ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 28 ಪ್ರತಿ ವರ್ಷದಂತೆ ಶ್ರೀ ಪಾರ್ಶ್ವನಾಥ ವಿದ್ಯಾ ಸಂಸ್ಥೆಯಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ಇಂದು ದಿನಾಂಕ ಫೇ. 28ರ
ಶುಕ್ರವಾರವಾರದಂದು ಶಾಲಾ ಆವರಣದಲ್ಲಿ ಶೈಕ್ಷಣಿಕ ವಿಷಯವಾರು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟನೆಯನ್ನು ಶಾಲಾ ಅಧ್ಯಕ್ಷರಾದ ಶ್ರೀ ಬಾಬುಲಾಲ್ ಜೀ ಪಟಿಯಾತ್ ರವರು ನೆರವೇರಿಸಿ ಮಾತನಾಡಿ ಮಕ್ಕಳು ವೈಜ್ಷಾನಿಕ
ಮನೋಭಾವವನ್ನು ಬೆಳಸಿಕೊಳ್ಳುವುದು ಅತೀ ಮುಖ್ಯ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬುದನ್ನು ಈ ವಸ್ತು
ಪ್ರದರ್ಶನದ ಮೂಲಕ ತಿಳಿದು ಕೊಳ್ಳಬಹುದು ಹಾಗೆಯೇ ವಿಜ್ಷಾನವು ಮೌಡ್ಯತೆ ಮತ್ತು ಅಂಧಕಾರವನ್ನು ನಿರ್ಮೂಲನೆ ಮಾಡಿ ಜೀವ
ಜಗತ್ತಿಗೆ ಪೂರಕವಾದ ಬದುಕನ್ನು ಕಲ್ಪಿಸುತ್ತದೆ ಎಂದು ತಿಳಿಸಿದರು.

ಈ ಪ್ರದರ್ಶನದಲ್ಲಿ ಪ್ಲೇಗ್ರೂಪ್ ನಿಂದ 9ನೇ ತರಗತಿವರೆಗೆ ಸುಮಾರು 150ಕ್ಕೂ ಹೆಚ್ಚು ಪಠ್ಯಕ್ಕೆ ಸಂಬಂಧಪಟ್ಟ ವಿಷಯವಾರು ವಸ್ತು
ಪ್ರದರ್ಶನವನ್ನು ಸುಮಾರು 450 ಮಕ್ಕಳಿಂದ ಪ್ರದರ್ಶಿಸಲಾಯಿತು, ಈ ಪ್ರದರ್ಶನದಲ್ಲಿ ಮಳೆನೀರು ಸಂಗ್ರಹ, ವಾಯು ಮಾಲಿನ್ಯ ,
ಹವಾಮಾನ, ಸೌರ ಮಂಡಳ , ಗ್ರಹಗಳ, ಗಣಕಯಂತ್ರ, ಭಾಷಾವಾರು ವಿಷಯಗಳ ಮಾದರಿಯನ್ನು ಪ್ರದರ್ಶಸಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಉತ್ತಮ್ ಚಂದ್ ಸುರಾನ , ಕಾರ್ಯದರ್ಶಿಸುರೇಶ್ ಕುಮಾರ್
ಸಿಸೋಡಿಯಾ,ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಜಿಮಾ ಸ್ವಾಲೆಹಾ, ವಿಜಯಲಕ್ಷ್ಮೀ, ಶಾಂತಕುಮಾರಿ, ಹಾಗೂ, ಚಿತ್ರಕಲಾ
ಶಿಕ್ಷಕರಾದ ನಾಗರಾಜ್ ಬೇದ್ರೆ, ಶಿಕ್ಷಕರು ಮತ್ತು ಪೋಷಕರು ಸಹ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.