Expensive Cow: ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ಹಸು, ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

ವಿಶ್ವದ ಅತ್ಯಂತ ದುಬಾರಿ ಹಸು: ಜಗತ್ತಿನಲ್ಲಿ ಹಲವಾರು ಸಾಕುಪ್ರಾಣಿಗಳಿವೆ, ಅವುಗಳ ಬಗ್ಗೆ ವಿಭಿನ್ನ ನಂಬಿಕೆಗಳಿವೆ. ಕೆಲವನ್ನು ದೇವತೆಗಳಿಗೂ ಹೋಲಿಸುತ್ತಾರೆ. ಪ್ರತಿಯೊಂದಕ್ಕೂ ವಿಶೇಷ ಮತ್ತು ವಿಭಿನ್ನ ಮಹತ್ವವಿದೆ. ಭಾರತದಲ್ಲಿ ಗೋವಿಗೆ ದೇವರ ಸ್ಥಾನಮಾನ ನೀಡಲಾಗಿದೆ.

ವಿಶ್ವದ ಅತ್ಯಂತ ದುಬಾರಿ ಹಸು: ಜಗತ್ತಿನಲ್ಲಿ ಹಲವಾರು ಸಾಕುಪ್ರಾಣಿಗಳಿದ್ದು, ಇವುಗಳ ಬಗ್ಗೆ ವಿಭಿನ್ನ ನಂಬಿಕೆಗಳಿವೆ. ಕೆಲವನ್ನು ದೇವರ ಸ್ವರೂಪವೆಂದು ಹೇಳಲಾಗುತ್ತದೆ. ಪ್ರತಿಯೊಂದಕ್ಕೂ ವಿಶೇಷ ಮತ್ತು ವಿಭಿನ್ನ ಮಹತ್ವವಿದೆ. ಭಾರತದಲ್ಲಿ ಗೋವಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಇದಕ್ಕಾಗಿಯೇ ಜನರು ಗೋವನ್ನು ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ. ಜಗತ್ತಿನ ವಿವಿಧ ತಳಿಯ ಹಸುಗಳಲ್ಲಿ ವಿಶೇಷತೆ ಇದೆ. ಅತಿಹೆಚ್ಚು ಬೆಲೆಯ ಹಸುವೂ ಇದೆ. ಇದು ವಿಶ್ವದ ಅತ್ಯಂತ ದುಬಾರಿ ಹಸು ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

ಬ್ರೆಜಿಲ್‌ನಲ್ಲಿರುವ ಹಸು ಈ ಸಂದರ್ಭದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಈ ಹಸುವಿನ ಬೆಲೆ ಪ್ರಪಂಚದ ಇತರ ತಳಿಗಳ ಹಸುಗಳಿಗಿಂತಲೂ ಹೆಚ್ಚು. ಈ ಬೆಲೆಯಲ್ಲಿ ನೀವು ಐಷಾರಾಮಿ ಕಾರು, ಬಂಗಲೆ ಮತ್ತು ಇತರ ಅನೇಕ ವಸ್ತುಗಳನ್ನು ಖರೀದಿಸಬಹುದು. ಈ ಹಸುವಿಗೆ ಭಾರತದೊಂದಿಗೆ ವಿಶೇಷ ಸಂಬಂಧವಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ನೆಲ್ಲೂರು ತಳಿಯ ಹೆಸರನ್ನು ಈ ತಳಿಗೆ ಇಡಲಾಗಿದೆ. ಇಲ್ಲಿಂದಲೇ ಈ ತಳಿಯನ್ನು ಬ್ರೆಜಿಲ್‌ಗೆ ಕಳುಹಿಸಲಾಯಿತು, ನಂತರ ಪ್ರಪಂಚದ ಇತರ ಭಾಗಗಳಿಗೂ ಇದರ ಖ್ಯಾತಿ ಹರಡಿತು.

ನೆಲ್ಲೂರು ತಳಿಯ ಈ ಹಸುವಿಗೆ ನಾಲ್ಕೂವರೆ ವರ್ಷ. ನೆಲ್ಲೂರು ತಳಿಯ Viatina-19 FIV ಮಾರಾ ಎಮೋವಿಸ್ ತಳಿಯ ನಾಲ್ಕೂವರೆ ವರ್ಷದ ಹಸು ವಿಶ್ವದ ಅತ್ಯಂತ ದುಬಾರಿ ಹಸುವಾಗಿದೆ. ಈ ಜಾತಿಯ ನೂರಾರು ಹಸುಗಳು ಬ್ರೆಜಿಲ್‌ನಲ್ಲಿ ಕಂಡುಬರುತ್ತವೆ. ವರದಿಗಳ ಪ್ರಕಾರ ಬ್ರೆಜಿಲ್‌ನ ಅರಾಂಡುವಿನಲ್ಲಿ ನಡೆದ ಹರಾಜಿನಲ್ಲಿ ಈ ಹಸುವನ್ನು ಇತ್ತೀಚೆಗೆ 6.99 ಮಿಲಿಯನ್ ರಿಯಲ್‌ಗಳಿಗೆ (11 ಕೋಟಿ ರೂ.) ಮಾರಾಟ ಮಾಡಲಾಗಿದೆ. 3ನೇ ಇದರ ಒಟ್ಟು ವೆಚ್ಚ $4.3 ಮಿಲಿಯನ್ (35 ಕೋಟಿ ರೂ.) ಆಗಿದೆ ಎಂದು ತಿಳಿದುಬಂದಿದೆ.

Viatina-19 FIV ಮಾರಾ ಇಮೊವಿಸ್ ಅನ್ನು ಕಳೆದ ವರ್ಷ ವಿಶ್ವದ ಅತ್ಯಂತ ದುಬಾರಿ ಹಸು ಎಂದು ಘೋಷಿಸಲಾಯಿತು. ಬ್ರೆಜಿಲ್ ಒಂದರಲ್ಲೇ ಈ ತಳಿಯ ಸುಮಾರು 160 ಮಿಲಿಯನ್ ಹಸುಗಳಿವೆ. ಈ ಹಸುಗಳು ಹೊಳೆಯುವ ಬಿಳಿ ತುಪ್ಪಳ, ಸಡಿಲವಾದ ಚರ್ಮವನ್ನು ಹೊಂದಿರುತ್ತವೆ. ನೆಲ್ಲೂರಿನ ಹಸುಗಳು ಬಿಸಿ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ.

Source : https://zeenews.india.com/kannada/india/worlds-most-expensive-cow-the-worlds-most-expensive-cow-the-price-is-shocking-143139

Leave a Reply

Your email address will not be published. Required fields are marked *