ಶಾಲಿವಾಹನ ಶಕೆ 948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ಪರಿಘ, ಕರಣ : ಬವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 14 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:40 – 09:11, ಗುಳಿಕ ಕಾಲ 13:43 – 15:13, ಯಮಗಂಡ ಕಾಲ 10:42 – 12:12
ಇಂದಿನಿಂದ ನಾಡ ಹಬ್ಬ ದಸರಾ ಆರಂಭ. ಈ ಬಾರಿಯ ವಿಶೇಷ ಹತ್ತು ದಿನಗಳ ನವರಾತ್ರ ನಡೆಯಲಿದೆ. ದೇವಿಯ ಉಪಾಸನೆಗೆ ಶ್ರೇಷ್ಠ ಕಾಲ. ಮೊದಲ ದಿನ ಶೈಲಪುತ್ರೀ ದೇವಿಯನ್ನು ಆರಾಧನೆ ಮಾಡುವುದು. ಮೂರು ರೂಪಗಳಲ್ಲಿ ಮಹಾಕಾಳಿ ರೂಪ ಇದು. ಪರ್ವತ ರಾಜನ ಮಗಳನ್ನಾಗಿ ಪೂಜಿಸುವುದು. ಆಕೆಯ ಸ್ವರೂಪ ತಲೆಯಲ್ಲಿ ಅರ್ಧ ಚಂದ್ರನನ್ನು ಧರಿಸಿ, ಎತ್ತನ್ನು ಏರಿ, ಕೈಯಲ್ಲಿ ಶೂಲವನ್ನು ಹಿಡಿದವಳು. ವಿವಿಧ ಪ್ರಕಾರಗಳಿಂದ ದೇವಿಯನ್ನು ಉಪಾಸನೆ ಮಾಡುವುದರಿಂದ ಸಂಕಟಗಳು ದೂರವಾಗಲಿವೆ.
ಮೇಷ ರಾಶಿ ::
ಮುಕ್ತಾವಾದ ಮಾತುಕತೆಗಳಿಂದ ವ್ಯಾವಹಾರಿಕ ಬಾಂಧವ್ಯವೂ ಮುಕ್ತಾಯವಾಗಬಹುದು. ಬಿಡುವಿನ ಸಮಯದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯವನ್ನು ಮಾಡುವಿರಿ. ಸಂಪತ್ತು ಇದ್ದರೂ ಇಲ್ಲವೆಂದು ಕೊರಗುವಿರಿ. ವಾಹನದಿಂದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭವಿರಲಿದೆ. ವೃತ್ತಿಯಲ್ಲಿ ನಿಮಗೆ ಅಸಹಕಾರವನ್ನು ತೋರಿಸುವರು. ನಿಮ್ಮ ಯೋಜನೆಗೆ ಸಹಕಾರವಾಗುವವರನ್ನು ನೀವೇ ಆರಿಸಿಕೊಳ್ಳುವಿರಿ. ನೀವು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಮನಸ್ಸು ಪರಿವರ್ತನೆಯಾಗುತ್ತ ಇರುವುದು. ವ್ಯಾವಹಾರಿಕವಾಗಿ ಯೋಚಿಸಿ ವ್ಯಾಪಾರದಲ್ಲಿ ಬದಲಾವಣೆಯನ್ನು ತರುವಿರಿ. ಸ್ನೇಹಿತರ ಜೊತೆ ವಿನಾಕಾರಣ ವಾಗ್ವಾದ ಮಾಡುವಿರಿ. ನಿಮಗೆ ವಿರೋಧಿಗಳ ಭಯವು ಕಾಡಬಹುದು. ಸಾಮಾಜಿಕ ಕೆಲಸಗಳನ್ನು ಮಾಡಲು ನೀವು ಹಿಂಜರಿಯುವಿರಿ. ನ್ಯಾಯಾಲಯದಲ್ಲಿ ನಿಮ್ಮ ಬಗ್ಗೆ ವಿರೋಧಿಗಳು ದೂರನ್ನು ಸಲ್ಲಿಸಬಹುದು. ನಿಮ್ಮದೇ ತಪ್ಪಿದ್ದರೂ ವಾದ ಮಾಡಿ ಗೆಲ್ಲುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಎಲ್ಲದಕ್ಕೂ ನಕಾರಾತ್ಮಕ ಹೇಳಿಕೆಯನ್ನು ಕೊಡುವುದು ಬೇಡ.
ವೃಷಭ ರಾಶಿ :
:ಸಾಲ ನೀಡಿದವರು ಹೀನವಾಗಿ ನಿಂದಿಸುವರು. ತಡೆದುಕೊಳ್ಳುವ ತಾಳ್ಮೆ ಅಥವಾ ತೀರಿಸುವ ತಾಕತ್ತು ಯಾವುದಾದರೂ ಬೇಕು. ಇಂದು ನೀವು ಏನನ್ನಾದರೂ ನಿರೀಕ್ಷಿಸಿ ಮಾಡಿದ ಕಾರ್ಯಕ್ಕೆ ಫಲ ಸಿಗದು. ದಿನದ ಆರಂಭದಲ್ಲಿ ಉತ್ಸಾಹವಿರದು. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲೆ ಕಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ನಿಮ್ಮ ಉದ್ಯಮವನ್ನು ಮಾಡಲಿದ್ದೀರಿ. ಆಸ್ತಿಯ ಖರೀದಿಯ ಬಗ್ಗೆ ಖಚಿತ ನಿರ್ಧಾರವನ್ನು ಮಾಡಿಕೊಳ್ಳಿ. ಆಪ್ತರಿಗೆ ಇಷ್ಟವಾಗುವುದನ್ನು ಮಾಡುವಿರಿ. ನಿಮ್ಮ ಮೇಲಿನ ವಿಶ್ವಾಸವು ಕಡಿಮೆಯಾಗಲಿದೆ. ಇಷ್ಟಪಟ್ಟವರನ್ನು ಪಡೆದು ಆನಂದಿಸುವಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಇರಲಿದೆ. ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳಬೇಕಾಗಬಹುದು. ಪ್ರಸಿದ್ಧ ನಟರನ್ನು ಭೇಟಿಯಾಗುವಿರಿ. ಪಾಲುದಾರಿಕೆಯಿಂದ ನಷ್ಟವೆನಿಸಬಹುದು. ಇಂದು ನೀವು ಮಾತುಗಳನ್ನು ಯೋಚಿಸಿ ಆಡುವಿರಿ. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳುವಿರಿ.
ಮಿಥುನ ರಾಶಿ :
:ಅನ್ಯರಿಗೆ ಅಪಮಾನವು ಬಂಧನದವರೆಗೂ ಹೋಗಬಹುದು. ಯಾವುದನ್ನೂ ಹಗುರವಾಗಿ ತಿಳಿಯುವುದು ಬೇಡ. ಇಂದು ಎಲ್ಲವನ್ನೂ ದೈವಲೀಲೆ ಎಂದು ಹೇಳುವುದಕ್ಕಿಂತ ಮನುಷ್ಯ ಪ್ರಯತ್ನವೂ ಸ್ವಲ್ಪ ಇರದು. ಅಂಧಾಭಿಮಾನವು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸಬಹುದು. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿಕೊಳ್ಳಿ. ಸ್ಪರ್ಧಾತ್ಮಕವಾದ ವಿಚಾರದಲ್ಲಿ ಅಲಕ್ಷ್ಯ ಬೇಡ. ಯಾರ ಮೇಲೂ ಅಹಂಕಾರದ ಮಾತುಗಳನ್ನು ಆಡುವುದು ಸರಿಯಲ್ಲ. ವಿದ್ಯಾಭ್ಯಾಸವು ಕಾರಣಾಂತರಗಳಿಂದ ನಿಲ್ಲಬಹುದು. ನಿಮಗೆ ಭರವಸೆಯನ್ನು ತುಂಬುವವರು ಬೇಕಾಗಿದ್ದಾರೆ. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಗಳತ್ತ ಹೊರಳುವುದು. ಮಕ್ಕಳ ತುಂಟಾಟವು ನಿಮಗೆ ಇಷ್ಟವಾಗುವುದು. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿ ಆಗುವುದು.
ಕರ್ಕಾಟಕ ರಾಶಿ :
:ಶಕ್ತಿಗಿಂತ ಯುಕ್ತಿಯ ಪ್ರದರ್ಶನದಿಂದ ಮೆಚ್ಚುಗೆ ಪಡೆಯುವಿರಿ. ಇಂದು ಮಿತ್ರರು ಸಹಾಯವನ್ನು ಕೇಳುವ ಮೊದಲೇ ನೀವೇ ಸಹಾಯ ಮಾಡುವಿರಿ. ಇಂದು ರಾಜಕೀಯ ವ್ಯಕ್ತಿಗಳಿಗೆ ಹೆಚ್ಚು ಒತ್ತಡವಿರುವುದು. ಪ್ರಶಂಸೆಯ ಕಾರಣದಿಂದ ಖುಷಿಯಾಗಿ ಕೆಲಸ ಮಾಡುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗಲಿದೆ. ಯಂತ್ರಗಳ ದುರಸ್ತಿಯನ್ನು ನೀವೇ ಮಾಡುವಿರಿ. ನೀವು ಸಮಯವನ್ನು ಹೊಂದಿಸಿಕೊಳ್ಳಲು ಕಷ್ಟಪಡುವಿರಿ. ಸಂಗಾತಿಯ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಷಯವು ಬಹಳಷ್ಟು ಇರಲಿದೆ. ಆಗಾಗ ಆರೋಗ್ಯದಲ್ಲಿ ಪರಿವರ್ತನೆಯು ಕಾಣುತ್ತಿದ್ದು ವೈದ್ಯರ ಸಲಹೆಯನ್ನೂ ದೈವಜ್ಞರಿಂದ ಪರಿಹಾರವನ್ನೂ ತಿಳಿದುಕೊಳ್ಳಿ. ಅತಿಥಿಗಳಿಗೆ ಗೌರವ ತೋರಿಸುವಿರಿ. ಇಷ್ಟದವರಿಗೆ ಏನನ್ನಾದರೂ ಕೊಡಲು ಇಷ್ಟಪಡುವಿರಿ. ಯಾರಾದರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮಿಂದ ಸಲಹೆಯನ್ನು ಪಡೆಯಬಹುದು. ಕೃಷಿಯು ನಿಮ್ಮ ಇಷ್ಟದ ಸಂಗತಿಯಾಗಲಿದೆ.
ಸಿಂಹ ರಾಶಿ :
:ಗುಪ್ತವಾಗಿ ಕೆಲಸವನ್ನು ನಿರ್ವಹಿಸುವವರಿಗೆ ಬಡ್ತಿ ಸಾಧ್ಯತೆ ಇದೆ. ಕೆಲವನ್ನು ಪಡೆಯಲು ಕೆಲವನ್ನು ಬಿಡಬೇಕು. ಆದರೆ ನಿಮ್ಮ ವಿವೇಚನೆಯಿಂದ ಮುಖ್ಯಾಮುಖ್ಯಗಳನ್ನು ತಿಳಿದರೆ ನೆಮ್ಮದಿಯಿಂದ ಇರಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ಯಥೇಚ್ಛವಾಗಿ ಆದರೂ ಲಾಭವು ಬಹಳ ಕಡಿಮೆ ಇರಲಿದೆ. ಓಡಾಟದಲ್ಲಿ ನಿಮ್ಮ ವಸ್ತವು ಕಳೆದುಹೋಗಬಹುದು. ಅಪರಿಚಿತರು ನಿಮ್ಮಿಂದ ಏನನ್ನಾದರೂ ಬಯಸಿಯಾರು. ಮನೆಗೆ ಬಂದ ಅತಿಥಿಯನ್ನು ಸತ್ಕಾರದಿಂದ ಸಂತೋಷಪಡಿಸುವಿರಿ. ಸಂಗಾತಿಯ ಜೊತೆ ಪರಸ್ಥಳಗಳಿಗೆ ಹೋಗುವಿರಿ. ಕೆಲವು ಮಾತಗಳು ಪ್ರಶಾಂತವಾದ ಮನಸ್ಸನ್ನು ಹಾಳುಮಾಡುವುದು. ಅಧಿಕ ನಿರೀಕ್ಷೆಯನ್ನು ಬಂಧುಗಳ ಕಡೆಯಿಂದ ಮಾಡುವಿರಿ. ತಂದೆಯ ಆರೋಗ್ಯವು ವ್ಯತ್ಯಾಸವಾಗಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ.
ಕನ್ಯಾ ರಾಶಿ :
:ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ವರ್ತನೆ ಯಾರಿಗೂ ಮುಜುಗರ ಉಂಟುಮಾಡದಂತೆ ಇರಲಿ. ಇಂದು ಎಲ್ಲರಿಂದ ನೀವು ದೂರವಾಗುವ ಸ್ಥಿತಿ ಬರುವುದು. ನಿಮ್ಮಲ್ಲಿ ಸಂತೋಷವಿದ್ದರೆ, ಹೆಚ್ಚು ಕಷ್ಟವಾಗುವುದು. ಇಂದು ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಬಯಸುವಿರಿ. ಹಣಕಾಸಿನ ಕೊರತೆಯು ಸಲ್ಲದ ಕೆಲಸಕ್ಕೆ ನಿಮ್ಮನ್ನು ಜೋಡಿಸುವ ಸಾಧ್ಯತೆ ಇದೆ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ. ಮಕ್ಕಳ ಮೇಲೆ ನಿಮ್ಮ ಕಾಳಜಿಯು ಅತಿಯಾಗಿರಲಿದೆ. ಸಾಮಾಜಿಕ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವಿರಿ. ನಿಮ್ಮ ಹಣದ ಅಭಾವವನ್ನು ಗೌಪ್ಯವಾಗಿ ಇಟ್ಟುಕೊಳ್ಳಿ. ದೂರದೃಷ್ಟಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಿ. ಮನೆಯ ಕೆಲಸವನ್ನು ಹೆಚ್ಚು ಆನಂದದಿಂದ ಮಾಡುವಿರಿ. ಆಸ್ತಿಯ ಹಂಚಿಕೆಯಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಯಾವುದಾದರೂ ಸ್ಥಳವನ್ನು ಹುಡುಕುವಿರಿ. ಸಂಗಾತಿಗೆ ಬೇಕಾದ ವಸ್ತುವನ್ನು ಕೊಡಿಸಬೇಕಾಗುವುದು.
ತುಲಾ ರಾಶಿ :
:ಹಿರಿಯರಿಗೆ ಮಾಡಿದ ಅಪಮಾನವು ಕೂಡಲೇ ಫಲ ಸಿಗಲಿದ್ದು, ಉದ್ಧಟತನವನ್ನೂ ತೋರಿಸಬಹುದು. ನೀವು ಕಾರ್ಯದಲ್ಲಿ ಎಷ್ಟೇ ಪಳಗಿದರೂ ಎಚ್ಚರಿಕೆಯಿಂದ ಇರುವುದು ಮುಖ್ಯ. ಹಳೆಯ ವಸ್ತುಗಳನ್ನೇ ಸರಿ ಮಾಡಿಕೊಳ್ಳುವಿರಿ. ನೆಮ್ಮದಿಗಾಗಿ ಬಹಳ ಹುಡುಕಾಟ ಮಾಡುವಿರಿ. ಒತ್ತಡದಿಂದ ಹೊರಗೆ ಬರುವ ಮಾರ್ಗವನ್ನು ಕಂಡುಕೊಳ್ಳುವಿರಿ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉಂಟಾದ ಪ್ರಗತಿಯಿಂದ ಸಂತೋಷವಾಗಲಿದೆ. ಹಾಕಿದ ಬಂಡವಾಳಕ್ಕೆ ತಕ್ಕ ಆದಾಯವನ್ನು ಪಡೆಯಲು ಯೋಜನೆ ಮಾಡುವಿರಿ. ಹೊರಗೆ ಸುತ್ತಾಟ ಮಾಡಿ ಮನಸ್ಸನ್ನು ಹಗುರಾಗಲಿದೆ. ಬಂಧುಗಳ ಮನೆಗೆ ಹೋಗಲಿದ್ದೀರಿ. ಗೌರವವಿಲ್ಲದ ಸ್ಥಳದಿಂದ ನೀವು ದೂರ ಸರಿಯುವಿರಿ. ಮಕ್ಕಳ ಜೊತೆ ಅಧಿಕ ಸಮಯವನ್ನು ಕಳೆಯುವಿರಿ. ಸಿಟ್ಟಿನಿಂದ ಇಂದು ಖುಷಿಯ ವಾತಾವರಣದಿಂದ ದೂರವಿರುವಿರಿ. ನಿಮ್ಮ ಮಾತು ಇತರರಿಗೆ ಇಷ್ಟವಾಗದು. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.
ವೃಶ್ಚಿಕ ರಾಶಿ :
:ಮುಂದಿನ ಯೋಜನೆಯನ್ನು ಅಂತಿಮಗೊಳಿಸದೇ ಇದ್ದರೆ ಸುಮ್ಮನೆ ಒಂದು ಕಡೆ ಇರಬೇಕಾಗುವುದು. ನಿಮ್ಮ ಅನುಕೂಲತೆಯನ್ನು ಗಮನಿಸಿಕೊಂಡು ಯಾವುದಾದರೂ ಕಾರ್ಯವನ್ನು ಒಪ್ಪಿಕೊಳ್ಳಿ. ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ಅಧಿಕಾರದಲ್ಲಿರುವವರು ಒತ್ತಡಕ್ಕೆ ಸಿಲುಕಿರುವರು. ಗೆಳೆಯರ ಮಾತಿಗೆ ಹೆಚ್ಚು ಬೆಲೆ ಆದರವನ್ನು ತೋರುವಿರಿ. ನಿಮಗಾಗುವ ಸಣ್ಣ ತೊಂದರೆಯನ್ನೂ ನೀವು ಸಹಿಸಲಾರಿರಿ. ಬಂಧುಗಳು ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರುವರು. ಎಲ್ಲದಕ್ಕೂ ಕೋಪ ಮಾಡಿಕೊಳ್ಳುವುದು ಸರಿಕಾಣಿಸದು. ಸರ್ಕಾರಿ ನೌಕರಿ ಸಿಕ್ಕುವ ಅವಕಾಶಗಳು ಕಡಿಮೆ ಇರಲಿದೆ. ಮಾತಮಾಡುವಾಗ ತಿಳಿದು ಮಾತನಾಡಿ. ಹಣವನ್ನು ಸಂಪಾದಿಸುವ ಛಲವಿದ್ದು ಸರಿಯಾದ ಮಾರ್ಗದಲ್ಲಿ ಮುಂದುವರಿಯಿರಿ. ಮನೆಯ ಹಿರಿಯರ ಸೇವೆಯಲ್ಲಿ ಆಸಕ್ತಿ ಬರಬಹುದು. ಸೋಲನ್ನು ಒಪ್ಪಿಕೊಂಡು ಸಂತೋಷದಿಂದ ಮುನ್ನಡೆಯುವಿರಿ. ಒರಟು ತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು. ಓಡಾಟದ ಸಮಯದಲ್ಲಿ ನಿಮ್ಮ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು.
ಧನು ರಾಶಿ :
:ಸ್ವಾರ್ಥಯವನ್ನು ಬಿಟ್ಟಾಗ ಸಮೂಹದ ಏಳಿಗೆ ಸಾಧ್ಯ. ಅದರಿಂದ ನಿಮಗೂ ಶ್ರೇಯಸ್ಸೇ. ನಿಮ್ಮ ಆತುರದಿಂದ ಕೆಲವರಿಗೆ ಕೆಸಲವನ್ನು ನಿರ್ವಹಿಸಲಾಗದು. ಇಂದು ನಿಮ್ಮ ಹೊಸ ಉತ್ಸಾಹದಿಂದ ಅಸಂಬದ್ಧವನ್ನು ಮಾಡಿಕೊಳ್ಳಬಹುದು. ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳಿಂದ ಶಾಂತಿ ಇರುವುದು. ಸ್ವಾಭಿಮಾನಕ್ಕೆ ತೊಂದರೆಯಾದರೆ ನಿಮಗೆ ಸಹಿಲಾಗದು. ಓದುವ ಹವ್ಯಾಸವನ್ನು ಹೆಚ್ಚಿಸಿ. ಅಗತ್ಯದ ಖರ್ಚುಗಳಿಗೆ ಮಾತ್ರ ಪ್ರಾಧಾನ್ಯ ನೀಡಿ. ಹಣದ ಹರಿವು ಇಂದು ಮಂದಗತಿಯಲ್ಲಿ ಇರುತ್ತದೆ. ವ್ಯರ್ಥ ಓಡಾಟದಿಂದ ತೊಂದರೆಯಾಗಲಿದೆ. ಎಷ್ಟೇ ಸಮಾಧನಾ ಇದ್ದರೂ ಒತ್ತಡವೂ ನಿಮಗೆ ಗೊತ್ತಿಲ್ಲದೇ ಇರಲಿದೆ. ಕೊಡಬೇಕಾದುದನ್ನು ಕೊಟ್ಟುಬಿಡಿ, ಉಳಿಸಿಕೊಳ್ಳವುದು ಬೇಡ. ಹೆಚ್ಚು ವೃತ್ತಿಗಳಲ್ಲಿ ನಿಮಗೆ ಆಯ್ಕೆಗೆ ಗೊಂದಲವಾಗಬಹುದು. ವಾಯುವಿಹಾರದಿಂದ ಆರೋಗ್ಯದಲ್ಲಿ ಚೇತರಿಕೆ ಇರುವುದು. ಇಂದು ನಿಮಗೆ ಪುಣ್ಯ ಸ್ಥಳದಲ್ಲಿ ಸಮಯವನ್ನು ಕಳೆಯುವುದು ಇಷ್ಟವಾದೀತು.
ಮಕರ ರಾಶಿ :
:ಹಳೆಯ ವಸ್ತುಗಳು ಹೊಸದಾಗಿ ಮಾರಾಟ ಮಾಡುವಿರಿ. ಇಂದು ಹೊಸ ದಾಂಪತ್ಯದಲ್ಲಿ ಸಂಭ್ರಮವಾಗಲಿದೆ. ನಿಮಗಾದ ಒಳ್ಳೆಯ ಅನುಭವವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನವನ್ನು ಇಟ್ಟಕೊಳ್ಳುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದೆ. ಮನೆಯವರನ್ನು ಕರೆದುಕೊಂಡು ದೂರದ ಪ್ರಯಾಣವನ್ನು ಮಾಡುವಿರಿ. ಆಸ್ತಿಗಾಗಿ ದಾಖಲೆಗಳನ್ನು ಬದಲಿಸುವ ಯೋಚನೆ ಮಾಡುವಿರಿ. ನಿಮ್ಮ ಯೋಗ್ಯತೆಯ ಬಗ್ಗೆ ಹಿತಶತ್ರುಗಳ ಅಪಪ್ರಚಾರ ಮಾಡಬಹುದು. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಸ್ಥಾನವನ್ನು ನಿರೀಕ್ಷಿಸಬಹುದು. ಸಂಗಾತಿಯ ಆದಾಯವನ್ನು ಬಳಸಿಕೊಳ್ಳುವಿರಿ. ನೀವು ವೃತ್ತಿಯನ್ನು ಹೊಸ ರೀತಿಯಲ್ಲಿ ನೋಡುವಿರಿ. ಸತ್ಯವನ್ನು ಮುಚ್ಚಿಡುವುದು ನಿಮ್ಮ ಮಾತಿನಲ್ಲಿ ಗೊತ್ತಾಗಲಿದೆ. ಅತಿಯಾದ ಮೋಹದಿಂದ ದುಃಖವಾಗಲಿದೆ. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ.
ಕುಂಭ ರಾಶಿ :
:ಅವಲಂಬಿಸದೇ ಬದುಕುವುದನ್ನು ಕಲಿಯುವುದು ಅಭ್ಯಾಸ ಮಾಡಿಕೊಳ್ಳಬೇಕು. ನೀವು ಇತರರ ದುರ್ಬುದ್ಧಿಯನ್ನು ಅನುಸರಿಸದೇ ಸುಮ್ಮನಿರುವಿರಿ. ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಅನಿರೀಕ್ಷಿತ ಘಟನೆಗಳಿಂದ ನೀವು ಬೆಚ್ಚಿಬೀಳುವಿರಿ. ಹೊಸ ವ್ಯಕ್ತಿಯ ಪರಿಚಯದಿಂದ ಸಂತಸವಾಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಉದ್ಯೋಗಸ್ಥರಿಗೆ ಆದಾಯದಲ್ಲಿ ಅಲ್ಪ ಏರಿಕೆ ಇರಲಿದೆ. ಅವಿವಾಹಿತರಿಗೆ ವಿವಾಹಯೋಗವು ಇರಲಿದೆ. ಯಾರನ್ನೋ ದ್ವೇಷಿಸುವ ಸ್ವಭಾವವು ಬದಲಾಗಲಿ. ಉಚಿತವಾದುದನ್ನು ಪಡೆಯಲು ಶ್ರಮಿಸುವಿರಿ. ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಸುಳ್ಳು ಹೇಳಿ ನಿಮ್ಮಿಂದ ಕಾರ್ಯವನ್ನು ಮಾಡಿಸಿಕೊಂಡಾರು. ಒಂಟಿತನವನ್ನು ಹೆಚ್ಚು ಇಷ್ಟಪಡುವಿರಿ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಮ್ಮ ಕಾರ್ಯವನ್ನು ಮಾಡಬೇಕಾಗುವುದು.
ಮೀನ ರಾಶಿ :
:ಬೆಣ್ಣೆಯಿಂದ ಕೂದಲು ತಗೆದಂತೆ ಮಾತಮಾಡುವಿರಿ. ಇಂದು ನಿಮ್ಮ ದೂರಾಲೋಚನೆಯು ಸರಿಯಾದ ಹಾದಿಯಲ್ಲಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ. ಇಂದು ಯಾರದೋ ಮಾತಿನ ಕಾರಣಕ್ಕೆ ಮನಸ್ಸಿನೊಳಗೇ ಸಂಕಟ ಪಡುವಿರಿ. ಶಾಂತ ಚಿತ್ತದಿಂದ ಎದುರಿಸಿದರೆ ಒಳ್ಳೆಯ ಫಲ ದೊರಕಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಆತುರದಲ್ಲಿ ನಿರ್ಧಾರವನ್ನು ಮಾಡಬೇಡಿ. ವ್ಯಾಪಾರದಲ್ಲಿ ಚಾಣಾಕ್ಷತೆ ಇರುವುದು. ಮಕ್ಕಳ ಬಗ್ಗೆ ಹೆಚ್ಚು ಅನುಮಾನ ಬೇಡ. ವಿದ್ಯಾರ್ಥಿಗಳು ಓದಿನಿಂದ ಶ್ರೇಯಸ್ಸನ್ನು ಪಡೆಯುವರು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಆಪ್ತೆರ ಜೊತೆ ಮೃದುವಾಗಿ ವರ್ತಿಸಿ. ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯವಾಗಿರಲಿ. ವಿವಾಹದ ವಿಚಾರದಲ್ಲಿ ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿನ ಮೇಲೆ ನಂಬಿಕೆ ಇರಲಿ. ನಿಮ್ಮನ್ನು ಹೊಗಳಿ ಶೂಲಕ್ಕೆ ಏರಿಸಬಹುದು. ಸಮಾರಂಭದಿಂದ ನಿಮಗೆ ಸ್ವಲ್ಪ ಬದಲಾವಣೆ ಇರುವುದು.
Views: 93