ಚಿತ್ರದುರ್ಗ ಸೆ. 16: ಆ.26 ರಂದು ನಡೆದ ಚಿತ್ರದುರ್ಗ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬಿಜೆಪಿಯ ನಾಲ್ವರನ್ನು ಉಚ್ಚಾಟಿಸಲಾಗಿದೆ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಗಿದೆ ಎಂದು ಜಿಲ್ಲಾಧ್ಯಕ್ಷರಾದ ಎ.ಮುರಳಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಚಿತ್ರದುರ್ಗ ನಗರಸಭೆಯ ಅದ್ಯಕ್ಷ/ಉಪಾದ್ಯಕ್ಷ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಮತ ಚಲಾವಣೆ ಮಾಡಿದ್ದು ಪಕ್ಷವು ವಿಪ್ ನೀಡಿದ್ದರು ಸಹ ಅದನ್ನು ಕಡೆಗಣಿಸಿ ಪಕ್ಷಕ್ಕೆ ಮುಜುಗರಕ್ಕೆ ಕಾರಣರಾಗಿರುವ ಇವರುಗಳಿಂದ ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ
ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದಿದ್ದಾರೆ.
ವಾರ್ಡ್ ನಂ 1ರ ನಾಗಮ್ಮ, 17ರ ಜಯ್ಯಪ್ಪ,30ರ ಮಂಜಣ್ಣ ಹಾಗೂ 33 ನೇ ವಾರ್ಡನ ಶ್ರೀದೇವಿ ಚಕ್ರವರ್ತಿ ಪಕ್ಷದಿಂದ ಉಚ್ಚಾಟನೆ ಮಾಡಿದ ನಗರಸಭಾ ಸದಸ್ಯರಾಗಿದ್ದಾರೆ.