ಶಿವಣ್ಣನ ಸಿನಿಜರ್ನಿಗೆ 38 ವರ್ಷ: 135 ಸಿನಿಮಾಗಳ ಬಳಿಕವೂ ಕಮ್ಮಿಯಾಗದ ಎನರ್ಜಿ.

ಅಭಿಮಾನಿಗಳು ಪ್ರೀತಿಯಿಂದ ‘ಕರುನಾಡ ಚಕ್ರವರ್ತಿ’ ಎಂದು ಕರೆಯುವ ಶಿವರಾಜ್​ಕುಮಾರ್ (Shivarajkumar)​ ಅವರಿಗೆ ಫೆಬ್ರವರಿ 19 ಎಂದರೆ ತುಂಬ ವಿಶೇಷ ದಿನ. ಯಾಕೆಂದರೆ, ಮೊದಲ ಬಾರಿ ಹೀರೋ ಆಗಿ ಶಿವರಾಜ್​ಕುಮಾರ್​ ಅವರು ಕ್ಯಾಮೆರಾ ಎದುರು ನಿಂತ ದಿನಾಂಕ ಅದು. ಹೌದು, 1986ರ ಫೆಬ್ರವರಿ 19ರಂದು ಶಿವಣ್ಣನ ಮೊದಲ ಸಿನಿಮಾ ‘ಆನಂದ್​’ (Anand Kannada Movie) ಮುಹೂರ್ತ ನೆರವೇರಿತ್ತು. ಅಂದಿನಿಂದ ಇಂದಿಗೆ ಬಣ್ಣದ ಲೋಕದ ಜರ್ನಿಯಲ್ಲಿ ಅವರು 38 ವರ್ಷಗಳನ್ನು ಪೂರೈಸಿದ್ದಾರೆ. ಇದು ಸಣ್ಣ ಪಯಣವಲ್ಲ. ಇಂದಿಗೂ ಶಿವಣ್ಣ (Shivanna) ಅದೇ ಚಾರ್ಮ್​ ಉಳಿಸಿಕೊಂಡಿದ್ದಾರೆ. ಈ ಸಾಧನೆಗಾಗಿ ಅವರಿಗೆ ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕಾಮನ್​ ಡಿಪಿ ವೈರಲ್​ ಆಗಿದೆ.

ಮೇರುನಟ ಡಾ. ರಾಜ್​ಕುಮಾರ್​ ಅವರ ಪುತ್ರನಾಗಿದ್ದರೂ ಕೂಡ ತಮ್ಮದೇ ರೀತಿಯಲ್ಲಿ ಶಿವಣ್ಣ ಗುರುತಿಸಿಕೊಂಡರು. ಮೊದಲ ಮೂರು ಸಿನಿಮಾಗಳ ಮೂಲಕ ಗೆಲುವು ಪಡೆದು ‘ಹ್ಯಾಟ್ರಿಕ್​ ಹೀರೋ’ ಎನಿಸಿಕೊಂಡರು. ಅಂದಿನಿಂದ ಇಂದಿನತನಕ ಶಿವರಾಜ್​ಕುಮಾರ್​ ಅವರು ಹಿಂದಿರುಗಿ ನೋಡಿಲ್ಲ. ನೂರಾರು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ತಮ್ಮ ಪ್ರತಿಭೆ ಏನು ಎಂಬುದನ್ನು ಶಿವಣ್ಣ ಸಾಬೀತುಪಡಿಸಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಅವರೇ ಸಾಟಿ ಎನ್ನಬಹುದು.

https://pbs.twimg.com/media/GGnu-bKXMAAn_48?format=jpg&name=small

ಶಿವರಾಜ್​ಕುಮಾರ್​ ಅವರು 38 ವರ್ಷಗಳ ಈ ಸಿನಿಮಾ ಜರ್ನಿಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ‘ಓಂ’, ‘ಜೋಗಿ’, ‘ಜನುಮದ ಜೋಡಿ’, ‘ತವರಿಗೆ ಬಾ ತಂಗಿ’, ‘ಟಗರು’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ‘ನಿಂಗೆ ನಂಬರ್​ಗಳೇ ಲೆಕ್ಕ ಇಲ್ಲಣ್ಣ..’ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಶಿವಣ್ಣನ ದಿ ಬೆಸ್ಟ್​ ಸಿನಿಮಾಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ತಮ್ಮ ಇಷ್ಟದ ದೃಶ್ಯ, ಹಾಡು, ಡೈಲಾಗ್​ಗಳನ್ನು ಫ್ಯಾನ್ಸ್​ ಮೆಲುಕು ಹಾಕುತ್ತಿದ್ದಾರೆ.

ಈಗ ಶಿವರಾಜ್​ಕುಮಾರ್​ ಅವರಿಗೆ 61 ವರ್ಷ ವಯಸ್ಸು. ಈಗಲೂ ಕೂಡ ಅವರು ಹದಿಹರೆಯದ ಯುವಕನಂತೆ ಎನರ್ಜಿ ಉಳಿಸಿಕೊಂಡಿದ್ದಾರೆ. ಯಾವ ಹೊಸ ಹೀರೋಗೂ ಕಮ್ಮಿ ಇಲ್ಲದಂತೆ ಆ್ಯಕ್ಷನ್​ ದೃಶ್ಯಗಳಲ್ಲಿ ಅವರು ನಟಿಸುತ್ತಾರೆ. ಶಿವಣ್ಣನ ಎನರ್ಜಿ ಬಗ್ಗೆ ಮಾತನಾಡದವರೇ ಇಲ್ಲ. ಎಷ್ಟೋ ಹೀರೋಗಳಿಗೆ ಅವರೇ ಸ್ಫೂರ್ತಿ. ಸಿನಿಮಾ ಕೆಲಸಗಳನ್ನು ಪಟಪಟನೆ ಮುಗಿಸುವ ಮೂಲಕ ಅವರು ಆ್ಯಕ್ಟೀವ್​ ಆಗಿದ್ದಾರೆ. ಅನೇಕ ಸಮಾಜಮುಖಿ ಕೆಲಸಗಳ ಮೂಲಕವೂ ಜನರ ಹೃದಯ ಗೆದ್ದಿದ್ದಾರೆ. ಹಲವು ಪ್ರಾಜೆಕ್ಟ್​ಗಳಲ್ಲಿ ಶಿವರಾಜ್​ಕುಮಾರ್​ ಬ್ಯುಸಿ ಆಗಿದ್ದಾರೆ. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ನಿರ್ಮಾಪಕರು, ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ. 135ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅವರು ಮುನ್ನುಗ್ಗುತ್ತಿದ್ದಾರೆ. ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಕನ್ನಡ ಮಾತ್ರವಲ್ಲದೇ, ಪರಭಾಷೆಯಲ್ಲೂ ಶಿವರಾಜ್​ಕುಮಾರ್​ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. 2023ರಲ್ಲಿ ತೆರೆಕಂಡ ರಜನಿಕಾಂತ್​ ನಟನೆಯ ತಮಿಳಿನ ‘ಜೈಲರ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮಾಡಿದ ನರಸಿಂಹ ಎಂಬ ಪಾತ್ರ ಸಖತ್​ ಕ್ರೇಜ್​ ಸೃಷ್ಟಿಸಿತು. 2024ರ ಜನವರಿ 12ರಂದು ಬಿಡುಗಡೆಯಾದ ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲಿ ಧನುಷ್​ ಜೊತೆ ಶಿವರಾಜ್​ಕುಮಾರ್​ ಅವರು ತೆರೆ ಹಂಚಿಕೊಂಡರು. ಪರಭಾಷೆಯಿಂದ ಅವರಿಗೆ ಹಲವು ಆಫರ್​ಗಳು ಬರುತ್ತಿವೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *