World Cup 2023: 2023 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸತತ 6 ಪಂದ್ಯಗಳನ್ನು ಗೆದ್ದಿದ್ದರೂ, ಇನ್ನು ಕೂಡಾ ಎಲ್ಲವೂ ನಿರಾಳ ಅಲ್ಲ.
World Cup 2023 : ವಿಶ್ವಕಪ್ 2023ರಲ್ಲಿ ರೋಹಿತ್ ಶರ್ಮಾ ಪಡೆ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ. 2023ರ ವಿಶ್ವಕಪ್‌ನಲ್ಲಿ ಭಾರತ ಇದುವರೆಗೆ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳನ್ನು ಸೋಲಿಸಿದೆ. 2023ರ ವಿಶ್ವಕಪ್‌ನಲ್ಲಿ ಸತತ 6 ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ 12 ಅಂಕಗಳನ್ನು ಹೊಂದಿದೆ. ವಿಶ್ವಕಪ್ 2023 ರ ಸೆಮಿಫೈನಲ್ ತಲುಪಬೇಕಾದರೆ ಇನ್ನು ಒಂದು ಪಂದ್ಯವನ್ನು ಗೆದ್ದರೆ ಸಾಕು. 2023ರ ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಗೆಲುವಿನ ಬಗ್ಗೆ ಅತಿಯಾದ ಹೆಮ್ಮೆ ಬೇಡ :
2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸತತ 6 ಪಂದ್ಯಗಳನ್ನು ಗೆದ್ದಿದ್ದರೂ, ಇನ್ನು ಕೂಡಾ ಎಲ್ಲವೂ ನಿರಾಳ ಅಲ್ಲ. ರೋಹಿತ್ ಸೇನೆ ಮಾಡುವ ಒಂದು ತಪ್ಪಿನಿಂದ ವಿಶ್ವಕಪ್ 2023 ರ ಸೆಮಿಫೈನಲ್ ತಲುಪುವ ಕನಸು ಮುರಿದು ಬೀಳಬಹುದು. 2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ 6 ಪಂದ್ಯಗಳನ್ನು ಆಡಿದ್ದು, ಇನ್ನೂ 3 ಪಂದ್ಯಗಳನ್ನು ಆಡಬೇಕಿದೆ. ಇನ್ನು ಭಾರತ ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ, ನವೆಂಬರ್ 5 ರಂದು ದಕ್ಷಿಣ ಆಫ್ರಿಕಾ ಮತ್ತು ನವೆಂಬರ್ 12 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯಗಳನ್ನು ಆಡಬೇಕಾಗಿದೆ.
ಭಗ್ನವಾಗಬಹುದು ಸೆಮಿಫೈನಲ್ ಕನಸು :
2023ರ ವಿಶ್ವಕಪ್‌ನಲ್ಲಿ ಸತತ 6 ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ 12 ಅಂಕಗಳನ್ನು ಹೊಂದಿದೆ. ಪ್ರಸ್ತುತ, 2023 ರ ವಿಶ್ವಕಪ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನವನ್ನು ತಲುಪಿದ್ದು, ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿದೆ. ಸತತ ಆರು ಪಂದ್ಯಗಳನ್ನು ಗೆದ್ದ ನಂತರವೂ, ರೋಹಿತ್ ಟೀಂ ಅಧಿಕೃತವಾಗಿ ವಿಶ್ವಕಪ್ 2023ರ ಸೆಮಿಫೈನಲ್‌ಗೆ ಪ್ರವೇಶಿಸಿಲ್ಲ. 2023ರ ವಿಶ್ವಕಪ್‌ನ ಲೀಗ್ ಹಂತದಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತರೆ, ಸೆಮಿಫೈನಲ್‌ಗೆ ಪ್ರವೇಶಿಸುವ ಅವಕಾಶ ಕೈ ತಪ್ಪಬಹುದು.
ಮುಂದಿನ 3 ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಕೇವಲ 1 ಗೆಲುವಿನ ಅಗತ್ಯವಿದೆ :
ವಿಶ್ವಕಪ್ 2023ರ ಸೆಮಿಫೈನಲ್ ತಲುಪಲು, ಈಗ ಟೀಮ್ ಇಂಡಿಯಾ ಮುಂದಿನ 3 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆಲ್ಲಬೇಕಾಗಿದೆ. ಆದರೆ, ಒಂದು ವೇಳೆ ಟೀಂ ಇಂಡಿಯಾ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಸೋತರೆ, ಸೆಮಿಫೈನಲ್‌ಗೆ ತಲುಪುವ ಸಾಧ್ಯತೆಗೆ ತೊಡಕುಂಟಾಗಬಹುದು. ಏಕೆಂದರೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಎರಡೂ ಐದು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಹೊಂದಿವೆ. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಭಾರತದ 12 ಅಂಕಗಳನ್ನು ಸರಿಗಟ್ಟಬಹುದು. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯವನ್ನು ಯಾರು ಗೆದ್ದರೂ ಟೀಮ್ ಇಂಡಿಯಾವನ್ನು ಸರಿಗಟ್ಟಬಹುದು. ಅವರ ನೆಟ್ ರನ್ ರೇಟ್ ಭಾರತಕ್ಕಿಂತ ಉತ್ತಮವಾಗಿದ್ದರೆ ರೋಹಿತ್ ಟೀಂ ನಿರಾಶೆಯನ್ನು ಎದುರಿಸಬೇಕಾಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1