ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಗುರುವಾರ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಸಾಧ್ಯ, ಕರಣ : ಭದ್ರ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 13 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:11 – 13:42, ಗುಳಿಕ ಕಾಲ 10:41 – 12:11, ಯಮಗಂಡ ಕಾಲ 07:40 – 09:11
ನವರಾತ್ರದ ನಾಲ್ಕನೇ ದಿನವೂ ಚಂದ್ರಘಂಟಾದೇವಿಯ ಆರಾಧನೆ ನಡೆಯಲಿದೆ. ತೃತೀಯಾ ತಿಥಿ ಎರಡೂ ದಿನವಿರುವ ಕಾರಣ ಒಂದೇ ದೇವಿಯನ್ನು ಎರಡು ದಿನ ಪೂಜಿಸುವುದು. ಆಕೆಯ ಅನುಗ್ರಹಕ್ಕೆ ಪಾತ್ರರಾಗುವ ವಿಶೇಷ ದಿನ.
ಮೇಷ ರಾಶಿ :
ಇಂದು ಆರೋಗ್ಯಕ್ಕೆ ಸಂಬಂಧಿಸದ ವ್ಯಾಪಾರದಲ್ಲಿ ಲಾಭ. ಸಿಟ್ಟು ಮಾತ್ರ ತೋರಿಸಿದರೆ ನಿಮ್ಮ ಕೆಲಸವಾಗದು, ಪ್ರೀತಿಯ ಮಾತೂ ಬೇಕು. ನಿಮ್ಮ ಹಲವು ದಿನಗಳ ಮನಸ್ಸಿನ ಗೊಂದಲವು ಪರಿಹಾರವಾಗುವುದು. ಇಂದು ನಿಮ್ಮ ಅನೇಕ ದಿನಗಳ ಆಸೆಯನ್ನು ಪೂರೈಸಿಕೊಳ್ಳುವಿರಿ. ಬೇರೆ ಕಡೆಗೆ ಇರಲು ಬಯಸುವಿರಿ. ಆರ್ಥಿಕತೆಯ ಹಿನ್ನಡೆಯಿಂದಾಗಿ ಕಾರ್ಯಗಳು ಸ್ಥಗಿತಗೊಳ್ಳಬಹುದು. ಆಪ್ತರಿಂದ ಸಹಾಯವನ್ನು ಬಯಸುವಿರಿ. ವಿವಾಹಕ್ಕೆ ಪ್ರತಿಬಂಧಕಗಳನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉಚಿತ. ಹಲವರ ಅಭಿಪ್ರಾಯದಿಂದ ತೀರ್ಮಾನ ಗೊಂದಲವಾಗಿಯೇ ಉಳಿಯುವುದು. ಪ್ರಯಾಣ ಮಾಡುವ ಸ್ಥಿತಿಯು ಬರಬಹುದು. ತಾಯಿಯಿಂದ ನಿಮಗೆ ಪ್ರೀತಿ ಹೆಚ್ಚು ಸಿಗುವುದು. ನಿಮ್ಮ ಆಸಕ್ತಿಯಿಂದ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳಿರಬಹುದು. ಮಾತನ್ನು ಉಳಿಸಿಕೊಳ್ಳುವಿರಿ. ನಿಮ್ಮದಾದ ವಸ್ತುಗಳನ್ನು ನೀವು ಉಳಿಸಿಕೊಳ್ಳಲು ಪ್ರಯತ್ನಿಸಿ. ಅಪರಿಚಿತರ ವ್ಯಕ್ತಿಗಳಿಂದ ನೀವು ಸಂತೋಷಗೊಳ್ಳುವಿರಿ. ಸಹೋದರರಲ್ಲಿ ಸಾಮರಸ್ಯ ಕಾಣಿಸುವುದು.
ವೃಷಭ ರಾಶಿ :
ಎಂದೂ ಇಲ್ಲದ ಕಾಳಜಿಯಿಂದ ನಿಮಗೆ ಭಯ. ಯಾರದೋ ಒತ್ತಾಯಕ್ಕಾಗಿ ಮಾಡುವ ಕಾರ್ಯಗಳು ಹಾಳಾಗುವುದು. ಇಂದು ಮಹಿಳೆಯರ ಸಂಘವು ವ್ಯವಹಾರದಲ್ಲಿ ಲಾಭವನ್ನು ಪಡೆದುಕೊಳ್ಳುವುದು. ವೃತ್ತಿಯಲ್ಲಿ ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಲಿದ್ದೀರಿ. ಸ್ನೇಹಿತರ ಜೊತೆ ಪರ್ಯಟನೆಗೆ ಸಮಯ ನಿಶ್ಚಿಯವಾಗಲಿದೆ. ಸ್ತ್ರೀಯರಿಂದ ಸಹಾಯವು ನಿಮಗೆ ಸಿಗಲಿದೆ. ವೈಯಕ್ತಿಕ ಕಾರ್ಯಗಳಿಗೆ ಸಮಯವನ್ನು ಕೊಡಲಾಗದು. ಒತ್ತಡದ ನಿವಾರಣೆ ಸುತ್ತಾಡಿ ಬರುವ ಮನಸ್ಸಾದೀತು. ನಿಮ್ಮ ನಷ್ಟದ ಉದ್ಯೋಗಕ್ಕೆ ಆಪ್ತರ ಸಲಹೆಯು ಉಪಯೋಗಕ್ಕೆ ಬರಬಹುದು. ಉನ್ನತಮಟ್ಟದ ಅಧಿಕಾರಿಗಳ ಸಹಾಯವನ್ನು ನೀವು ಬಯಸುವಿರಿ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು. ಹಳೆಯ ಪ್ರೇಮಿಯು ಸಹಾಯ ಕೇಳಿ ಬರಬಹುದು. ನಿಮ್ಮ ಸ್ಥಗಿತಗೊಂಡ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳಿ. ಉಪಾಯದಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವುದು ಉತ್ತಮ.
ಮಿಥುನ ರಾಶಿ :
ಸಂಗಾತಿಯ ಮಾತಿನ ಮರ್ಮವನ್ನು ತಿಳಿಯಲಾರಿರಿ. ಅಕಾರಣ ಸಂತೋಷದಿಂದ ನಿಮಗೆ ಉತ್ಸಾಹದಿಂದ ಇರುವಿರಿ. ಇಂದು ನಿಮಗೆ ಯಾರಿಂದಲಾದರೂ ಹೊಗಳಿಕೆ ಸಿಗಲಿದೆ. ನಿಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯವು ಕಡಿಮೆ ಸಿಗಲಿದೆ. ಯಾರದೋ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿರಿ. ಆರ್ಥಿಕ ನಷ್ಟದ ಹಾಗೂ ಸಮಯದ ನಷ್ಟವಾಗಿ ಬೇಸರಿಸುವಿರಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿಕೊಂಡು, ಮಾತನಾಡಿ. ಮಕ್ಕಳ ಕಾರಣಕ್ಕಾಗಿ ವಿದೇಶ ವಾಸ ಅನಿವಾರ್ಯ. ಯಾರ ಜೊತೆಗೂ ಕಟುವಾದ ಮಾತುಗಳನ್ನು ಆಡುವುದು ಬೇಡ. ಆಪ್ತರು ನೀಡುವ ಹಣಕ್ಕಾಗಿ ನೀವು ಇಂದು ಕಾಯುವಿರಿ. ವಾಹನದ ನಷ್ಟವು ನಿಮಗೆ ನಿಮಗೆ ಹೊರೆಯಾದೀತು. ಇನ್ನೊಬ್ಬರ ವಸ್ತುವನ್ನು ಮರಳಿಕೊಡಲು ನೀವು ಮರೆತಿದ್ದು ಇಂದು ಹಿಂದಿರುಗಿಸುವಿರಿ. ಸಾಮಾಜಿಕ ಗೌರವವನ್ನು ನೀವಿಂದು ಪಡೆಯುವಿರಿ. ಉದ್ಯೋಗಿಗಳಿಗೆ ಉದ್ಯಮದಲ್ಲಿಉತ್ತಮ ಅವಕಾಶಗಳು ಬರಲಿವೆ.
ಕರ್ಕಾಟಕ ರಾಶಿ :
ಬಹಳದ ದಿನಗಳ ಅನಂತರ ಸಿಕ್ಕ ಕಾರ್ಯವೂ ಕೈ ತಪ್ಪುವುದು. ಇಂದು ನಿಮ್ಮ ಕಛೇರಿಯ ಕಾರ್ಯಗಳು ಬೇಗನೆ ಮುಕ್ತಾಯವಾಗುವುದು. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುವಿರಿ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ನೀವು ಇಂದು ಅಸರಂಭಿಸಿದ ಕಾರ್ಯವನ್ನು ಪೂರ್ಣ ಆಗುವವರೆಗೂ ಬಿಡುವವರಲ್ಲ. ಸಂಗಾತಿಯ ಜೊತೆ ಸಮಯ ಕಳೆಯುವ ಮನಸ್ಸಾಗುವುದು. ಮನೆ ಬಳಕೆಗೆ ಬೇಕಾದ ವಸ್ತುವನ್ನು ಕಡಿಮೆ ಬೆಲೆಗೆ ಪಡೆಯುವಿರಿ. ರಾತ್ರಿಯ ಪ್ರಯಾಣಕ್ಕೆ ಮನೆಯವರ ಅನುಮತಿ ಸಿಗದು. ವಿದೇಶದ ಸ್ನೇಹಿತನ ಪರಿಚಯವಾಗುವುದು. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನೀವೇ ಹೇಳಿ ಪಡೆದುಕೊಳ್ಳುವಿರಿ. ನಿಮ್ಮ ಗೆಳೆತನವು ಸಂಗಾತಿಗೆ ಅಸೂಯೆಯನ್ನು ಉಂಟುಮಾಡಬಹುದು. ದೀರ್ಘಕಾಲ ನಂಬಿದರಿಂದ ವಂಚನೆ ಸಾಧ್ಯವಿದೆ. ರಾಜಕೀಯವಾಗಿ ಕೆಲವು ಬದಲಾವಣೆಗಳು ಆಗುವುದು. ಯಾರಿಂದಲೂ ಆಗದ್ದನ್ನು ನೀವು ಮಾಡುವುದು ಬೇಡ. ಹಳೆಯ ಸಾಲವನ್ನು ಮರುಪಾವತಿಸುವಿರಿ.
ಸಿಂಹ ರಾಶಿ :
ಒಪ್ಪಂದದ ಹಣ ಬರದೇ ಕಾರ್ಯವನ್ನು ಮುಂದುವರಿಸಲಾರಿರಿ. ವಿದ್ಯಾರ್ಥಿಗಳ ಕನಸು ನನಸಾಗುವುದು. ಯಾರ ವ್ಯಕ್ತಿತ್ವವನ್ನೂ ನೋಡಿದ ಮಾತ್ರಕ್ಕೆ ಅಳೆಯುವಲ್ಲಿ ಸೋಲುವಿರಿ. ನಿಮ್ಮ ಪರೀಕ್ಷೆಯ ಕಾಲವೂ ಆಗಬಹುದು. ನೂತನ ವಸ್ತುವಿನ ಖರೀದಿಯಿಂದ ಮೋಸಹೋಗಬಹುದು. ಅನಗತ್ಯ ವಸ್ತುಗಳನ್ನು ಖರೀದಿಸಿ ಬಂದ ಹಣವನ್ನು ಕಳೆದುಕೊಳ್ಳುವಿರಿ. ಭೂ ಕಲಹವು ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಗೆ ಬೇಕಾದುದನ್ನು ಕೊಡಿಸುವಿರಿ. ಸ್ನೇಹಿತ ಜೊತೆ
ಪ್ರವಾಸವನ್ನು ಯೋಜಿಸುವಿರಿ. ಮನೆಯ ವಾತಾವರಣದ ಕಾರಣ ಕಛೇರಿಯಲ್ಲಿ ಕೆಲಸದ ಮಾನಸಿಕತೆ ಇರದು. ನಿಮ್ಮ ಪರವಾಗಿದ್ದವರೇ ವಿರೋಧವನ್ನು ವ್ಯಕ್ತಪಡಿಸಬಹುದು. ಅಪರಿಚಿತರು ನಿಮ್ಮಿಂದ ಧನಸಹಾಯವನ್ನು ನಿರೀಕ್ಷಿಸುವರು. ಉದ್ಯೋಗಿಗಳಿಗೆ ಖುಷಿ ಆಗಿವಂತೆ ಮಾಡುವಿರಿ. ವಿವಾಹಕ್ಕೆ ನಿಮಗೆ ಮನಸ್ಸು ಇರದು. ಸ್ವತಂತ್ರವಾಗಿ ಇರಲು ನೀವು ಬಯಸಬಹುದು. ಸಮಸ್ಯೆಗಳೆಲ್ಲವೂ ಪರಿಹಾರವಾಗಲಿದೆ. ಬಂಧುಗಳ ಬಗ್ಗೆ ನಿಮಗೆ ಸದಭಿಪ್ರಾಯ ಇರದು. ಬೇರೆಯವರ ಕಾರ್ಯಕ್ಕಾಗಿ ಓಡಾಟಮಾಡುವಿರಿ.
ಕನ್ಯಾ ರಾಶಿ :
ಮಕ್ಕಳು ನಿಮ್ಮ ಮಾತನ್ನು ದ್ವೇಷಿಸುವಂತೆ ನೀವೇ ಮಾಡಿಕೊಳ್ಳುವಿರಿ. ನಿಮ್ಮ ಉದ್ಯೋಗದಲ್ಲಿ ಗಟ್ಟಿತನವನ್ನು ಉಳಿಸಿಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ಅಗತ್ಯದ ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಸಕಾಲಕ್ಕೆ ನಿಮಗೆ ಹಣವು ಸಿಗದೇ ವ್ಯವಹಾರದಲ್ಲಿ ಗೊಂದಲವಾದೀತು. ನೀವು ಅಂದುಕೊಂಡಂತೆ ನಿಮ್ಮ ಬದುಕು ಸಾಗುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಅವಶ್ಯಕ. ಹಿರಿಯರಿಂದ ನಿಮ್ಮ ಕೆಲಸಕ್ಕೆ ಕೆಲವು ಬೈಗುಳಗಳು ಸಿಗಬಹುದು. ನಿಮ್ಮ ಕಾರ್ಯದ ಒತ್ತಡದಿಂದ ಧಾರ್ಮಿಕ ಕಾರ್ಯಗಳಿಗೆ ಸಮಯ ಸಾಲದು. ಯಾರ ಮೇಲೋ ಒತ್ತಡವನ್ನು ಹೇರುವುದು ಸರಿಯೆನಿಸದು. ನೀವು ಕೊಟ್ಟ ವಸ್ತುವನ್ನು ಮರೆತಿದ್ದು ಇಂದು ನೆನಪಾಗಿ ಅದನ್ನು ಹಿಂಪಡೆಯಲು ಪ್ರಯತ್ನಿಸುವಿರಿ. ನಿತ್ಯದ ಕೆಲಸವನ್ನೇ ಹೊಸ ರೀತಿಯಲ್ಲಿ ಮಾಡಲು ಇಚ್ಛಿಸುವಿರಿ. ಆಲಸ್ಯದಿಂದ ಕೆಲಸವನ್ನು ಹೆಚ್ಚು ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿಯೂ ಹೊಸ ಅಧ್ಯಾಯ ತೆರೆಯುವ ಸಂದರ್ಭ ಬರಬಹುದು. ಹೂಡಿಕೆ ವಿಸ್ತರಣೆಗೆ ಅವಸರ ಬೇಡ. ನಿಮ್ಮ ಕಾರ್ಯಭಾರವನ್ನು ವರ್ಗಾಯಿಸಲು ಪ್ರಯತ್ನಿಸುವಿರಿ.
ತುಲಾ ರಾಶಿ :
ಸಂತೋಷದ ವಾತಾವರಣವನ್ನು ಕೆಡಿಸಿಕೊಳ್ಳುವಂತೆ ಮಾಡಿಕೊಳ್ಳಬೇಡಿ. ಅಧಿಕಾರದಲ್ಲಿ ಇದ್ದರೂ ಅದನ್ನು ನಿರ್ವಹಿಸುವ ಕ್ರಮವೂ ಗೊತ್ತಿರಬೇಕು. ಅತಿಥಿಗಳ ಆಗಮನದಿಂದ ನಿಮಗೆ ಕಷ್ಟವಾಗಬಹುದು. ಇನ್ನೊಬ್ಬರ ಆಲೋಚನೆಯನ್ನು ಗೌರವಿಸಿ ಅವರ ಪಾಲಿಗೆ ದೊಡ್ಡವರಾಗುವಿರಿ. ನಿಮಗೆ ಇರುವ ಕಾರ್ಯಕುಶಲತೆಯನ್ನು ಮುಚ್ಚಿಕೊಳ್ಳುವರು. ಇನ್ನೊಬ್ಬರಿಗೆ ನೋವನ್ನು ಕೊಟ್ಟು ಅನಂತರ ಪಶ್ಚಾತ್ತಾಪಪಡುವಿರಿ. ಶುಚಿತ್ವಕ್ಕೆ ಆದ್ಯತೆ ಕಡಿಮೆಯಾಗಲಿದೆ. ನಿಮ್ಮ ಖಾಸಗಿತನವು ಹಿತಶತ್ರುಗಳಿಂದ ಬಯಲಾಗಬಹುದು. ಮನೆಯ ಕೆಲಸಕ್ಕೆ ಹಣವನ್ನು ಖರ್ಚು ಮಾಡಬೇಕಾದೀತು. ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡುವಿರಿ. ಒಳ್ಳೆಯ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ಹೆಚ್ಚಿನ ಆದಾಯದ ಉದ್ಯೋಗವನ್ನು ಹುಡುಕುತ್ತಿರುವಿರಿ. ಬೇಕೆಂದಾಗ ಸಿಗದುದರ ಬಗ್ಗೆ ದುಃಖ ಬರಲಿದೆ. ನಿಮ್ಮ ಸರಳತೆಯು ಇತರರಿಗೆ ಪ್ರೇರಣೆಯಾದೀತು. ಕೆಲವು ಕೆಲಸದ ಭರಾಟೆಯಲ್ಲಿ ಇಂದು ಸಮಯವು ನಿಮ್ಮದಾಗಿರದು.
ವೃಶ್ಚಿಕ ರಾಶಿ :
ಹಲವು ವಿಧದ ಒತ್ತಡದಿಂದ ನೀವು ನಿವೃತ್ತಿಯನ್ನು ಬಯಸುವಿರಿ. ನಿಮ್ಮ ಪ್ರತಿಭೆಯ ಪರಿಚಯು ನಿಮಗೂ ಇತರರಿಗೂ ಆಗುವುದು. ನಿಮ್ಮನ್ನು ಇಂದು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು. ವಿಶ್ವಾಸವನ್ನು ಗಳಿಸುವ ಪ್ರಯತ್ನವು ಸ್ವಲ್ಪಮಟ್ಟಿಗೆ ಸಾಧ್ಯವಾಗುವುದು. ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ತರಬಹುದು. ಮಕ್ಕಳಿಂದ ನಿಮಗೆ ಶ್ರೇಯಸ್ಸು ಸಿಗುವುದು. ಅಸಹಜ ವರ್ತನೆಯಿಂದ ನಿಮ್ಮವರಿಗೆ ಸಿಟ್ಟು ಬರಬಹುದು. ಕಠೋರತೆಯಿಂದಾಗಿ ಹೇಳಿದ ಕೆಲಸವು ಸಾಧ್ಯವಾಗುವುದು. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಸಮಯವನ್ನು ನೀವು ನಿರೀಕ್ಷಿಸುವಿರಿ. ನಿಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಚಾರಗಳನ್ನು ನೀವು ಇನ್ನೊಬ್ಬರಿಂದ ಕೇಳುವಿರಿ. ಮನೋರಂಜನೆ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಮೇಲಧಿಕಾರಿಗಳ ಒತ್ತಡವು ನಿಮಗೆ ಸಾಕಾಗುವುದು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯ ಮಾಡಿ ಅವಕಾಶದಿಂದ ವಂಚಿತರಾಗುವಿರಿ. ನಿಮ್ಮ ರಹಸ್ಯ ಪ್ರೇಮವು ಬಯಲಾದೀತು. ಯಾವುದೇ ವೆಚ್ಚದಲ್ಲಿ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಬೇಡಿ.
ಧನು ರಾಶಿ :
ತರಬೇತಿಗಾಗಿ ಬಹಳ ದೂರ ತೆರಳಬೇಕಿದ್ದು, ಮನೆಯಲ್ಲಿ ಅಸಮಾಧಾನವಾಗಲಿದೆ. ಬಂಧುಗಳ ಮನೆಗೆ ಇಂದು ತೆರಳುವಿರಿ. ನಿಮಗೆ ಇಂದು ಯಾವುದಕ್ಕೆ ಪ್ರಾಮುಖ್ಯ ಕೊಡಬೇಕು ತಿಳಿಯದಾಗುವುದು. ದಾನದಲ್ಲಿ ನೀವು ಬಹಳ ಹಿಂಗೈಯುಳ್ಳವರಾಗುವಿರಿ. ಇಂದು ನಿಮಗೆ ರುಚಿಸುವ ಸಂಗತಿಗಳನ್ನೇ ಮಾತನಾಡುತ್ತಾರೆ ಎಂದು ತಿಳಿಯುವುದು. ಕಛೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಕೇಳಿ ಬಂದರೂ ನಿಮ್ಮ ಮೌನವು ಮಾತಾಗಿ ಬಾರದು. ಸಂಗಾತಿಯನ್ನು ಪಡೆಯಲು ನೀವು ಬಹಳ ಶ್ರಮವಹಿಸುವಿರಿ. ಕೃಷಿಕರು ತಮ್ಮ ಕಾರ್ಯದಲ್ಲಿ ಮಗ್ನರಾಗುವರು. ಇಂದಿನ ಕೆಲವು ಸ್ಥಿತಿಯನ್ನು ಸಮಾಧಾನದಿಂದ ಅರಗಿಸಿಕೊಳ್ಳಬೇಕು. ನಕಾರಾತ್ಮಕ ಮಾತುಗಳು ಕೇಳಿಬಂದರೂ ನಿಷ್ಠೆ ಬದಲಾಗದು. ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವು ಬಹಳ ಉತ್ಸಾಹದಿಂದ ಸಾಗುವುದು. ಮಕ್ಕಳಿಗೆ ಪ್ರೀತಿಯನ್ನು ತೋರಿಸಲು ಸಮಯದ ಅಭಾವ ಆಗಬಹುದು. ಕೃಷಿಯಲ್ಲಿ ಸಾಧಿಸುವ ಛಲವು ಬಂದೀತು. ನಿಮ್ಮ ಪಾಲಿನ ಕೆಲಸ ಕಾರ್ಯಗಳಲ್ಲಿ ಚುರುಕುತನ ಕಂಡುಬಂದು ಮುನ್ನಡೆ ಸಾಧಿಸಲಿದ್ದೀರಿ.
ಮಕರ ರಾಶಿ :
ತೃಪ್ತಿಯಾಗುವ ಕಾರ್ಯಕ್ಕೆ ಇಂದಿನ ಹಣವನ್ನು ನೀಡುವಿರಿ. ಹಳೆಯ ವಸ್ತುಗಳನ್ನು ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗುವುದು. ಪಶ್ಚಾತ್ತಾಪವು ಸಕಾರಾತ್ಮಕ ವಿಚಾರಕ್ಕೆ ಇರಲಿ. ನಿಮ್ಮವರೇ ಆದರೂ ನೀವು ನಂಬಿಕೆಯನ್ನು ಇಡಲಾರಿರಿ. ಹೊಸತನ್ನು ಕಲಿಯುವ ಹಂಬಲವು ಕಡಿಮೆಯಾಗಬಹುದು. ದಿನಕ್ಕಿಂತ ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡಬೇಕಾಗುವುದು. ನಿಮ್ಮದೇ ರೀತಿಯ ಮಾರ್ಗದಲ್ಲಿ ನೀವು ಮುಂದುವರಿಯುವಿರಿ. ಯಾರ ಮಾತನ್ನೂ ಕೇಳುವ ತಾಳ್ಮೆ ಕಡಿಮೆ ಆಗಬಹುದು. ನಿಮ್ಮ ಹೇಳಿಕೆಯನ್ನು ಬದಲಾಯಿಸವುದು ಬೇಡ. ಕಛೇರಿಯಲ್ಲಿ ನಿಮ್ಮ ಬೆಂಬಲಕ್ಕೆ ಯಾರೂ ಬರದಿರುವುದು ಬೇಸರವನ್ನು ತರಿಸುವುದು. ಇಂದಿನ ಕೆಲಸವು ಸಮಯದ ಅಭಾವದಿಂದ ಪೂರ್ಣವಾಗದು. ಮನಸ್ಸಿನ ಸ್ಥಿರತೆಯನ್ನು ತಂದುಕೊಳ್ಳುವುದು ಕಷ್ಟವಾದೀತು. ಪರನಿಂದನೆಯಿಂದ ಆಚೆ ಬರುವುದು ಉತ್ತಮ. ಯಾರನ್ನೂ ಎದುರಿಸುವ ಧೈರ್ಯವನ್ನು ಇಂದು ತೋರಿಸುವಿರಿ. ಇದು ನಿಮ್ಮ ಎಲ್ಲ ನೋವನ್ನು ಮರೆಸಬಹುದು. ಮಾಡಬೇಕಾದುದನ್ನು ಮಾಡಿಯೇ ತೀರುವಿರಿ.
ಕುಂಭ ರಾಶಿ :
ಹಳೆಯದನ್ನು ಮರೆತು ಬಹಳ ಉತ್ಸಾಹದಿಂದ ಎಲ್ಲದರಲ್ಲಿಯೂ ಪಾಲ್ಗೊಳ್ಳುವಿರಿ. ನಿಮ್ಮನ್ನು ಯಾರಾದರೂ ರಾಜಕೀಯ ಕಾರ್ಯಕ್ಕೆ ಬಳಸಿಕೊಳ್ಳಬಹುದು. ನಿಮ್ಮ ಬೆಳವಣಿಗೆಯು ಇತರಿಗೆ ಕಷ್ಡವಾಗಬಹುದು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಜಯವು ಸಿಗಲಿದೆ. ಯಾದ್ದಾದದರೂ ಕಣ್ತಪ್ಪಿಸಿ ಏನನ್ನಾದರೂ ಮಾಡಲಾಗದು. ಗೆಳೆಯರ ಸಹವಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಮುಖಂಡರಾಗಿ ಪಕ್ಷಪಾತವನ್ನು ಮಾಡುವುದು ಯೋಗ್ಯವಾಗದು. ನಿಮಗೆ ಹೆಚ್ಚು ವಿದ್ಯಾಭ್ಯಾಸವನ್ನು ಮಾಡಬೇಕು ಎಂದನಿಸಬಹುದು. ಮನೆಯಿಂದ ಯಾವುದೇ ಸಹಕಾರವನ್ನು ಇಷ್ಟಪಡಲಾರಿರಿ. ಬರುವ ಹಣದ ನಿರೀಕ್ಷೆಯಲ್ಲಿ ಇರುವಿರಿ. ವೃತ್ತಿಯಲ್ಲಿ ಗಟ್ಟಿಯಾಗಿ ನಿಲ್ಲುವತನಕ ಸ್ವಲ್ಪ ಗೊಂದಲವು ಇರುವುದು. ಖರ್ಚಿಗಾಗಿ ತಂದೆಯಿಂದ ಹಣವನ್ನು ಪಡೆಯುವಿರಿ. ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ನೀಡುವಿರಿ. ಕೆಲವು ಅಹಿತಕರ ಜನರನ್ನು ಭೇಟಿಯಾಗುವುದರಿಂದ ಅನಗತ್ಯ ತೊಂದರೆಗಳನ್ನು ಎದುರಿಸಬೇಕಾಗಬಹುದು.
ಮೀನ ರಾಶಿ :
ಸಾಹಸದ ಕಾರ್ಯಕ್ಕೆ ಸಂಪೂರ್ಣ ಧೈರ್ಯವಿರದು. ಬೇಸರದಲ್ಲಿ ಇರುವ ನಿಮಗೆ ಮತ್ತೆ ಬೇಸರ ತರಿಸುವ ಕೆಲಸವನ್ನು ಮಾಡಿಸಬಹುದು. ಇಂದು ನಿಮ್ಮನ್ನು ಭೇಟಿ ಮಾಎಡಲು ಬಂದವರನ್ನು ಅಗೌರವದಿಂದ ಕಾಣುವಿರಿ. ಅನಿವಾರ್ಯ ಕಾರಣದಿಂದ ನಿಮ್ಮ ಇಂದಿನ ಯೋಜನೆಯನ್ನು ಬದಲಿಸಬೇಕಾಗುವುದು. ಬೆಳಗಿನಿಂದಲೇ ಮಾನಸಿಕ ಕಿರಿಕಿರಿ ಆರಂಭ. ಸಿಟ್ಟುಗೊಳ್ಳುವ ಸಂದರ್ಭದಲ್ಲಿ ನಿಮ್ಮ ನಿಯಂತ್ರಣವನ್ನು ಕಳೆದುಕೊಳ್ಳುವುದು ಬೇಡ. ಒಳ್ಳೆಯ ಕರ್ಮದಿಂದ ಪುಣ್ಯದ ಫಲವನ್ನು ಸಂಪಾದಿಸುವಿರಿ. ಸಂಗಾತಿಯನ್ನು ನೀವು ಬೇಸರಿಸಿ ಸಮಾಧಾನ ಮಾಡುವಿರಿ. ನಿದ್ರೆಯನ್ನು ಅಧಿಕವಾಗಿ ಮಾಡಲಿದ್ದೀರಿ. ಸಹೋದರರ ಭೇಟಿಯು ಸಂತಸವನ್ನು ನೀಡುವುದು. ನೌಕರರಿಂದ ನಿಮ್ಮ ಕೆಲಸವು ಸುಲಭವಾಗುವುದು. ಮನೆಯಲ್ಲಿ ನೆಮ್ಮದಿಯ ಕೊರತೆ ಇದ್ದ ಕಾರಣ ವಾಯುವಿಹಾರವನ್ನು ಸ್ನೇಹಿತರ ಜೊತೆ ಮಾಡುವಿರಿ. ಒತ್ತಡವನ್ನು ಉಪಾಯದಿಂದ ಕಡಿಮೆ ಮಾಡಿಕೊಳ್ಳುವಿರಿ. ಸ್ವಂತ ವ್ಯಾಪಾರ, ವ್ಯವಹಾರ ಹಾಗೂ ಕೌಟುಂಬಿಕ ವಿಚಾರಗಳಲಿದ್ದ ಒತ್ತಡಗಳು ನಿವಾರಣೆಯಾಗಲಿವೆ.
Views: 36