ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ : ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ : ಮಘಾ, ವಾರ : ಭಾನು, ತಿಥಿ: ನವಮೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಗಂಡ, ಕರಣ : ಬಾಲವ, ಸೂರ್ಯೋದಯ – 06 : 20 am, ಸೂರ್ಯಾಸ್ತ – 06 : 53 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:19 – 18:53 ಗುಳಿಕ ಕಾಲ 15:45 – 17:19 ಯಮಗಂಡ ಕಾಲ 12:37 – 14:11
ಮೇಷ ರಾಶಿ: ಕೇಳಿಕೊಂಡ ವಿಚಾರವನ್ನು ಇಲ್ಲ ಎಂದು ಹೇಳಲಾರಿರಿ. ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ಸಂತೋಷದಿಂದ ಇರುತ್ತಾರೆ. ಇಂದು ನೀವು ಗೃಹನಿರ್ಮಾಣದ ಕಾರ್ಯವನ್ನು ಆರಂಭಿಸುವ ಯೋಚನೆ ಇದ್ದರೆ ಅದನ್ನು ಕೈಬಿಡುವುದು ಒಳ್ಳೆಯದು. ನಿನ್ನ ಕೋರಿಕೆಗಳು ಕೆಲವು ಈಡೇರಬಹುದು. ಸುಮ್ಮನಿರದೇ ಇನ್ನೊಬ್ಬರನ್ನು ಕೆಣಕುವುದನ್ನು ಬಿಡಬೇಕು. ಉದ್ಯೋಗವು ಅನ್ಯರ ಪಿತೂರಿಯಿಂದ ನಾಶವಾಗಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಡೆಯಲು ನೀವು ಇಂದು ಸಫಲರಾಗುವಿರಿ. ಆತ್ಮೀಯರ ನೋವನ್ನು ಅರ್ಥಮಾಡಿಕೊಳ್ಳುವಷ್ಟು ಸೂಕ್ಷ್ಮತೆಗೆ ಹೋಗುವಿರಿ. ಅಧಿಕಾರಿಗಳನ್ನು ಮೆಚ್ಚಿಸಲು ಹೋಗಿ ನಿಮ್ಮ ಸಮಯವು ವ್ಯರ್ಥವಾಗಬಹುದು. ಸ್ತ್ರೀಯರ ಜೊತೆ ಹೆಚ್ಚು ಹರಟೆ ಹೊಡೆಯುವಿರಿ. ನಿಮ್ಮ ಕೆಲಸಗಳನ್ನು ನೀವೇ ಹೊಗಳುತ್ತ ಆತ್ಮಪ್ರಶಂಸೆ ಮಾಡುಕೊಳ್ಳುವಿರಿ. ಕೆಲವು ಗಂಟೆಗಳ ಪ್ರಯಾಣವಾದರೂ ಅಸಮಾಧಾನದಿಂದಲೇ ಹೋಗುವಿರಿ.
ವೃಷಭ ರಾಶಿ: ಒತ್ತಡವಿಲ್ಲದೇ ಏನನ್ನೂ ಮಾಡಲಾರಿರಿ. ಸ್ಥಿರಾಸ್ತಿಯ ಒಡೆತನ ನಿಮಗೆ ಸಿಗಬಹುದು. ಮನೆಯವರ ಮಾತುಗಳು ನಿಮಗೆ ಅತ್ಯಂತ ಆಘಾತವನ್ನು ಉಂಟುಮಾಡಬಹುದು. ಹೊಸವಸ್ತುಗಳೇ ಆಗಿದ್ದರೂ ಅವುಗಳಿಂದ ನಷ್ಟವನ್ನು ಪಡೆಯುವಿರಿ. ಕೌಟುಂಬಿಕ ಭಿನ್ನಾಭಿಪ್ರಾಯವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಮೇಲೆ ಸದ್ಭಾವ ಬರಲು ಹಣವನ್ನು ಅಥವಾ ಸಮಯವನ್ನು ನೀಡುವಿರಿ. ನಿಮ್ಮ ಸಲಹೆಗಳನ್ನು ಸ್ವೀಕರಿಸದೇ ಇರುವುದು ನಿಮಗೆ ಬೇಸರವಾದೀತು. ಗಲಭೆಯಲ್ಲಿ ನೀವು ಇಂದು ಭಾಗವಹಿಸುವವರಿದ್ದೀರಿ. ಸಂಗಾತಿಗಳು ಮನಸ್ತಾಪಗಳನ್ನು ಸರಿ ಮಾಡಿಕೊಳ್ಳುವರು. ದಾಂಪತ್ಯದಲ್ಲಿ ಸ್ವಪ್ರತಿಷ್ಠೆ ಹೆಚ್ಚಾಗುವುದು. ಇಂದಿನ ಆದಾಯವು ನಿರೀಕ್ಷೆಯನ್ನು ಪೂರ್ಣವಾಗಿ ತಲುಪದು. ಪಾಪ ಪುಣ್ಯದ ಲೆಕ್ಕಾಚಾರವನ್ನು ಮಾಡುವಿರಿ. ನಿಮ್ಮ ದಯಾ ಗುಣವನ್ನು ದುರುಪಯೋಗ ಮಾಡಿಕೊಳ್ಳಬಹುದು. ಸಿದ್ಧ ಉಡುಪು ತಯಾರಕರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರಲಿಸೆ. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ.
ಮಿಥುನ ರಾಶಿ: ಸಾಲದ ಯೋಚನೇ ಇಲ್ಲದೇ ಇದ್ದರೂ ಮಾಡಬೇಕಾಗಬಹುದು. ಮಕ್ಕಳ ಮೇಲೆ ಪ್ರೀತಿ ಇದ್ದರೂ ಹುಸಿ ಮುನಿಸು ಅಗತ್ಯವಾಗಿ ಬೇಕು. ನಿಮ್ಮ ತೀರ್ಮಾನಗಳು ನಿಮಗೆ ಸಂತೃಪ್ತಿಯನ್ನು ಕೊಡಬಹುದು. ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭವಿಷ್ಯವು ನಿಮ್ಮನ್ನು ಅತಿಯಾಗಿ ಕಾಡಬಹುದು. ಹೊಸ ಸಂಬಂಧವನ್ನು ಬೆಳೆಸಲು ನೀವು ಸಜ್ಜಾಗಿರುವಿರಿ. ಸಂಗಾತಿಯ ನಿರ್ಧಾರಗಳನ್ನು ವಿರೋಧಿಸುವಿರಿ. ನಿಮ್ಮ ನಿರ್ಧಾರವನ್ನು ಬದಲಿಸಿದ್ದಕ್ಕೆ ನಿಮಗೆ ಕೋಪ ಉಂಟಾಗಬಹುದು. ಬೋಧನೆಗೆ ಪೂರ್ವ ತಯಾರಿ ಇಲ್ಲದೇ ಹೋಗುವುದು ಔಚಿತ್ಯವಲ್ಲ. ನಿಮ್ಮ ಸಂತೋಷವನ್ನು ಕಿತ್ತುಕೊಳ್ಳಲು ನಿಮ್ಮ ಹಿತಶತ್ರುಗಳು ಪ್ರಯತ್ನಿಸಬಹುದು. ಸ್ತ್ರೀಯ ಸೌಂದರ್ಯದಿಂದ ಮನಸೋಲುವಿರಿ. ನಿಮ್ಮ ಆರೋಪಗಳನ್ನು ನೀವು ತಳ್ಳಿಹಾಕುವಿರಿ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ. ನಿಮ್ಮ ಇಂದಿನ ಕಾರ್ಯಗಳು ಪರೀಶಿಲನೆಯಾಬೇಕಾಗಬಹುದು.
ಕರ್ಕಾಟಕ ರಾಶಿ: ಅಪರಿಚಿತರ ದಾಖಲೆಯೊಂದು ನಿಮ್ಮ ಕೈ ಸೇರಿ ಚಿಂತೆಗೊಳಿಸುವುದು. ಸಂಗಾತಿಗಾಗಿ ಮನಸ್ಸಿಲ್ಲದಿದ್ದರೂ ಖರ್ಚು ಮಾಡಬೇಕಾಗುವುದು. ನೀವು ಸ್ನೇಹಿತರ ಜೊತೆ ಹೊಸ ಉದ್ಯಮವನ್ನು ನಡೆಸಲು ಚಿಂತನೆ ನಡೆಸುವಿರಿ. ಅಧ್ಯಾತ್ಮದಲ್ಲಿ ಒಲವು ಇರಲಿದೆ. ಮಕ್ಕಳ ವರ್ತನೆಯನ್ನು ಕಂಡು ಆಶ್ಚರ್ಯಪಡುವಿರಿ. ಪ್ರತಿಷ್ಠೆಯನ್ನು ಇಟ್ಟುಕೊಳ್ಳುವುದು ಸುಲಭವಲ್ಲ. ನಿಮ್ಮ ವ್ಯಾಪಾರವು ಸಂಜೆಯ ಅನಂತರ ಚೆನ್ನಾಗಿ ನಡೆಯಲಿದೆ. ನಿಮ್ಮದು ಪ್ರೇಮವಿವಾಹವಾದರೂ ಸಣ್ಣ ವಿಚಾರಗಳಿಗೂ ಕಲಹವು ಆಗಬಹುದು. ಅನಗತ್ಯ ಸುತ್ತಾಟದಿಂದ ನೀವು ಬೇಸತ್ತುಹೋಗಬಹುದು. ನಿಮ್ಮ ಉತ್ಸಾಹವೂ ಕುಗ್ಗಬಹುದು. ಮನೆಯಲ್ಲಿಯೇ ಕುಳಿತು ಮನೋರಂಜನೆ ಆಸ್ವಾದಿಸಲು ಅಡ್ಡಿಗಳು. ಭೂಮಿಯ ವ್ಯವಹಾರವನ್ನು ಬಹಳ ಜೋಪಾನದಿಂದ ಮಾಡಬೇಕಿದೆ. ಸಂಬಂಧಗಳನ್ನು ನೀವು ಆದಷ್ಟು ದೂರ ಇರಿಸುವಿರಿ. ನಿಮ್ಮ ಮಾತಿಗೆ ಎದುರಾಡದಿದ್ದರೆ ನೀವು ಗೆದ್ದಿರೆಂದು ಅರ್ಥವಲ್ಲ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ. ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು.
ಸಿಂಹ ರಾಶಿ: ಯಾರಿಗೂ ಸಿಗದೇ ತಪ್ಪಿಸಿಕೊಂಡು ಓಡಾಡುವಿರಿ. ನಿಮ್ಮ ಕಾರ್ಯವು ಸಫಲವಾಗಲು ಶ್ರಮ ಅಗತ್ಯ. ಓಡಾಟದಿಂದ ಆಯಾಸ ಹೆಚ್ಚಾಗುವುದು. ಸಂಸಾರದಲ್ಲಿ ಹೆಚ್ಚಿನ ಸುಖವನ್ನು ಪಡೆಯಲು ಇಚ್ಛಿಸುವಿರಿ. ಆರ್ಥಿಕತೆಯೂ ಅಭಿವೃದ್ಧಿಯತ್ತ ಹೊರಳಬಹುದು. ಅಪರಿಚಿತರು ಪರಿಚಿತರಂತೆ ಕಾಣಬಹುದು. ಇಂದು ಕೆಕಸದ ಒತ್ತಡವಿರಲಿದ್ದು ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಬಹುದು. ನಿಮ್ಮ ಪದೋನ್ನತಿ ಸುಲಭಕ್ಕೆ ಆಗದು. ಪ್ರಯತ್ನ ಮಾಡಿಯೂ ಫಲಿಸದೇ ಕೈ ಬಿಡುವಿರಿ. ಸ್ವಾರ್ಥದಿಂದ ನೀವು ಬಹಳ ವಿಷಯವನ್ನು ಕಳೆದುಕೊಳ್ಳುವಿರಿ. ನಿಮ್ಮ ಬಗ್ಗೆ ಅಸಮಾಧಾನವೂ ಕೆಲವರಿಗೆ ಇರಲಿದೆ. ನಿಮ್ಮ ಮುಂಗೋಪಕ್ಕೆ ಹೆದರಿ ನಿಮಗೆ ಸಹಾಯವನ್ನು ಮಾಡಲು ಯಾರೂ ಬರುವುದಿಲ್ಲ. ಯಾವುದನ್ನೂ ನೋಡದೇ ಖರೀದಿಗೆ ಒಪ್ಪಿಗೆ ಕೊಡುವುದು ಬೇಡ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿದೆ. ನಿಮ್ಮ ಮೇಲೆ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ.
ಕನ್ಯಾ ರಾಶಿ: ನಿಮ್ಮ ಸಂಸ್ಥೆಯ ಸಂಭ್ರಮಾಚರಣೆಯಲ್ಲಿ ಇರುವಿರಿ. ಶತ್ರುಗಳು ನಿಮ್ಮ ವಿರುದ್ಧ ಮಾಡುವ ತಂತ್ರಗಳು ನಿಮಗೆ ಪೂರಕವಾಗಿಯೇ ಬರುವುದು. ನೀವು ಬರಹಗಾರರಾಗಿದ್ದರೆ ನಿಮ್ಮ ಸಾಹಿತ್ಯಕ್ಕೆ ಯಶಸ್ಸು ಬರಬಹುದು. ಕೃಷಿ ಉತ್ಪನ್ನ ಮಾರಾಟಗಾರರು ಹೆಚ್ಚಿನ ಲಾಭವನ್ನು ಗಳಿಸಬಹುದು. ನಿಮ್ಮ ಗುರಿಯನ್ನು ಯಾರಾದರೂ ಅಪರಿಚಿತರು ಅಪಹಾಸ್ಯ ಮಾಡಬಹುದು. ನಿಮ್ಮ ಮಾತುಗಳು ಕೆಲವರಿಗೆ ಬೇಸರವನ್ನು ತರಿಸಬಹುದು. ನೋಡಿ ಮಾತನಾಡಿ. ನಿಮ್ಮ ಉತ್ತಮ ಚಿಂತನೆಯು ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಆತ್ಮವಿಶ್ವಾಸವು ನಿಮ್ಮ ಸೋಲನ್ನೂ ಗೆಲ್ಲಿಸುವುದು. ಅನಾರೋಗ್ಯದಲ್ಲಿಯೂ ಕಾರ್ಯೋನ್ಮುಖತೆ ಮೆಚ್ಚಿಗೆಯನ್ನು ತಂದುಕೊಡುವುದು. ಹಣದ ಬಗ್ಗೆ ಅತಿಯಾದ ಮೋಹವನ್ನು ನೀವು ಇಂದು ಹೊಂದುವ ಸಂಭವವಿದೆ. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ವ್ಯವಹಾರದಲ್ಲಿ ಚುರುಕುತನ ಅಗತ್ಯ.
ತುಲಾ ರಾಶಿ: ಉದ್ಯಮಕ್ಕೆ ಬಂಡವಾಳ ಹಾಕುವವರ ಹುಡುಕಾಟ ನಡೆಯುವುದು. ಸ್ಪರ್ಧಾತ್ಮಕ ವಿಚಾರಗಳಲ್ಲಿ ನಿಮಗೆ ಸೋಲಾಗಬಹುದು. ನಿಮ್ಮ ಕೆಲಸವು ನಿಮಗೆ ಆತ್ಮಸಂತೋಷವನ್ನು ತರಬಹುದು. ಪಂಡಿತರಿಗೆ ಸಣ್ಣ ಮಟ್ಟದ ಗೌರವ ಪ್ರಾಪ್ತವಾಗಲಿದೆ. ಪಾಲುದಾರಿಕೆಯನ್ನು ನೀವು ಅನುಮಾನದಿಂದ ಕಾಣುವಿರಿ. ನಿಮ್ಮ ತಪ್ಪು ನಿರ್ಧಾರಗಳೇ ನಿಮ್ಮನ್ನು ಕಾಡಬಹುದು. ಸಂಬಂಧಗಳನ್ನು ನೀವು ಸಡಿಲಗೊಳಿಸಿಕೊಳ್ಳುವಿರಿ. ಕುಟುಂಬದ ಆರೋಗ್ಯವು ನಿಮಗೆ ಬಹಳ ಮುಖ್ಯವಾಗಬಹುದು. ನಿಮಗೆ ತಿಳಿವಳಿಕೆಯ ಕಿವಿ ಮಾತು ಮರೆತುಹೋಗಬಹುದು. ಹಳೆಯ ವಾಹನ ಅಥವಾ ಯಂತ್ರೋಪಕರಣಗಳ ದುರಸ್ತಿಯಿಂದ ನಷ್ಟ. ಇಂದಿನ ವ್ಯಾಪರ ನಿಧಾನವಾಗಿ ಆರಂಭವಾಗಲಿದೆ. ಚಿತ್ತ ಚಾಂಚಲ್ಯ ನಿಮ್ಮನ್ನು ಒಂದು ಕಡೆಗೆ ಇರಲು ಬಿಡದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರಲಿದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಯಾರ ಬಗ್ಗೆಯೂ ನಕಾರಾತ್ಮಕ ಯೋಚನೆ, ಮಾತುಗಳು ಬೇಡ.
ವೃಶ್ಚಿಕ ರಾಶಿ: ಆರೋಗ್ಯ ಊರ್ಜಿತವಾಗಲು ಉತ್ತಮ ಪರಿಸರ, ಒತ್ತಡ ನಿವಾರಣೆಗೆ ಬೇಕಾದ ಜೀವನ ಬೇಕಾದೀತು. ಸಹೋದರನ ಗೃಹ ನಿರ್ಮಾಣಕ್ಕೆ ನಿಮ್ಮಿಂದ ಕಿಂಚಿತ್ ಸಹಕಾರ ಸಿಗಲಿದೆ. ನಿಮ್ಮ ಮಾತುಗಳು ವರ್ಷದ ವಾದವನ್ನು ಹುಟ್ಟಿಸುವಂತೆ ಮಾಡಬಹುದು. ಇಂದು ನೀವು ಉದ್ಯೋಗವನ್ನು ಹುಡುಕುವ ಪ್ರಯತ್ನ ಮಾಡಿದರೆ ವ್ಯರ್ಥವಾಗಬಹುದು. ನಿಮ್ಮ ನಂಬಿಕೆಗಳು ಗುಸಿಯಾಗಬಹುದು. ಮನೆತನಕ್ಕೆ ಯೋಗ್ಯವಾದ ದಾನವನ್ನು ಮಾಡುವಿರಿ. ಅಪರಿಚಿತರ ಜೊತೆ ಸಲ್ಲದ ಮಾತುಗಳನ್ನು ಆಡುವಿರಿ. ಸುಳ್ಳು ಭರವಸೆಗಳು ನಿಮಗೆ ಕಷ್ಟವನ್ನು ಕೊಡುವುವು. ನಿಮ್ಮ ಮನಸ್ಸನ್ನು ಸುಮ್ಮನೆ ಖಾಲಿ ಬಿಡುವುದು ಬೇಡ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ವ್ಯವಹಾರವನ್ನು ವ್ಯವಹಾರವಾಗಿಯೇ ಮಾಡಿ. ಆಗ ನಿಮ್ಮ ಮಾತಿಗೆ ಹೆಚ್ಚು ಬೆಲೆ ಬಂದೀತು. ಸೌಂದರ್ಯ ವರ್ಧನೆಯ ಕಡೆ ಗಮನವಿರಲಿದೆ. ಹೂಡಿಕೆಯು ದ್ವಿಗುಣವಾಗಬಹುದು. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು. ಮಾನಸಿಕ ಅಸ್ವಾಸ್ಥ್ಯವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ.
ಧನು ರಾಶಿ: ಇಂದು ನೀವು ಹೊಸ ಸನ್ನಿವೇಶವನ್ನು ಸೃಷ್ಟಿಸಿ ಮಿತ್ರರ ನಡುವೆ ಕಲಹವಾಗುವಂತೆ ಮಾಡುವಿರಿ. ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಶಿಕ್ಷಣವನ್ನು ನೀವು ಹೊಸ ರೀತಿಯಲ್ಲಿ ಕೊಡಲು ಪ್ರಾರಂಭಿಸಬಹುದು. ಸಂಗಾತಿಯ ಸಲಹೆಯನ್ನು ನೀವು ಸ್ವೀಕರಿಸುವಿರಿ. ಹೊಸ ಉದ್ಯಮವು ಬಹಳ ಸಂತೋಷದಿಂದ ನಡೆಯಲಿದೆ. ಶತ್ರುಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ತೊಂದರೆಯಾಗದಂತೆ ಸರಿ ಮಾಡಿಕೊಳ್ಳಿ. ಮಕ್ಕಳಿಂದ ಸಂತೋಷವಾರ್ತೆಯನ್ನು ನೀವು ನಿರೀಕ್ಷಿಸಬಹುದು. ಬೆಳವಣಿಗೆಯ ಪರಿಶೀಲನೆಯಿಂದ ಸಂತೃಪ್ತಿ ಸಿಗಲಿದೆ. ವಿವಾಹದ ವಿಳಂಬವು ನಿಮಗೆ ಬೇಸರ ತರಿಸೀತು. ನಿಮ್ಮ ವಸ್ತುಗಳನ್ನು ಇನ್ನೊಬ್ಬರಿಗೆ ಕೊಟ್ಟು ಸಂತೋಷಪಡುವಿರಿ. ಕೆಲವು ಸಂದರ್ಭದಲ್ಲಿ ನಿಮ್ಮ ಬುದ್ಧಿಯು ಕೆಲಸಮಾಡದೇ ಇದ್ದೀತು. ಅಂದುಕೊಂಡ ಕಾರ್ಯವು ಸ್ವಲ್ಪ ಪೂರ್ಣವಾಯಿತು ಎಂಬ ಸಂತೃಪ್ತಿ ಇರಲಿದೆ. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ಪ್ರಭಾವಿ ವ್ಯಕ್ತಿಗಳ ಜೊತೆ ಸೌಹಾರ್ದದ ಮಾತನಾಡಿ. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು.
ಮಕರ ರಾಶಿ: ನಿಮಗೆ ಆಗುವಷ್ಟನ್ನು ಮಾತ್ರ ಒಪ್ಪಿಕೊಳ್ಳಿ. ಮಾತು ಕೊಟ್ಟು ಸಂಕಟಪಡುವುದು ಬೇಡ. ಹೊಸ ಕಾರ್ಯವನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ನಿಮ್ಮ ಬಳಿ ಕೆಲವರು ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಲು ಬರಬಹುದು. ಖರ್ಚಿನ ಮೇಲೆ ನೀವು ಹಿಡಿತ ಸಾಧಿಸಲು ಪ್ರಯತ್ನಿಸುವಿರಿ. ಸ್ವಾರಸ್ಯಕರ ಸಂಗತಿಗಳು ನಿಮಗೆ ಸಹಜದಂತೆ ಆಗಬಹುದು. ಸಣ್ಣ ಅವಕಾಶವನ್ನೇ ದೊಡ್ಡದಾಗಿ ಮಡಿಕೊಳ್ಳುವಿರಿ. ಬೇಡದವರ ಸಹವಾಸದಿಂದ ಹೆಸರು ಹಾಳು. ಮಕ್ಕಳ ಮಾತುಗಳು ನಿಮಗೆ ಜೀರ್ಣವಾಗುವುದು ಕಷ್ಟವಾದೀತು. ನಿಮ್ಮ ಸುತ್ತಲು ನಕಾರಾತ್ಮಕ ಅಂಶಗಳೇ ಕೇಳಿ ಬಂದರೂ ನೀವು ಧೃತಿಗೆಡಲಾರಿರಿ. ಕರ್ತವ್ಯವನ್ನು ಲೋಪವಿಲ್ಲದಂತೆ ಮಾಡಿ. ನಿಮ್ಮದೇ ಸಮಸ್ಯೆಗಳ ನಡುವೆ ಮುಳುಗಿಹೋಗಿದ್ದೀರಿ. ನಿಮಗೆ ಸಹಾಯಹಸ್ತವನ್ನು ನೀಡುವ ಅವಶ್ಯಕತೆ ಇದೆ. ನಿಮ್ಮ ಅಧಿಕ ಕೋಪದಿಂದ ಸುಂದರ ಕ್ಷಣಗಳು ನಷ್ಟವಾಗಬಹುದು. ಮಕ್ಕಳ ಏಳಿಗೆಯು ಮಂದಗತಿಯಲ್ಲಿ ಇರಲಿದೆ. ನಿಮ್ಮ ಅಳತೆಯನ್ನು ಮೀರದೇ ಚೌಕಟ್ಟಿನಲ್ಲಿರಿ.
ಕುಂಭ ರಾಶಿ: ಖಾತೆ ಜಾಗ ಮಾಡಿಕೊಳ್ಳಲು ನಿಮ್ಮಿಂದ ಪರಿಶೀಲನೆ ನಡೆಯಲಿದೆ. ಹಣದ ಹಂಚಿಕೆಯಲ್ಲಿ ನಿಮಗೆ ಕಲಹವಾಗುವುದು. ಹೇಗಾದರೂ ಮಾಡಿ ಸರಿಮಾಡಿಕೊಳ್ಳಿ. ಸೋಲನ್ನು ಒಪ್ಪಿಕೊಳ್ಳಲು ನೀವು ತಯಾರಿರುವುದಿಲ್ಲ. ಸಂಗಾತಿಯನ್ನು ಸಂತೋಷಪಡಿಸಲು ಏನನ್ನಾದರೂ ಮಾಡಲಿದ್ದೀರಿ. ಸ್ನೇಹಿತರ ಸಹವಾಸವು ನಿನಗೆ ಸಾಕೆನಿಸಬಹುದು. ಇನ್ನೊಬ್ಬರ ಸಮಸ್ಯೆಗೆ ನೀವು ಗೋಣು ಕೊಡಬೇಕಾದೀತು. ಕೋಪದಲ್ಲಿ ಏನನ್ನಾದರೂ ಹೇಳುವ ಸಾಧ್ಯತೆ ಹೆಚ್ಚಾಗಿರುವುದು. ದೃಷ್ಟಿದೋಷದಿಂದ ತೊಂದರೆ ಹೆಚ್ಚಾಗಲಿದೆ. ನಿಮ್ಮನ್ನು ಬಾಧಿಸಬಹುದು. ಕಷ್ಟವಾದರೂ ಇಂದು ಪ್ರಯಾಣವನ್ನು ಮಾಡಲೇ ಬೇಕಾಗಿಬರಲಿದೆ. ಎಲ್ಲರನ್ನೂ ಸಮಾಧಾನ ಮಾಡಲು ನಿಮ್ಮಿಂದ ಆಗದು. ಉದ್ಯೋಗವನ್ನು ಬಿಡುವ ಯೋಚನೆಯನ್ನು ಬಿಡುವುದು ಒಳ್ಳೆಯದು. ಅನ್ಯರ ತಪ್ಪಿನಿಂದ ಅಪಘಾತವು ಸಂಭವಿಸಬಹುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಸಂಭಾವ್ಯತೆಯ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ.
ಮೀನ ರಾಶಿ: ಯಾರಾದೋ ಬಗ್ಗೆ ಪ್ರತೀಕಾರ ಭಾವವಿದ್ದರೆ ಇಂದೇ ಬಿಡುವುದು ಉತ್ತ. ಮಹಿಳೆಯರು ಇಂದು ಹೆಚ್ಚು ಒತ್ತಡಲ್ಲಿ ಇರುವಂತೆ ಕಂಡರೂ ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನವನ್ನು ಮೆಚ್ಚುವರು. ಏನೇ ಅಂದರೂ ನಿಮ್ಮ ಮಾತನ್ನು ಕೇಳುವ ಮನಃಸ್ಥಿತಿಯು ಇರುವುದಿಲ್ಲ. ಎಂತಹ ಎದೆಗಾರಿಕೆ ಇದ್ದರೂ ಒಮ್ಮೆ ಎದೆ ಝಲ್ ಎನ್ನುವ ಸನ್ನಿವೇಶ ಬರುವುದು. ಎಂದಿನಂತೆ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ನಿಮ್ಮದಲ್ಲದ ವಿಚಾರವಾದರೂ ನಿಮ್ಮಲ್ಲಿಗೆ ಅದು ಬರಲಿದೆ. ಒಪ್ಪಂದವನ್ನು ಒಳ್ಳೆಯ ಮನಸ್ಸಿನಿಂದ ಮಾಡಿಕೊಳ್ಳುವಿರಿ. ಸ್ನೇಹಿತರನ್ನು ಕಳೆದುಕೊಳ್ಳಲು ನೀವು ಕಷ್ಟಪಡುವಿರಿ. ಶುಭವಾರ್ತೆಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಬಂಧುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಅನ್ನಿಸಬಹುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು.
Source: TV9 Kannada
Views: 53