ನಿತ್ಯ ಭವಿಷ್ಯ|09 ಅಕ್ಟೋಬರ್: ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡಲ್ಲಿ ಕೆಲಸದಲ್ಲಿ ಪ್ರಗತಿ ಇರಲಿದೆ.

ಅಕ್ಟೋಬರ್​ 09: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತೃತೀಯಾ ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶೂಲಿ, ಕರಣ : ವಣಿಜ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:36 – 15:05, ಗುಳಿಕ ಕಾಲ 09:09 – 10:38, ಯಮಗಂಡ ಕಾಲ 06:10 – 07:39

ಮೇಷ ರಾಶಿ: ಜೊತೆಗಾರರ ವರ್ತನೆಯ ಮೇಲೆ ಅನುಮಾನವು ಬರಬಹುದು. ತಂದೆಯಿಂದ ನಿಮಗೆ ಆರ್ಥಿಕ ಸಹಾಯವಾಗಲಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡಲ್ಲಿ ಕೆಲಸದಲ್ಲಿ ಪ್ರಗತಿ ಇರಲಿದೆ. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡುಗಳು ಆಗಬಹುದು. ಮಕ್ಕಳಿಂದ ಆಗುವ ಅಸಮಾಧಾನವನ್ನು ನೀವು ಸಹಿಸಿಕೊಳ್ಳಲಾರಿರಿ. ಕೆಲವು ಸಂಗತಿಗಳು ನಿಮಗೆ ಗೊತ್ತಾಗದಿದ್ದರೇ ಉತ್ತಮ. ದುಬಾರಿ ಸಾಹಸಕ್ಕೆ ಕೈಹಾಕುವ ಮೊದಲು ನಿಮ್ಮ ವಿವೇಚನೆ ಬಳಸಿ. ಮಯವನ್ನು ಚೆನ್ನಾಗಿ ಬಳಸಿಕೊಳ್ಳಲು ಇಂದು ನೀವು ಉದ್ಯಾನದಲ್ಲಿ ಸಂಚರಿಸಲು ಯೋಜಿಸಿ. ಉದ್ಯೋಗಕ್ಕೆ ಬರವ ಅಡೆತಡೆಗಳನ್ನು ಸರಿಮಾಡಿಕೊಂಡು ಮುನ್ನಡೆಯುವಿರಿ. ಯುವಕರಿಗೆ ಸರಿಯಾದ ಮಾರ್ಗರ್ಶನದವು ಸಿಗದೇ ಕಷ್ಟಪಡುವಿರಿ. ವಾಹನ ಖರೀದಿಯ ವ್ಯವಹಾರವು ನಿಮಗೆ ಸರಿಯಾಗಿ ಮುಕ್ತಾಯವಾಗದು. ಸಹೋದರರ ನಡುವೆ ಆಪ್ತತೆಯು ಹೆಚ್ಚಾಗಬಹುದು. ನಿಮ್ಮ ಕೈತಪ್ಪಿ ಹೋದುದನ್ನು ಪುನಃ ಸ್ವಾಧೀನ ಮಾಡಿಕೊಳ್ಳುವಿರಿ. ಹಳೆಯ ಗೆಳೆಯರ ಸಂಪರ್ಕವು ಅನಿವಾರ್ಯವಾಗಿ ಆಗುವುದು. ಹೂಡಿಕೆಯಲ್ಲಿ ಹಿನ್ನಡೆ ಸಾಧ್ಯತೆ ಇದೆ.

ವೃಷಭ ರಾಶಿ: ಇಂದು ಗಳಿಕೆಗಿಂತ ಕಳೆದುಕೊಂಡಿದ್ದು ಅಧಿಕವಾಗಿ ಕಾಣಿಸುವುದು. ನಿಮಗೆ ಬೇಕಾದಷ್ಟು ಸೌಲಭ್ಯಗಳಿದ್ದರೂ ಕೊರತೆ ಎನಿಸಬಹುದು. ಬಹಳ ದಿನಗಳ ಅನಂತರ ದೂರಪ್ರಯಾಣವನ್ನು ಮಾಡಲು ಹೊರಟಿರುವಿರಿ. ಪುಣ್ಯಸ್ಥಳಗಳ ದರ್ಶನವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡಲಿವೆ. ಆರ್ಥಿಕ ಲೆಕ್ಕಾಚಾರವು ನಿಮ್ಮನ್ನು ಬಿಡಮೇಲು ಮಾಡಬಹುದು. ಅಸೂಯೆಯಂಥ ಅನೇಕ ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆಗಳಿವೆ. ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು. ವೃತ್ತಿಯಲ್ಲಿ ನಿಮಗೆ ಭಯವು ಆರಂಭವಾಗಿದ್ದು ಆಪ್ತರ ಜೊತೆ ಹಂಚಿಕೊಳ್ಳಿ. ನಿಮ್ಮ ಸಾಮರ್ಥ್ಯವು ಎಲೆ‌ಮರೆಯ ಕಾತಿಯಂತೆ ಇರಲಿದೆ. ಪ್ರೇಮವನ್ನು ಹೇಳಿಕೊಳ್ಳಲು ನೀವು ಹಿಂದೇಟು ಹಾಕುವಿರಿ. ಆಪತ್ಕಾಲಕ್ಕೆ ಇಟ್ಟ ಹಣವನ್ನು ಖರ್ಚು ಮಾಡಿಕೊಳ್ಳುವಿರಿ. ಮಕ್ಕಳ ವಿಚಾರದಲ್ಲಿ ನೀವು ದುರ್ಬಲರಾಗುವಿರಿ.

ಮಿಥುನ ರಾಶಿ: ನೀವು ಎಲ್ಲರಲ್ಲಿಯೂ ಋಣಾತ್ಮಕತೆಯನ್ನು ನೋಡಿದರೆ ಯಶಸ್ಸು ನಿಮಗೆ ಸಿಗುವುದು ಕಷ್ಟವಾಗಬಹುದು. ಪ್ರಭಾವಿಗಳ ಜೊತೆ ನೀವು ಪ್ರಯಾಣ ಮಾಡುವಿರಿ. ಉದ್ಯೋಗದಲ್ಲಿ ಮನಸ್ತಾಪ ಬಂದು ನೀವು ಆ ಉದ್ಯೋಗವನ್ನು ಬಿಡುವಿರಿ. ಮೇಲಧಿಕಾರಿಗಳ ಜೊತೆ ವಾಗ್ವಾದ ಬೇಡ. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಆಗದೇ ಇರುತ್ತವೆ. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಮರೆವು ನಿಮಗೆ ಬಹಳ ತೊಂದರೆಯನ್ನು ಕೊಟ್ಟೀತು. ಉದ್ಯಮವನ್ನು ಮಾಡುವ ಮೊದಲು ಅದರ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಿ. ಅಪರಿಚಿತರ ಕರೆಯಿಂದ ನಿಮಗೆ ಕಷ್ಟವು ಬರಬಹುದು. ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ಚಿಂತಿಸಬೇಡಿ. ನಿಮ್ಮ ದುಃಖ ಇಂದು ಮಂಜುಗಡ್ಡೆಯ ಹಾಗೆ ಕರಗುತ್ತದೆ. ಏಕಾಂತ ಬೇಕೆನಿಸಿ ದೂರ ಎಲ್ಲಿಯಾದರೂ ಹೋಗುವ ಮನಸ್ಸು ಮಾಡುವಿರಿ. ಸಜ್ಜನರ ಸಹವಾಸವು ನಿಮ್ಮ ಅಹಂಕಾರದಿಂದ ಇರುವ ಕಾರಣ ಸಿಗದು.

ಕರ್ಕಾಟಕ ರಾಶಿ: ನಿಮ್ಮ ಇಂದಿನ ಮಧ್ಯಸ್ತಿಕೆ ಯಾವ ಪಂಗಡವನ್ನೂ ತೋರಿಸದು. ಸ್ವಂತ ಉದ್ಯೋಗಸ್ಥರಿಗೆ ಲಾಭವಾಗುವುದು. ಸರ್ಕಾರದ ಅಧಿಕಾರಿಗಳು ನಿಮ್ಮನ್ನು ಪೀಡಿಸಬಹುದು. ಸ್ವತಂತ್ರವಾಗಿದ್ದರೂ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ‌ ಭಯವು ಇರುವುದು. ಜೀವನದಲ್ಲಿ ಜುಗುಪ್ಸೆ ಬಂದಂತೆ ವರ್ತಿಸುವಿರಿ. ಮಕ್ಕಳಿಂದ ನೀವು ಪೀಡಿತರಾಗುವಿರಿ. ದಾಂಪತ್ಯದ ಬಿರುಕನ್ನು ನೀವು ಸರಿಮಾಡಲು ಅರ್ಹರು. ಹೊಸತನ್ನು ಕಲಿಯುವ ಆಸೆಯಿದ್ದು ಅವಕಾಶವನ್ನು ಹುಡುಕುವಿರಿ. ಯಾವುದೂ ಜಾದೂವಿನಂತೆ ಆಗದು. ಹಣದ ಆಗಮನವು ನಿಮ್ಮನ್ನು ಯಾವುದೇ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು ನಿಮಗೆ ಗೊತ್ತಿದ್ದ ಯಾರಾದರೂ ಹಣಕಾಸಿಗೆ ಸಂಬಂಧಿಸಿದ ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬಹುದು. ಸಮಯವನ್ನು ನಿರೀಕ್ಷಿಸುವ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಕುಲದಿಂದ‌ ಗೌರವವು ಸಿಗಬಹುದು. ಅಧಿಕಾರಯುತವಾದ ಮಾತು ಲೆಕ್ಕಕ್ಕೆ ಬಾರದು. ಹೊಸ ಆರಂಭದಲ್ಲಿ ವೇಗವನ್ನು ಪಡೆದುಕೊಳ್ಳುವುದು.

ಸಿಂಹ ರಾಶಿ: ನಿಮ್ಮ ಪರೋಪಕಾರವು ಉತ್ತಮವಾದ ಗುಣವಾದರೂ ಅದು ವಿಷಕಾರಿ ಸರ್ಪದಂತೆ ಆಗಬಹುದು. ಬಹು ದಿನಗಳ ವಿವಾಹದ ಚಿಂತೆಯು ನಿಮ್ಮಿಂದ ದೂರಾಗುವುದು. ಲಾಭವು ಇಲ್ಲದ ಪ್ರಯಾಣವು ನಿಮಗೆ ಬೇಸರವನ್ನು ತರಿಸಬಹುದು. ನಿಮಗೆ ಪ್ರಶಂಸೆಯ ಜೊತೆ ಹೆಚ್ಚಿನ ಜವಾಬ್ದಾರಿಗಳೂ ಬರಬಹುದು. ಮಕ್ಕಳಿಂದ ನಿಮಗೆ ಪ್ರೀತಿ ಸಿಗಬಹುದು. ಪ್ರಯಾಣದ ಆಯಾಸವನ್ನು ಪರಿಹರಿಸಿಕೊಳ್ಖುವುದು ನಿಮಗೆ ಕಷ್ಟವಾದೀತು. ನಿಮ್ಮ ಸ್ವಲ್ಪ ಸಮಯವನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಕಳೆಯಬಹುದು. ಇಂದು, ನೀವು ನಿಮ್ಮ ಸಂಗಾತಿಯ ಪ್ರೀತಿ ಜೀವನದ ನೋವುಗಳನ್ನು ಮರೆಸುವಿರಿ. ಇಬ್ಬರೂ ಒಪ್ಪಿಕೊಂಡ ಸಂಗಾತಿಗಳು ದೂರವಾಗುವ ಸಾಧ್ಯತೆಯೂ ಇದೆ. ಜೊತೆಗಾರರು ನಿಮ್ಮ ಕಂಡು ಹಾಸ್ಯ ಮಾಡಬಹುದು. ಸಂಗಾತಿಗಾಗಿ ಏನನ್ನಾದರೂ ಕೊಡಬೇಕು ಎನಸಿಬಹದು. ಅಧಿಕ ಖರ್ಚನ್ನು ನೀವು ನಿಯಂತ್ರಿಸುವುದು ಒಳ್ಳೆಯದೇ. ಸಮಯವನ್ನು ನೋಡಿಕೊಂಡು ನೀವು ಮುಂದುವರಿಯುವುದು ಯೋಗ್ಯವಿದೆ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು.

ಕನ್ಯಾ ರಾಶಿ: ಇಂದು ನಿಮ್ಮವರ ಮೇಲೆ ನಿಮಗೆ ಸಂದೇಹವು ಆರಂಭವಾಗುವುದು. ಇಂದು ನಿಮ್ಮ‌ ನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವಿರಿ. ಮಾತನಾಡುವಾಗ ಹೆಚ್ಚು ಸ್ಪಷ್ಟತೆ ಇರಲಿ. ಹಣಕಾಸಿನ ಲೆಕ್ಕಾಚಾರದಲ್ಲಿ ನಿಮಗೆ ಕೆಲವು ಗೊಂದಲಗಳು ಬರಬಹುದು. ಯಾರಾದರೂ ನಿಮ್ಮ ಬಳಿ ಅಮೂಲ್ಯವಾದ ವಸ್ತುಗಳನ್ನು ಜೋಪಾನ ಮಾಡಿ ಇಡಲು ಹೇಳಬಹುದು. ಸಹೋದ್ಯೋಗಿಗಳ ಜೊತೆ ನಿಮ್ಮ ವರ್ತನೆಯು ಸರಿಯಾಗಿ ಇರಲಿ. ನೀವು ಆರ್ಥಿಕ ಭಾಗವನ್ನು ಬಲಪಡಿಸಲು ಪ್ರಮುಖ ಸಲಹೆಯನ್ನು ನೀಡುವ ವ್ಯಕ್ತಿಯನ್ನು ಭೇಟಿ ಮಾಡಬಹುದು. ಅಧಿಕ ಲಾಭಕ್ಕಾಗಿ ಏನನ್ನಾದರೂ ಮಾಡಲು ಹೋಗುವುದು ಬೇಡ. ಶತ್ರುಗಳು ನಿಮ್ಮ ಕಾರ್ಯವನ್ನು ತಪ್ಪಿಸಲು ಹುಟ್ಟಿಕೊಳ್ಳಬಹುದು. ವಿದ್ಯಾರ್ಥಿಗಳು ಮನೆಯವರು ಹಾಕಿಕೊಟ್ಟ ಚೌಕಟ್ಟನ್ನು ಮೀರಲಾರರು. ನಿಮ್ಮ ವಿದ್ಯೆಗೆ ಯೋಗ್ಯವಾದ ಉದ್ಯಮವನ್ನು ಅನ್ವೇಷಣೆ ಮಾಡುವಿರಿ. ನಿಮ್ಮ‌ ನಿಜವಾದ ಸ್ವರೂಪ ಗೊತ್ತಾಗಬಹುದು.

ತುಲಾ ರಾಶಿ: ಬಂಧುಗಳ ಮನೆಯಲ್ಲಿ ಯಾರಾದರೂ ನಿಮ್ಮನ್ನೇ ಗುರಿಯಾಗಿಸಿಕೊಂಡು ಮಾತನಾಡಬಹುದು. ತುರ್ತಾಗಿ ಸ್ಥಳ ಬದಲಾವಣೆ ಮಾಡಬೇಕಾಗಬಹುದು. ಬಹು ದಿನಗಳಿಂದ ಇದ್ದ ನಿರುದ್ಯೋಗ ಸಮಸ್ಯೆಯು ಇಂದು ದೂರಾಗಿ, ಬೇಸರವೂ ಕಳೆಯಬಹುದು. ಭೂಮಿಯು ಲಾಭವಾಗುವಂತೆ ಇದ್ದರೂ ಕೈ ತಪ್ಪಿ ಹೋಗಬಹುದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿ ತರಿಸಬಹುದು. ಒಳ್ಳೆಯ ವಸ್ತುವಿನ ಲಾಭವಾಗುವುದು. ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ ಮಕ್ಕಳು ನಿಮ್ಮ ದಿನವನ್ನು ಕಠಿಣಗೊಳಿಸುತ್ತಾರೆ. ಅವರ ಆಸಕ್ತಿ ಕಾಯ್ದುಕೊಳ್ಳಲು ಪ್ರೀತಿಯ ಅಸ್ತ್ರ ಬಳಸಿ ಮತ್ತು ಯಾವುದೇ ಅನಗತ್ಯ ಒತ್ತಡ ತಪ್ಪಿಸಿ. ಅವ್ಯವಹಾರದಿಂದ ಸಹಜವಾದ ಭಯ ನಿಮಗಾಗುವುದು. ಯಾರನ್ನೂ ನೀವು ಕೆಳಮಟ್ಟದಲ್ಲಿ ಕಾಣಲು ಬೇಡ. ಉನ್ನತ ವ್ಯಾಸಂಗಕ್ಕಾಗಿ ನೀವು ಸ್ನೇಹಿತನ‌ ಜೊತೆ ತರಳುವಿರಿ. ಸ್ಥಾನಚ್ಯುತಿಯ ಭಯವು ನಿಮ್ಮನ್ನು ಕಾಡಬಹುದು.‌ಮನೆಯ ಸಂದರ್ಭವನ್ನು ನೆನೆದು ದುಃಖಿಸಬಹುದು. ಬಂಧುಗಳು ನಿಮ್ಮನ್ನು ಅಳೆಯಬಹುದು. ಇಂದು ನೀವು ಕೆಲಸದಿಂದ ವಿರಾಮವನ್ನು ಪಡೆಯುವ ಯೋಚನೆ ಬರುವುದು.

ವೃಶ್ಚಿಕ ರಾಶಿ: ಇಂದು ವಿದ್ಯಾರ್ಥಿಗಳು ಅಭ್ಯಾಸದ ವಿಷಯದಲ್ಲಿ ಮೈಮರೆವು. ಇಂದು ನೀವು ಮಾಡುವ ಕಾರ್ಯದಲ್ಲಿ ವಿಳಂಬವು ಕಾಣಿಸುವುದು. ಅಸೂಯೆಯು ನಿಮ್ಮ ಇತರ ಕೆಲಸಗಳನ್ನು ನಷ್ಟ ಮಾಡಿಸುವುದು. ಸ್ನೇಹಿತರ ಸಹಾಯವು ನಿಮಗೆ ಬಲವನ್ನು ತಂದುಕೊಡುವುದು. ಪ್ರಭಾವೀ ವ್ಯಕ್ತಿಗಳು ನಿಮ್ಮನ್ನು ಆಕರ್ಷಿಸಬಹುದು. ದಾಂಪತ್ಯದಲ್ಲಿ ಮಧುರ ಕ್ಷಣಗಳು ಇರಲಿವೆ. ಎಲ್ಲವನ್ನೂ ತಿಳಿದುಕೊಂಡೂ ನೀವು ಮುಂದೆ ಸಾಗಲು ಭಯಪಡುವಿರಿ. ಕೆಲವರ ಮಾತು ನಿಮ್ಮನ್ನು ನಿಷ್ಕ್ರಿಯಗೊಳಿಸಬಹುದು. ನಿಮ್ಮ ಪ್ರೀತಿಪಾತ್ರರು ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಭಾವಿಸಿದರೆ, ಇಂದು ನೀವು ಅವರೊಂದಿಗೆ ಸಮಯವನ್ನು ಕಳೆಯಿರಿ ಮತ್ತು ನಿಮ್ಮ ಮಾತುಗಳನ್ನು ಸ್ಪಷ್ಟವಾಗಿ ಅವರ ಮುಂದೆ ಇಡಿ. ವ್ಯಾಪಾರವನ್ನು ಮಿತವಾದ ಲಾಭದಲ್ಲಿ ಮಾಡಿ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಅಸಮಾಧಾನದ ವಾತಾವರಣವು ಉಂಟಾಗಬಹುದು. ಕಛೇರಿಯ ಸಮೂಹ ಕಾರ್ಯದಲ್ಲಿ ನೀವು ಪೂರ್ಣವಾಗಿ ಭಾಗಿಯಾಗಲಾರಿರಿ.

ಧನು ರಾಶಿ: ಇಂದು ನಿಮಗೆ ಅಧ್ಯಾತ್ಮದ ಕಡೆಗೆ ಮನಸ್ಸು ಹರಿದರೂ ಸರಿಯಾದ ಮಾರ್ಗದರ್ಶನ ಬೇಕು. ದಾಂಪತ್ಯದಲ್ಲಿ ನಂಬಿಕೆ ದೂರಾಗಬಹುದು. ನಾನಾ ಮಾರ್ಗಗಳಿಂದ ಹಣವು ಬರಬಹುದು. ‌ಉತ್ಸಾಹಕ್ಕೆ ಭಂಗ ಬರುವ ಕಡೆ ನೀವು ಇರಲಾರಿರಿ. ನಿಮ್ಮ ಉದ್ಯೋಗವು ನಿಮಗೆ ಸಾಕೆನಿಸಬಹುದು. ಪ್ರಸಿದ್ಧಿಗಾಗಿ ನೀವು ಹಂಬಲಿಸುವಿರಿ. ನಿಮ್ಮ ಕೆಲಸವನ್ನು ಬಿಟ್ಟು ಇತರರ ಕೆಲಸದ ಕಡೆ ಗಮನ ಹರಿಸುವಿರಿ. ಹೂಡಿಕೆಯಿಂದ ಕೈಯನ್ನು ಸುಟ್ಟುಕೊಳ್ಳಬಹುದು. ಉದ್ಯೋಗದಲ್ಲಿ ಅಧಿಕ ಲಾಭಕ್ಕಾಗಿ ಶ್ರಮಿರಿಸಿದರೂ ಲಾಭವನ್ನು ಪಡೆಯುವುದು ಕಷಗಟವಾದೀತು. ಪತ್ನಿಯೊಂದಿಗೆ ಜಗಳ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ಜೀವನದಲ್ಲಿ ಮಹತ್ವದ ವಿಷಯವೆಂದರೆ ನಾವು ಮಾರ್ಪಡಿಸಲು ಸಾಧ್ಯವಿಲ್ಲದ ವಿಷಯಗಳನ್ನು ಒಪ್ಪಿಕೊಳ್ಳಲು ಕಲಿಯುವುದಾಗಿದೆ. ಪ್ರಾಮಾಣಿಕತೆಯಿಂದ ನಿಮಗೆ ಉನ್ನತ ಸ್ಥಾನವು ಸಿಗಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಗೊಂದಲವು ಬರಬಹುದು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಲು ನಿಮಗೆ ಕಷ್ಟವಾದೀತು.

ಮಕರ ರಾಶಿ: ಇಂದು ಮನೆಯ ಮಂಗಳ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಸ್ವಪ್ರತಿಷ್ಠೆಯಿಂದ ಎಲ್ಲವನ್ನೂ ಹಾಳು ಮಾಡಿಕೊಳ್ಳುವಿರಿ. ಹಿರಿಯರೆದುರು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ದೇವತಾಕಾರ್ಯಗಳಲ್ಲಿ ಆಸಕ್ತಿಯು ಇದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗದು. ಯಾರಾದರೂ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಬಹುದು. ಕಛೇರಿಯಲ್ಲಿ ಅಧಿಕಾರಿಗಳ ನಿಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ವಾದ ಮಾಡಬಹುದು. ಸಾಲವನ್ನು ಕೊಡಲು ಹೋಗುವುದು ಬೇಡ. ಸಹೋದರರಿಗೆ ಮಾರ್ಗದರ್ಶನ ನೀಡಿ ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಅವರನ್ನು ಬೆಂಬಲಿಸಿ. ನಿಮ್ಮ ಸಂಬಂಧಗಳು ಬಳಕೆಯಲ್ಲಿ ಇಲ್ಲದೇ ದೂರವಾಗುವುದು. ನಿಮ್ಮ ಬಿಡುವಿನ ಸಮಯವನ್ನು ನಿಸ್ವಾರ್ಥ ಸೇವೆಯಲ್ಲಿ ವಿನಿಯೋಗಿಸಿ. ಇದು ನೀವು ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ನೀಡುತ್ತದೆ. ನಿಮ್ಮ ಪ್ರೇಮದ ಸಂಗಾತಿ ನಿಮ್ಮನ್ನು ಹೊಗಳಬಹುದು. ಬುದ್ಧಿಪೂರ್ವಕವಾಗಿ ತಪ್ಪುಗಳನ್ನು ಮಾಡಿ ಪಶ್ಚಾತ್ತಪಪಡುವಿರಿ. ಯಾರಿಗೂ ನೀವು ಸುಲಭವಾಗಿ ಸ್ಪಂದಿಸಲಾರಿರಿ. ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸಲು ಸಿದ್ಧರಿರಿ.

ಕುಂಭ ರಾಶಿ: ನಿಮ್ಮ ಆಲೋಚನೆಗಳಿಗೆ ಸರಿಹೊಂದುವವರ ಜೊತೆ ಸಖ್ಯವಾಗಲಿದೆ. ನಿಮಗೆ ಇಂದು ದೇಹಾರೋಗ್ಯವು ಕ್ಷೀಣಿಸಿದಂತೆ ಭಾಸವಾಗುವುದು. ಕೋಪದಲ್ಲಿ ಏನನ್ನಾದರೂ ಹೇಳಬಹುದು, ಜಾಗ್ರತೆ. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ತಡೆಗಟ್ಟುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಇರಲಿದೆ. ಯಂತ್ರಗಳ ವ್ಯಾಪಾರಿಗಳಿಗೆ ಲಾಭದಾಯಕ ದಿನ ಇಂದು‌. ಹಣವನ್ನು ಯೋಚಿಸದೆ ಮತ್ತು ಪರಿಗಣಿಸದೆ ಖರ್ಚುಮಾಡುವುದು. ನಿಮಗೆ ಎಷ್ಟು ನಷ್ಟ ಮಾಡಬಹದು ಎಂಬುದು ಇಂದು ನಿಮಗೆ ಅರ್ಥವಾಗದು. ಒಂದು ಅಂಚೆಯ ಮೂಲಕ ಬಂದ ಪತ್ರ ಇಡೀ ಕುಟುಂಬಕ್ಕೆ ಸಂತೋಷದ ಸುದ್ದಿ ತರುತ್ತದೆ ಅಸತ್ಯದ ಮಾತುಗಳು ಯಾರಿಗೂ ಸಂದೇಶವನ್ನು ಉಂಟುಮಾಡದು. ಇಂದು ನಿಮ್ಮ ಪರಿಶ್ರಮವು ವ್ಯರ್ಥವಾಗಬಹುದು. ಯಾರಾದರೂ ಏನನ್ನಾದರೂ ಕೊಡಲು ಬಂದರೆ ನಿರಾಕರಿಸಿ. ಹಿತಶತ್ರುಗಳಿಗೆ ನಿಮ್ಮ ಯಶಸ್ಸನ್ನು ಸಹಿಸಲಾಗದು. ವ್ಯರ್ಥವಾದ ಚರ್ಚೆಗಳಿಂದ ಸಮಯವನ್ನು ಕಳೆಯುವಿರಿ. ನಿಮ್ಮ ಆಲೋಚನೆಯನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ.

ಮೀನ ರಾಶಿ: ಇಂದು ನಿಮ್ಮ ದೌರ್ಬಲ್ಯವೇ ಶಕ್ತಿಯ ಕೇಂದ್ರವೂ ಆಗಬಹುದು. ರಾಜಕೀಯ ಕ್ಷೇತ್ರದಲ್ಲಿ ಕಾದಾಟ, ವಾಗ್ವಾದಗಳು ಅಧಿಕವಾಗಿ ಇರಲಿವೆ. ಬೇಸರದಿಂದ ಹೊರಬರಲು ನಿಮಗೆ ಕಷ್ಟವಾದೀತು. ನಕಾರಾತ್ಮಕ ಆಲೋಚನೆಗಳೇ ನಿಮ್ಮ ಮನಸ್ಸಿನಲ್ಲಿ ಓಡಾಡುತ್ತವೆ. ಒತ್ತಡದಿಂದ ಕೆಲಸವನ್ನು ಮಾಡಬೇಕಾಗಬಹುದು. ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವ ಸಾಧ್ಯತೆ ಇದೆ. ಸ್ತ್ರೀಯರ ಸಹಾಯದಿಂದ ಜವಾಬ್ದಾರಿಯನ್ನು ಮುಗಿಸುವಿರಿ. ನಿಮ್ಮ ಚಿಂತನೆ ಮತ್ತು ಶಕ್ತಿಯನ್ನು ನೀವು ವಾಸ್ತವವಾಗಿ ಏನನ್ನು ನೋಡಬಯಸುತ್ತೀರೋ ಅದನ್ನು ಸಾಧಿಸುವಲ್ಲಿ ನಿರ್ದೇಶಿಸಿ. ಇದುವರೆಗೆ ನಿಮ್ಮ ಸಮಸ್ಯೆಯಂದರೆ ನೀವು ಪ್ರಯತ್ನಿಸದೇ ಕೇವಲ ಆಸೆಪಡುತ್ತೀರಿ. ಮಕ್ಕಳ ಬಗ್ಗೆ ಹೆಚ್ಚು ಗಮನ ಅಗತ್ಯ. ಯಾರನ್ನು ನೆಚ್ಚುವಿರಿ ಎನ್ನುವುದರ ಮೇಲೆ ನಿಮ್ಮ ಜೀವನಕ್ಕೆ ದಾರಿ ಗೊತ್ತಾಗಲಿದೆ. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯಮವನ್ನು ಹೇಳಿ ಪ್ರಯೋಜನವಿಲ್ಲ. ಯಾರದೋ ತಪ್ಪನ್ನು ನೀವು ಸರಿ ಮಾಡಬೇಕಾದೀತು. ಆಪದ್ಧನವನ್ನು ಕೂಡಿಡುವ ಯೋಚನೆ ಒಳ್ಳೆಯದು.

Views: 46

Leave a Reply

Your email address will not be published. Required fields are marked *