ನಿತ್ಯ ಭವಿಷ್ಯ| 05 ಸೆಪ್ಟಂಬರ್ |: ಇಂದು ಈ ರಾಶಿಯವರು ಬೇಕಾದವರನ್ನು ಮಾತಿನಿಂದ ವಶಮಾಡಿಕೊಳ್ಳುವರು

ನಿತ್ಯ ಪಂಚಾಂಗ

ಶಾಲಿವಾಹನ ಶಕವರ್ಷ 1948ರ ವಿಶ್ವಾವಸು ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಚಾಂದ್ರ ಮಾಸ, ಸಿಂಹ ಸೌರ ಮಾಸ, ಶುಕ್ಲ ಪಕ್ಷದ ತ್ರಯೋದಶೀ ತಿಥಿ, ಪೂರ್ವಾಫಲ್ಗುಣೀ ನಕ್ಷತ್ರ, ಪ್ರೀತಿ ಯೋಗ, ಕೌಲವ ಕರಣ, ಶುಕ್ರವಾರ.
ಸೂರ್ಯೋದಯ ಬೆಳಿಗ್ಗೆ 06:22, ಸೂರ್ಯಾಸ್ತ ಸಂಜೆ 06:40.
ರಾಹುಕಾಲ ಬೆಳಿಗ್ಗೆ 10:59ರಿಂದ ಮಧ್ಯಾಹ್ನ 12:31ರವರೆಗೆ, ಗುಳಿಕ ಕಾಲ ಬೆಳಿಗ್ಗೆ 07:54ರಿಂದ 09:26ರವರೆಗೆ, ಯಮಗಂಡ ಮಧ್ಯಾಹ್ನ 15:36ರಿಂದ ಸಂಜೆ 17:08ರವರೆಗೆ ಇರುತ್ತದೆ.

ಮೇಷ ರಾಶಿ

ಇಂದು ಅಪ್ತರಿಂದ ಉಂಟಾಗುವ ಒತ್ತಡದಿಂದ ನಿಮ್ಮ ತಾಳ್ಮೆ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಆದರೆ ತಾಳ್ಮೆಯನ್ನು ಕಳೆದುಕೊಳ್ಳದೇ ಇದ್ದರೆ ನಿರೀಕ್ಷಿತ ಫಲ ದೊರೆಯುವುದು ಖಚಿತ. ಮನೆಯಲ್ಲೇ ಸಣ್ಣ ತೊಂದರೆ ಉಂಟಾಗಬಹುದು. ಗುರಿಯನ್ನು ತಲುಪಲು ಸ್ವಲ್ಪ ವಿಳಂಬ ಆಗಬಹುದು. ಬಂಧುಗಳು ತಪ್ಪು ದಾರಿಗೆ ಒಯ್ಯುವರು, ಆದ್ದರಿಂದ ವಿವೇಕವನ್ನು ಬಳಸುವುದು ಮುಖ್ಯ. ಸಂಗಾತಿಯೊಂದಿಗೆ ದೂರ ಪ್ರಯಾಣ ಸಾಧ್ಯ. ನಿಮ್ಮ ಸಹಾಯ ಕೇಳುವವರು ಇರುತ್ತಾರೆ ಮತ್ತು ನೀವು ಅವರಿಗೆ ನೆರವಾಗುವಿರಿ. ಆದಾಯದ ವಿಷಯದಲ್ಲಿ ಹೊಸ ಆಲೋಚನೆಗಳು ಮೂಡುವುವು.

ವೃಷಭ ರಾಶಿ

ಬಂಧುಗಳ ಸಹಾಯ ಪಡೆಯಬೇಕಾದ ಪರಿಸ್ಥಿತಿ ಬರುವುದು. ದುಡುಕಿ ಮಾತನಾಡಿದರೆ ನಷ್ಟವಾಗುವ ಸಂಭವವಿದೆ. ಕುಟುಂಬದಲ್ಲಿ ಸಾಮಾನ್ಯ ಸೌಖ್ಯ ಇರುತ್ತದೆ. ಇಷ್ಟಮಿತ್ರರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ. ಹೂಡಿಕೆಯ ವಿಚಾರದಲ್ಲಿ ಆಲೋಚನೆ ಹೆಚ್ಚಾಗುತ್ತದೆ. ಸಂತಾನ ಸಂತೋಷವು ದೊರೆಯುವ ಸೂಚನೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವಿರಿ. ಸಾಹಸ ಮಾಡುವಾಗ ಎಚ್ಚರಿಕೆ ಅಗತ್ಯ, ಇಲ್ಲದಿದ್ದರೆ ಮುಖಭಂಗ ಸಾಧ್ಯ. ವಾಹನ ಚಲಿಸುವಾಗ ಎಚ್ಚರಿಕೆ ವಹಿಸಿ. ಆರೋಗ್ಯದಲ್ಲಿ ಚಿಕ್ಕ ಅಸಮಾಧಾನ ಕಂಡುಬರಬಹುದು.

ಮಿಥುನ ರಾಶಿ

ಭೂಮಿಯ ವ್ಯವಹಾರದಲ್ಲಿ ನಿಮಗೆ ಮುನ್ನಡೆ ಸಿಗಬಹುದು, ಆದರೆ ಅಡಚಣೆಗಳೂ ಇರುತ್ತವೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಹೆಚ್ಚುತ್ತದೆ. ಸರ್ಕಾರಿ ಕೆಲಸದಲ್ಲಿ ಸ್ವಲ್ಪ ವೇಗ ಕಂಡುಬರುತ್ತದೆ. ಅಧಿಕಾರಿಗಳ ಸಹಾಯದಿಂದ ಉದ್ಯೋಗದಲ್ಲಿ ಪ್ರಭಾವ ಹೆಚ್ಚುವುದು. ಆದಾಯ ಸರಿಯಾದ ಮಟ್ಟದಲ್ಲಿದ್ದರೂ ಖರ್ಚು ಹೆಚ್ಚಾಗಬಹುದು. ಮನೆಯಲ್ಲಿನ ಸಣ್ಣ ಕಲಹ ತಟಸ್ಥ ಧೋರಣೆ ತಾಳಿದರೆ ಶಾಂತವಾಗಬಹುದು. ಮನಸ್ಸಿಗೆ ನೆಮ್ಮದಿ ಬೇಕಾದರೆ ಶಾಂತವಾಗಿರಿ. ಇನ್ನೊಬ್ಬರ ಮೇಲೆ ಬಲಪ್ರಯೋಗ ಬೇಡ.

ಕರ್ಕಾಟಕ ರಾಶಿ

ತೀವ್ರ ಪರಿಶ್ರಮದಿಂದ ಗುರಿ ಸಾಧನೆ ಸಾಧ್ಯವಾದರೂ, ಸರಳ ಮಾರ್ಗವನ್ನು ನೀವು ಗಮನಿಸುವುದಿಲ್ಲ. ಕುಟುಂಬದಲ್ಲಿ ಹಣಕಾಸಿನ ಒತ್ತಡ ಹೆಚ್ಚಾಗಬಹುದು. ಬಂಧುಗಳಿಗೆ ಸಹಾಯ ನೀಡಿದರೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ವಿವಾಹ ಸಂಬಂಧದ ಸಾಧ್ಯತೆ ಇದೆ ಆದರೆ ಕ್ಷುಲ್ಲಕ ಕಾರಣದಿಂದ ಕೈ ತಪ್ಪಿಸಿಕೊಳ್ಳಬೇಡಿ. ಚಂಚಲ ಮನಸ್ಸನ್ನು ನಿಯಂತ್ರಿಸಿಕೊಳ್ಳುವುದು ಮುಖ್ಯ. ಸಂಗಾತಿಯೊಂದಿಗೆ ಮಾತನಾಡಿ ಮನಸ್ಸಿಗೆ ನೆಮ್ಮದಿ ಪಡೆಯಿರಿ.

ಸಿಂಹ ರಾಶಿ

ನಿಮ್ಮ ಕೆಲಸಗಳಲ್ಲಿ ಬದಲಾವಣೆ ಅಗತ್ಯ. ಅಧಿಕಾರಿಗಳ ನಡುವೆ ವಾಗ್ವಾದ ಸಂಭವಿಸಬಹುದು. ಸಾಲ ತೀರಿಸಲು ಶ್ರಮ ಪಡುವಿರಿ. ಅಹಂಕಾರದಿಂದ ದೂರವಿರುವುದು ಉತ್ತಮ, ಇಲ್ಲದಿದ್ದರೆ ಜನರಿಂದ ದೂರವಾಗುವಿರಿ. ಇಂದಿನ ದಿನದಲ್ಲಿ ಯಾರದೋ ಮಾತು ನಿಮ್ಮ ಬುದ್ಧಿಯನ್ನು ತಪ್ಪುದಾರಿಗೆ ಒಯ್ಯಬಹುದು. ಎಲ್ಲ ವಿಷಯಗಳನ್ನು ನಂಬಿ ಸ್ವೀಕರಿಸುವುದು ಬೇಡ. ಪ್ರೇಮ ಸಂಬಂಧವು ಬುದ್ಧಿಯ ಆಧಾರದ ಮೇಲೆ ಸಾಗುವುದು ಒಳಿತು.

ಕನ್ಯಾ ರಾಶಿ

ಇಂದು ಕೋಪದ ಸನ್ನಿವೇಶಗಳನ್ನು ತಪ್ಪಿಸುವುದು ನಿಮ್ಮ ಜವಾಬ್ದಾರಿ. ಯಾರನ್ನಾದರೂ ಅವಲಂಬಿಸುವುದರಿಂದ ಪ್ರಯೋಜನವಿಲ್ಲ. ಅಧಿಕಾರ ಪಡೆಯಲು ಮಾರ್ಗ ಬದಲಾಯಿಸಬಹುದು. ಖರ್ಚು ನಿಯಂತ್ರಣ ಅಗತ್ಯ. ಮಹಿಳೆಯರಿಂದ ಸಹಾಯ ದೊರೆಯಬಹುದು. ವಿದ್ಯಾಭ್ಯಾಸದಲ್ಲಿ ಅಡಚಣೆ ಉಂಟಾಗಬಹುದು. ಆರೋಗ್ಯದ ಕಡೆ ಎಚ್ಚರಿಕೆ ಅಗತ್ಯ, ಹವಾಮಾನ ಬದಲಾವಣೆಯಿಂದ ದೇಹದ ಮೇಲೆ ಪರಿಣಾಮ ಬರುವ ಸಾಧ್ಯತೆ ಇದೆ. ನ್ಯಾಯಾಲಯ ಸಂಬಂಧಿತ ವಿಚಾರದಲ್ಲಿ ಅನುಭವ ಕಹಿಯಾಗಬಹುದು.

ತುಲಾ ರಾಶಿ

ಹಳೆಯ ತಪ್ಪುಗಳಿಗೆ ಇಂದು ಪ್ರಾಯಶ್ಚಿತ್ತ ಮಾಡುವ ಅವಕಾಶ ಸಿಗಬಹುದು. ಪೂರ್ವಯೋಜಿತ ಕಾರ್ಯಗಳು ಯಶಸ್ವಿಯಾಗುತ್ತವೆ. ದೀರ್ಘಕಾಲದ ನೋವು ಕಡಿಮೆಯಾಗಬಹುದು. ಧಾರ್ಮಿಕ ಸ್ಥಳಗಳಿಗೆ ಭೇಟಿ ಮಾಡುವ ಆಲೋಚನೆ ಬರಬಹುದು. ಉದ್ಯಮದಲ್ಲಿ ಹೊಸ ಲಾಭ ಸಿಗಬಹುದು. ದಾಂಪತ್ಯ ಜೀವನದಲ್ಲಿ ಸಣ್ಣ ಕಲಹ ಸಾಧ್ಯತೆ ಇದೆ. ಮಕ್ಕಳ ವಿಷಯದಲ್ಲಿ ಬಾಲಿಶ ಧೋರಣೆ ತೋರಬೇಡಿ. ಅನಿರೀಕ್ಷಿತ ಅತಿಥಿಗಳ ಆತಿಥ್ಯ ಸಿಗಬಹುದು.

ವೃಶ್ಚಿಕ ರಾಶಿ

ಹಣದ ನಿರೀಕ್ಷೆ ಇಲ್ಲದೇ ಕೆಲಸ ಮಾಡಿದರೆ ಸಂತೋಷ ಸಿಗುತ್ತದೆ. ಮಕ್ಕಳ ವಿಚಾರದಲ್ಲಿ ಸಂತೋಷ ದೊರೆಯಬಹುದು. ಖಾಸಗಿ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಬರಬಹುದು. ಆಸ್ತಿ ಸಂಬಂಧಿತ ಕಲಹ ಉಂಟಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗದೇ ಬೇಸರ ಉಂಟಾಗಬಹುದು. ಹಿರಿಯರ ಮುಂದೆ ಮಾತನಾಡುವಾಗ ಜಾಗರೂಕತೆ ಅಗತ್ಯ. ಅನಗತ್ಯ ವಾದಗಳಿಂದ ದೂರವಿರುವುದು ಉತ್ತಮ.

ಧನು ರಾಶಿ

ಸಹೋದರರಿಂದ ಸಹಾಯ ದೊರೆಯುವ ಸಾಧ್ಯತೆ. ಹಿರಿಯರಿಂದ ನಿರೀಕ್ಷಿತ ಬೆಂಬಲ ಸಿಗದೇ ಬೇಸರವಾಗಬಹುದು. ಮಕ್ಕಳ ವರ್ತನೆ ಮನಸ್ಸಿಗೆ ತೊಂದರೆ ನೀಡಬಹುದು. ಹೆಚ್ಚಾದ ಆದಾಯಕ್ಕಾಗಿ ಸುಳ್ಳು ಹೇಳುವ ಪರಿಸ್ಥಿತಿ ಬರಬಹುದು, ಆದರೆ ಅದರಿಂದ ಕೀರ್ತಿ ಹಾನಿಯಾಗುವ ಸಾಧ್ಯತೆ ಇದೆ. ವಾಹನದಿಂದ ಲಾಭ ದೊರೆಯಬಹುದು, ಆದರೆ ಹೆಚ್ಚು ವೇಗ ಬೇಡ. ಭೂಮಿಯ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯ ಮಾತುಗಳಿಂದ ಮನಸ್ಸಿಗೆ ನೋವುಂಟಾಗಬಹುದು.

ಮಕರ ರಾಶಿ

ಸಂಸ್ಥೆಯಲ್ಲಿ ಪ್ರತಿನಿಧಿಯಾಗಿ ಭಾಗವಹಿಸುವಿರಿ. ನಿಮ್ಮ ಸಾಧನೆಗೆ ಕಚೇರಿಯಲ್ಲಿ ಮೆಚ್ಚುಗೆ ದೊರೆಯುತ್ತದೆ. ಸ್ನೇಹ ಸಂಬಂಧಗಳು ಪ್ರೇಮಕ್ಕೆ ತಿರುಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಸ್ವಂತ ಉದ್ಯೋಗದಲ್ಲಿ ವಂಚನೆ ಎದುರಾಗಬಹುದು. ಕೈಯಲ್ಲಿರುವ ಹಣ ಗೊತ್ತಾಗದಂತೆ ಖಾಲಿಯಾಗಬಹುದು. ನೂತನ ವಸ್ತುಗಳ ಖರೀದಿ ಸಾಧ್ಯ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗದೇ ಬೇಸರ ಉಂಟಾಗಬಹುದು.

ಕುಂಭ ರಾಶಿ

ಅನಿರೀಕ್ಷಿತ ಧನಾಗಮನ ನಿಮ್ಮ ಖುಷಿಯನ್ನು ಹೆಚ್ಚಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಅನವಶ್ಯಕ ವಸ್ತುಗಳನ್ನು ಖರೀದಿಸುವ ಚಟ ಬೆಳೆದುಹೋಗಬಹುದು. ವಿವಾಹ ಮಾತುಕತೆ ವಿಳಂಬವಾಗಬಹುದು. ಲೆಕ್ಕಪತ್ರ ವಿಚಾರದಲ್ಲಿ ಹಿಂದುಳಿಯುವಿರಿ. ಸಭೆಯಲ್ಲಿ ಗೌರವ ದೊರೆಯಬಹುದು. ವಾಹನದಲ್ಲಿ ಪ್ರಯಾಣ ಕಷ್ಟವಾಗಬಹುದು. ಸಿಗದುದರ ಬಗ್ಗೆ ಹೆಚ್ಚು ಚಿಂತಿಸಬೇಡಿ.

ಮೀನ ರಾಶಿ

ಸ್ವಂತ ಕಾರ್ಯದಲ್ಲಿ ಪ್ರಗತಿ ಸಾಧ್ಯ. ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಳ್ಳುವಿರಿ. ಗೃಹೋತ್ಪನ್ನಗಳ ಮಾರಾಟಕ್ಕೆ ಅವಕಾಶ ಸಿಗಬಹುದು. ವೈವಾಹಿಕ ಸಂಬಂಧ ಕಾನೂನು ಹಂತ ತಲುಪುವ ಸಾಧ್ಯತೆ ಇದೆ. ಅಹಂಕಾರ ನಿಯಂತ್ರಿಸುವುದು ಮುಖ್ಯ. ಹಳೆಯ ಕೆಲಸದಲ್ಲಿ ಮಂದಗತಿ ಕಾಣಿಸಬಹುದು. ಸಹೋದ್ಯೋಗಿಗಳು ತಪ್ಪಿಗೆ ನಿಮ್ಮತ್ತ ಬೆರಳು ತೋರಿಸಬಹುದು. ಹೆಚ್ಚು ಶ್ರಮವಿಲ್ಲದೇ ಕೆಲ ಕಾರ್ಯಗಳು ಯಶಸ್ವಿಯಾಗಬಹುದು.

Leave a Reply

Your email address will not be published. Required fields are marked *