಳ ಸಹಾಯವನ್ನು ಪಡೆದುಕೊಳ್ಳುವ ಸಂದರ್ಭವು ನಿಮಗೆ ಬರಬಹುದು. ಕೆಲವನ್ನು ಹೊಂದಿಸಿಕೊಂಡು ಹೋಗುವುದು ಅನಿವಾರ್ಯ. ವಾಹನವನ್ನು ಬದಲಾಯಿಸಿ ಹೊಸ ವಾಹನವನ್ನು ಖರೀದಿಸುವಿರಿ. ನಿಮ್ಮದಲ್ಲದ ವಸ್ತುವನ್ನು ಪಡೆದುಕೊಂಡು ಕಷ್ಟಪಡುವಿರಿ.

ಕನ್ಯಾ ರಾಶಿ: ಸಾಮಾಜಿಕ ಕಳಕಳಿಗೆ ವಿದ್ಯಾರ್ಥಿಗಳು ಸ್ಪಂದಿಸುವರು. ಬೇಕಾದಷ್ಟು ವಿಶ್ರಾಂತಿ ಪಡೆದು ಕಾರ್ಯದಲ್ಲಿ ಪ್ರವೃತ್ತರಾಗಿ. ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ಮಕ್ಕಳ ವಿವಾಹಕ್ಕೆ ನೀವು ತಿರುಗಾಟ ಮಾಡಬೇಕಾಗಬಹುದು. ನಿಮ್ಮ ಶಿಸ್ತಿನ ಕೆಲಸಕ್ಕೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ನಿಮ್ಮ ವರ್ತನೆಯಿಂದ ಬಂಧುಗಳು ಅಸಮಾಧಾನಗೊಳ್ಳುವರು. ಸರ್ಕಾರದಿಂದ ಆಗಬೇಕಾದ ಕೆಲಸಗಳು ಬೇಗ ಆಗುವುವು. ನಿಮ್ಮ ಹಣವನ್ನು ಯೋಗ್ಯವಾದ ಸ್ಥಳದಲ್ಲಿ ಹೂಡಿಕೆ ಮಾಡುವಿರಿ. ಸಾಹಸವನ್ನು ಮಾಡಲು ಹೋಗುವುದು ಬೇಡ. ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ನೀವು ನೆನಪಿಸಿಕೊಂಡು ಅವರ ಜೊತೆ ಮಾತನಾಡುವಿರಿ‌. ಹಣದ ಖರ್ಚಿಲ್ಲದೇ ಪ್ರಯಾಣ ಮಾಡಿ ಸಿಕ್ಕಿಬೀಳುವಿರಿ. ಕೆಲವರಿಂದ ನಿಮ್ಮ ವಿದ್ಯಾರ್ಜನೆಯ ದಿಕ್ಕನ್ನು ತಪ್ಪಿಸುವ ಪ್ರಯತ್ನ ನಡೆಯುವುದು. ಅಪರಿಚಿತರ ಜೊತೆ ಮಾತುಕತೆಗಳು ಮಿತಿಯಲ್ಲಿ ಇರಲಿ. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ.

ತುಲಾ ರಾಶಿ; ನಿಮ್ಮ ಗೆಲುವನ್ನು ಸಾತ್ವಿಕವಾಗಿ ಸಂಭ್ರಮಿಸಿ. ನಿಮ್ಮ ಮರೆವಿನಿಂದ ಕೆಲವು ಮುಖ್ಯವಾದ ವಸ್ತುವನ್ನೇ ಕಳೆದುಕೊಳ್ಳಬಹುದು. ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ರಾಜಕೀಯವನ್ನೇ ತಮ್ಮ ಕಾರ್ಯಕ್ಷೇತ್ರವನ್ನು ಮಾಡಿಕೊಂಡವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಎಲ್ಲವನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರೂ ಅಲ್ಪ ಲಾಭವಾಗುವುದು. ಆಡಳಿತದ ಠೀವಿಯನ್ನು ಹೊಸದರಲ್ಲಿಯೇ ಇಟ್ಟುಕೊಳ್ಳಬೇಕು. ಪ್ರೀತಿಯನ್ನು ನೀವು ಆಟದಂತೆ ಆಡುವಿರಿ. ವಿದ್ಯಾರ್ಥಿಗಳು ವ್ಯರ್ಥ ತಿರುಗಾಟವನ್ನು ಮಾಡಬೇಕಾಗುವುದು. ಖರೀದಿಸಲು ಇಚ್ಛಿಸುವವರು ಉತ್ತಮ ಭೂಮಿಯನ್ನು ಪಡೆಯುವ ಸಾಧ್ಯತೆ ಇದೆ. ಇದಕ್ಕೆ ಬಂಧುವರ್ಗದಿಂದ ಬೇಕಾದ ಸಹಾಯವೂ ಸಿಗುವುದು. ನಿಮ್ಮ ಪರಿಶ್ರಮದ ಕೆಲಸಗಳು ನಿರರ್ಥಕವಾಗುವುದು. ಪ್ರಶಂಸೆಯೂ ಸಿಗದೇ ಇರುವುದು ನಿಮಗೆ ಬೇಸರವನ್ನು ತಂದೀತು. ವಿನಾಕಾರಣದ ನಿಮ್ಮವರನ್ನು ನೋಯಿಸಿ ಪಶ್ಚಾತ್ತಪಪಡುವಿರಿ.

ವೃಶ್ಚಿಕ ರಾಶಿ: ವಾಕ್ಚಾತುರ್ಯದಿಂದ ಎಲ್ಲರನ್ನೂ ನಗಿಸುವಿರಿ. ಏಕಾಗ್ರತೆಯನ್ನು ನೀವು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಜವಾಬ್ದಾರಿಗಳು ನಿಮಗೆ ಭಾರವೆನಿಸಿ ಅದನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ. ನಿಮಗೆ ಸಿಕ್ಕ ಜವಾಬ್ದಾರಿಗಳು ಅಸಮಾಧಾನವನ್ನು ಉಂಟುಮಾಡುವುದು. ಯಾರ ಜೊತೆಯೂ ಬೆರೆಯುವ ಮನಸ್ಸಾಗದು. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಮಯ ಬೇಕಾಗುವುದು. ನಿಮ್ಮ ನೆಮ್ಮದಿಯನ್ನು ಕಂಡು ಇತರರು ಅಪರೋಕ್ಷವಾಗಿ ತೊಂದರೆ ಕೊಡುವರು. ಎಲ್ಲ ವಿಚಾರಗಳಿಗೂ ನಿಮ್ಮನ್ನು ಬೆರಳು ಮಾಡಿ ತೋರಿಸುವರು. ನಿಮ್ಮ ಮಾಧ್ಯಮದ ಉದ್ಯೋಗಿಗಳು ಹೆಚ್ಚಿನ ಆದಾಯವನ್ನು ಪಡೆಯುವರು. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸುವಿರಿ. ನೀವು ಇಂದು ಬಹಳ‌ ಬೇಡಿಕೆ ಉಳ್ಳವರಾಗಿರುವಿರಿ. ಯಾರದೋ ಮಾತಿಗೆ ಉದ್ವೇಗಕ್ಕೆ ಒಳಗಾಗುವಿರಿ. ನಿಮ್ಮ ಕುಶಲಕಾರ್ಯಗಳು ಎಲ್ಲರಿಗೂ ಇಷ್ಟವಾದೀತು. ತಂದೆಯ ಮಾತನ್ನು ಗೌರವಿಸುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ.

ಧನು ರಾಶಿ: ಕಫದ ಆಧಿಕ್ಯದಿಂದ ಆರೋಗ್ಯ ವ್ಯತ್ಯಾಸವಾಗಲಿದೆ. ನಿರ್ಲಕ್ಷ್ಯ ಮಾಡಿಕೊಳ್ಳದೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಮಾಡಿಕೊಳ್ಳುವುದು ಉತ್ತಮ. ನಿಮ್ಮ ದೂರದೃಷ್ಟಿಯಿಂದ ನಿಮ್ಮ ಗುರಿ ಬದಲಾಗುವುದು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಸ್ತ್ರೀಯರ ವಿಷಯದಲ್ಲಿ ನೀವು ಬಹಳ ಜಾಗರೂಕತೆಯಿಂದ ವ್ಯವಹರಿಸುವುದು ಉತ್ತಮ. ನಿಮಗೆ ಬರಬೇಕಾದ ಹಣವು ಬಾರದೇ ಹೋಗಬಹುದು. ಕೇಳಿ ಪಡೆಯಬೇಕಾದ ಸ್ಥಿತಿಯೂ ಬರಬಹುದು. ಅಜಾಡ್ಯದಿಂದ ನಿಮ್ಮ ಕಾರ್ಯವನ್ನು ಸಾಧಿಸಬಹುದು. ಅಶಿಸ್ತಿನ ವ್ಯವಹಾರದಿಂದ ಸಹೋದ್ಯೋಗಿಗಳ ನಡುವೆ ವಾಗ್ವಾದವು ಆಗಬಹುದು. ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವಿರಿ. ಗ್ರಾಹಕರ ವಿಷಯದಲ್ಲಿ ಉದ್ವೇಗಿಗಳಾಗಬೇಡಿ. ಅತಿಥಿ ಸತ್ಕಾರವನ್ನು ಬಹಳ ಪ್ರೀತಿಯಿಂದ ಮಾಡಿ. ನಿಮಗೆ ಸಾಧಿಸುವ ಛಲವಿದ್ದರೆ ಮಾತ್ರ ಉಪಕರಣಗಳು ನಿಮ್ಮ ಕೈ ಸೇರುವುದು. ಉದ್ಯಮಕ್ಕೆ ಸಂಬಂಧಿಸಿದ ನಿಮ್ಮ ಆಲೋಚನೆಯನ್ನು ಇತರರು ತಳ್ಳಿಹಾಕಬಹುದು.

ಮಕರ ರಾಶಿ: ಮಕ್ಕಳ ಆರೋಗ್ಯದಿಂದ ನಿಮಗೆ ಅತಂಕ. ನಿಮ್ಮ ದೃಷ್ಟಿಯು ಬದಲಾದರೆ ಎಲ್ಲವೂ ಬದಲಾಗುವುದು. ಕಛೇರಿಯ ವ್ಯವಹಾರವು ನಿಮಗೆ ಚಿಂತೆಯನ್ನು ಹೆಚ್ಚು ಮಾಡಬಹುದು. ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ನೀವು ಸಫಲರಾಗುವಿರಿ. ಸ್ನೇಹಿತರ ಜೊತೆ ಅನೌಪಚಾರಿಕ ಮಾತುಗಳನ್ನು ಆಡುವಿರಿ. ಸಹವಾಸದೋಷದಿಂದ ಹೊರಬರಲು ಆಗದು. ಹಳೆಯ ವಸ್ತುಗಳಿಂದ ದುರಸ್ತಿಗೆ ಖರ್ಚು ಮಾಡಲೇಬೇಕಾಗುವುದು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗಿ. ನೈಮಿತ್ತಿಕ ಕರ್ಮಗಳನ್ನು ನೀವು ಮಾಡಲೇಬೇಕಾಗುವುದು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಸಮ್ಮಾನವನ್ನು ಪಡೆಯುವರು. ಸ್ನೇಹಸಂಬಂಧವು ಇನ್ನಷ್ಟು ಬಲವಾಗುವುದು. ದುಃಖದ ಸನ್ನಿವೇಶಗಳನ್ನು ನೀವು ಸಂತೋಷದ ಸಂದರ್ಭವಾಗಿ ಪರಿವರ್ತಿಸುವಿರಿ. ಇಷ್ಟದ ಜನರನ್ನು ಭೇಟಿಯಾಗಲು ಹೋಗಬಹುದು. ನಿಮ್ಮಿಂದ ಆಗಬೇಕಾದ ಕಾರ್ಯಗಳನ್ನು ತಿಳಿದುಕೊಳ್ಳಿ.

ಕುಂಭ ರಾಶಿ: ಪರಿಶ್ರಮಕ್ಕಿಂತ ಅನಾಯಾಸದ ಧನಾಗಮನವನ್ನು ನಿರೀಕ್ಷಿಸುವಿರಿ. ಗೊತ್ತಿಲ್ಲದ ವ್ಯವಹಾರದಿಂದ ನಿಮಗೆ ಮುಖಭಂಗವಾಗಬಹುದು. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ಸಂಭ್ರಮದ ವಾತಾವರಣದಲ್ಲಿ ಸಮಯವನ್ನು ಕಳೆಯುವಿರಿ. ಅನಗತ್ಯ ಮಧ್ಯಪ್ರವೇಶದಿಂದ ಗೌರವ ಕಡಿಮೆಯಾಗುವುದು. ಮನೆಯ ಕೆಲಸವು ಅಧಿಕವಾಗಿ ಆಯಾಸವಾಗಬಹುದು. ನಿಮ್ಮ ಬಯಕೆಗಳನ್ನು ಪೂರೈಸಲಿಕೊಳ್ಳಲು ಇತರರ ಸಹಾಯವನ್ನು ಕೇಳುವಿರಿ. ಕಛೇರಿಯ ಕೆಲಸಗಳು ನಿಗದಿತ ಸಮಯಕ್ಕೆ ಮುಕ್ತಾಯವಾಗುವುದು. ವಾಹನದ ಉದ್ಯಮದಲ್ಲಿ ಕೆಲವು ಅಡೆತಡೆಗಳು ಬರಲಿವೆ. ನಿಮ್ಮ ಹಳೆಯ ವಸ್ತುಗಳನ್ನು ಮಾರಾಟ ಮಾಡಿ, ಹೊಸತನ್ನು ಪಡೆಯುವಿರಿ. ವಿವಾಹದ ಮಾತುಕತೆಗಳು ನಿಮಗೆ ಸಂತೋಷವನ್ನು ನೀಡುವುದು. ಭವಿಷ್ಯದ ಬಗ್ಗೆ ಅನಗತ್ಯವಾದ ಆಲೋಚನೆಗಳು ಬರಬಹುದು. ಸ್ತ್ರೀಯರ ಸಹಾಯದಿಂದ ನಿಮ್ಮ ಕಛೇರಿಯ ಕಾರ್ಯವು ಸರಿಯಾಗುವುದು. ನಿಮ್ಮ ಹೇಳಿಕಯನ್ನು ಇಂದು ಬದಲಾಯಿಸುವಿರಿ. ಬಂಧುಗಳ ವಿಚಾರಕ್ಕೆ ಆರ್ಥಿಕನಷ್ಟವಾಗುವುದು.

ಮೀನ ರಾಶಿ: ಶತ್ರುಗಳನ್ನು ನಿಗ್ರಹಿಸಲು ತಂತ್ರಗಳನ್ನು ಮಾಡಲೇಬೇಕು. ನೀವು ಇಂದು ಯಾವದನ್ನೂ ಪರಿಸ್ಥಿತಿಯ ಮೇಲೆ‌ ಅಳೆಯಲು ಹೋಗುವುದು ಬೇಡ. ಗೊಂದಲದ ಕಾರಣದಿಂದ ಯಾವುದನ್ನೂ ಪೂರ್ಣವಾಗಿ ನಿರ್ಧಾರ ಮಾಡಲಾಗಸು. ನೀವು ಸ್ಥಾನಮಾನದ ಪ್ರಾಪ್ತಿಗಾಗಿ ಯಾರನ್ನಾದರೂ ದೂರವಿರಿ. ಶೋಧಕವರ್ಗಕ್ಕೆ ಉತ್ತಮ ಪ್ರಶಂಸೆಯು ಸಿಗಬಹುದು. ಪುಣ್ಯಕ್ಷೇತ್ರ ದರ್ಶನಕ್ಕೆ ಸ್ನೇಹಿತರ ಜೊತೆ ಹೋಗುವ ಮನಸ್ಸಾಗುವುದು. ಸ್ನೇಹಿತರನ್ನು ರಕ್ಷಿಸಲು ಹೋಗಿ ನೀವು ಅಪಾಯಕ್ಕೆ ಸಿಲುಕುವಿರಿ. ಅನಿರೀಕ್ಷಿತ ಧನಲಾಭವು ಸಂತೋಷವನ್ನು ಕೊಡುವುದು. ಗೊಂದಲದ ಕಾರ್ಯಕ್ಕೆ ಶುಭಕರವಾದ ಸೂಚನೆಯಿಂದ ಉತ್ಸಾಹ ಹೆಚ್ಚಾಗಲಿದೆ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುವಿರಿ. ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸಬಹುದು. ನಿಮಗೆ ಸಿಗದಿರುವ ವಸ್ತುವು ಯಾರಿಗೂ ಸಿಗಬಾರದು ಎಂಬ ಹಠದ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ತಂತ್ರಜ್ಞರಿಗೆ ಸಿಹಿ ಸುದ್ದಿಯು ಇರಲಿದೆ. ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು.

Views: 39

Leave a Reply

Your email address will not be published. Required fields are marked *