ವಿಶ್ವ ಪರಿಸರ ದಿನಾಚರಣೆ|ಪರಿಸರ ಉಳಿಸಲು ಪ್ರತಿಯೊಬ್ಬರು ಮನೆಯ ಮುಂದೆ ಸಸಿಗಳನ್ನು ನೆಡಬೇಕು : ಉತ್ತಮಚಂದ್ ಸುರಾನಾ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜೂ. 05 : ನಗರದ ಶ್ರೀ ಪಾರ್ಶ್ವನಾಥ ವಿದ್ಯಾ ಸಂಸ್ಥೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಶಾಲಾ ಆವರಣದಲ್ಲಿ ನೆರವೆರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಉಪಾಧ್ಯಕ್ಷರಾದ ಉತ್ತಮ ಚಂದ್ ಸುರಾನಾ ಹಾಗೂ ನಿರ್ದೇಶಕರು ಸುರೇಶ್
ಪಟಿಯಾತ್ ರವರು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ನೆರೆವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಉಪಾಧ್ಯಕ್ಷರಾದ ಉತ್ತಮ ಚಂದ್ ಸುರಾನಾ ಮಕ್ಕಳನ್ನು ಕುರಿತು ಪರಿಸರ ನಮ್ಮ
ಭೂಮಿಯ ಪ್ರಮುಖ ಭಾಗ ಪರಿಸರ ಇಲ್ಲ ಎಂದರೆ ಈ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ ಇತ್ತೀಚಿನ ದಿನಗಳಲ್ಲಿ ಪರಿಸರದ ಪ್ರತಿ
ಅಂಶಕ್ಕೂ ಹಾನಿಯಾಗುತ್ತಿದೆ. ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು ಪರಿಸರವನ್ನು ಉಳಿಸುವ ಸಲುವಾಗಿ ಪ್ರತಿಯೊಬ್ಬರು
ಮನೆಯ ಮುಂದೆ ಒಂದು ಮರವನ್ನು ಬೆಳಸಬೇಕು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಭಾಷಣ, ಹಾಗೂ ಎಲ್ಲರಿಂದ ಪರಿಸರ ದಿನದ ಪ್ರತಿಜ್ಞೆಯನ್ನು
ಮಾಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಶಾಲಾ ವತಿಯಿಂದ ಜಾಥಾವನ್ನು ಹಮ್ಮಿ ಕೊಳ್ಳಲಾಗಿತ್ತು. ವಿದ್ಯಾರ್ಥಿಗಳು
ಪ್ಲೆಕಾರ್ಡ, ಬ್ಯಾನರ್‍ಗಳನ್ನು ಹಿಡಿದು ಕೊಂಡು ಮೆರೆವಣಿಗೆಯಲ್ಲಿ ಪರಿಸರದ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಜಿಮಾ ಸ್ವಾಲೆಹಾ, ಹಾಗೂ ಜನಕ್ ರೆಡ್ಡಿ
ಹಾಗೂ ಕಲಾವಿದರಾದ ನಾಗರಾಜ್ ಬೇದ್ರೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *