ಚಿತ್ರದುರ್ಗದಲ್ಲಿ ವಿಜೃಂಭಣೆಯ ಹಿಂದೂ ಸಂಗಮ ಹಾಗೂ ಬೃಹತ್ ಶೋಭಾಯಾತ್ರೆ

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜ. 26 

ಹಿಂದೂಗಳಲ್ಲಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹೋಗಲಾಡಿಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದರೆ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರವಾಹ ಪಟ್ಟಭಿರಾಮ ತಿಳಿಸಿದರು.

ಹಿಂದೂ  ಸಂಗಮ ಆಯೋಜನ ಸಮಿತಿವತಿಯಿಂದ ನಗರದ ವಿದ್ಯಾ ನಗರದ ಮೇದೇಹಳ್ಳಿ ರಸ್ತೆಯಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದ ಪಕ್ಕದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು ಇಡೀ ಜಗತ್ತಿಗೆ ಹಿಂದೂ ಧರ್ಮ ಒಳ್ಳೆಯದ್ದನ್ನೇ ಬಯಸಿದೆ ಬೇರೆ ಧರ್ಮಗಳಿಂದ ಜಗತ್ತಿಗೆ ತೊಂದರೆಯಾಗಿದೆ ಹೊರತು ಹಿಂದೂ ಧರ್ಮದಿಂದಲ್ಲ. ಗಂಡಾಂತರ ಎದುರಾದಾಗ ಪ್ರತಿರೋಧ ವ್ಯಕ್ತಪಡಿಸುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಹಿಂದೂಗಳಲ್ಲಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಹೋಗಲಾಡಿಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದರೆ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಭಾರತೀಯರಾದ ನಾವು ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯದೆ ಪಾಲನೆ ಮಾಡಬೇಕು. ಹಿಂದಿನ ಇತಿಹಾಸ ತಿಳಿದುಕೊಳ್ಳಬೇಕಲ್ಲದೆ, ಒಗ್ಗೂಡಿ ದೇಶದ ರಕ್ಷಣೆಗೆ ಮುಂದಾಗಬೇಕು ಜಗತ್ತಿಗೆ ಒಳಿತು ಮಾಡುವುದು ಭಾರತ ದೇಶದ ಉದ್ದೇಶ. ಹಾಗಾಗಿ ಭಾರತದಲ್ಲಿ ಹಿಂದೂ ಧರ್ಮ ರಕ್ಷಣೆಯಾಗಬೇಕು. ಎಲ್ಲರಿಗೂ ಒಳಿತು ಮಾಡಲು ಹಿಂದೂ ಸಮಾಜ ಶಕ್ತಿಯುತವಾಗಬೇಕು ಹಿಂದೂ ಸಮಾಜ ಶಕ್ತಿಯುತವಾಗಬೇಕು. ಆ ಮೂಲಕ ಹಿಂದೂ ಧರ್ಮದ ರಕ್ಷಣೆಯಾಗಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಮನೆ ಮನೆಯಲ್ಲೂ ಈ ಕೆಲಸ ನಡೆಯುಬೇಕು ಎಂದರು. 

ಹಿಂದೂ ಸಮಾಜ ಕೇವಲ ತತ್ವದಿಂದ ಉಳಿಯಲಿಲ್ಲ. ಹೋರಾಟದಿಂದ ಉಳಿದಿದೆ. ಶಿವಾಜಿ ಮಹರಾಜ ರಂತಹ ಅನೇಕ ವೀರರು ಹಿಂದೂ ಸಮಾಜದ ರಕ್ಷಣೆಗಾಗಿ ಹೋರಾಟಿದ್ದಾರೆ. ಅದರಂತೆ ಪ್ರತಿಯೊಬ್ಬರೂ ಸಶಕ್ತ ಹಿಂದೂ ಹಿಂದೂ ಆಗಬೇಕು ಭಾರತ ಮಾತೃ ಪ್ರಧಾನ ರಾಷ್ಟ್ರ. ಹಾಗಾಗಿ ಇಲ್ಲಿ ಹೆಣ್ಣನ್ನು ಗೌರವದಿಂದ ಕಾಣಲಾಗುತ್ತದೆ. ಹಾಗಾಗಿ ಭಾರತದ ಸಂಸ್ಕೃತಿಯಲ್ಲಿ ಪ್ರಕೃತಿ, ನದಿ, ದೇವತೆಗಳಿಗೆ ತಾಯಿಯ ಸ್ಥಾನ ನೀಡಲಾಗಿದೆ. ಪ್ರತಿ ಮನೆ ಮನೆಗಳಲ್ಲಿ ತಂದೆ, ತಾಯಂದಿರು ಮಕ್ಕಳನ್ನು ಸಂಗೀತ ಗುಣವಂತರನ್ನಾಗಿ ಮಾಡಬೇಕು. ಸಂಸ್ಕಾರಯುತ ಪ್ರಜೆಗಳನ್ನಾಗಿ ಮಾಡಬೇಕು. ಸ್ವಾವಲಂಬನೆ ಗುಣ ಬೆಳೆಸಿಕೊಳ್ಳಬೇಕು. ದೇಶದಲ್ಲಿ ನಾನಾ ರೀತಿಯ ಜಾತಿ, ಧರ್ಮ ಇದ್ದರೂ ವಿವಿಧತೆಯಲ್ಲಿ ಏಕತೆ ಸಾಧಿಸಬೇಕು ಎಂದು ಸಲಹೆ ಮಾಡಿದರು. ಬದುಕಬೇಕು. ಎಂದು ಹೇಳಿದರು.

ಸಮಾರಂಭದ ಸಾನಿಧ್ಯವಹಿಸಿದ್ದ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ತಮ್ಮ ಆರ್ಶೀವಚನದಲ್ಲಿ ಪ್ರತಿಯೊಬ್ಬರೂ ನಾವು ಹಿಂದೂ ಎಂಬುದನ್ನು ತಿಳಿಯಬೇಕು. ಹಿಂದೂಗಳು ತಮ್ಮ ಪೂರ್ವಿಕರು ಹಾಗೂ ಸನಾತನ ಧರ್ಮದ ಬಗ್ಗೆ ಗೀಷರು ಭಾರತ ಕೆಲವೇ ಹಿಂದೂ ಎಂಬುದು ಸ್ವಾಭಿಮಾನದ ವಿಷಯ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಹಾಗಾಗಿ ನಾವು ಹಿಂದೂ ಎಂದು ಹೇಳಿಕೊಳ್ಳಲು ಸಂಕೋಚ ಬೇಡ. ಪ್ರತಿಯೊಬ್ಬರೂ ನಾವು ಹಿಂದೂ ಎಂಬುದನ್ನು ತಿಳಿಯಬೇಕು. ಹಿಂದೂಗಳು ತಮ್ಮ ಪೂರ್ವಿಕರು ಹಾಗೂ ಸನಾತನ ಧರ್ಮದ ಬಗ್ಗೆ ತಿಳಿಯಬೇಕು. 

ಭಾರತೀಯರಾದ ನಾವು ನಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಶಾಂತ ಸ್ವಭಾವ ಬೆಳೆಸಿಕೊಂಡು ಎಲ್ಲರೊಡನೆ ಸಹಬಾಳ್ವೆಯಿಂದ ನಾವು ಮಾಡಿದ ಕರ್ಮ ಫಲಗಳೆ ನಮಗೆ ಲಭಿಸುತ್ತವೆ. ಹಾಗಾಗಿ ಒಳ್ಳೆಯ ಕೆಲಸವನ್ನೇ ಮಾಡಬೇಕು. ಭಾರತ ವಿಶ್ವಕ್ಕೆ ಕೊಟ್ಟ ಶ್ರೇಷ್ಠ ಕೊಡುಗೆ ಧ್ಯಾನ. ಹಾಗಾಗಿ ಧ್ಯಾನದ ಮೂಲಕ ನಾವು ಜೀವನನ್ನು ಶ್ರೇಷ್ಠ ಮಾಡಿಕೊಳ್ಳೋಣ ಎಂದು ತಿಳಿಸಿದರು. 

ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಚಾಲುಕ್ಯ ನವೀನ್ ಅಧ್ಯಕ್ಷತೆ ವಹಿಸಿದ್ದರು. ಡಾ, ಆಶ್ವಿನಿ ನಟರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ವ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಜಿ.ಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ, ದ್ಯಾಮಣ್ಣ, ನಗರಸಭಾ ಮಾಜಿ ಅಧ್ಯಕ್ಷರಾದ ಸುನೀತಾ ಮಲ್ಲಿಕಾರ್ಜನ್, ಸಂಪತ್ ಕುಮಾರ್, ಓಂಕಾರ್, ಜಿ.ಎಂ.ಸುರೇಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಕ್ಕಳು ಶಿವಾಜಿ, ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ವಿವೇಕಾನಂದ, ಅಕ್ಕ ಮಹಾದೇವಿ, ಡಾ,ಬಿ.ಆರ್ ಅಂಬೇಡ್ಕರ್ ಸೇರಿದಂತೆ ಇತರೆ ದಾರ್ಶನಿಕರ ವೇಷ ಭೂಷಣಗಳನ್ನು ಹಾಕಿದ್ದರು. 

ಹಿಂದೂ ಸಂಗಮದ ಆಯೋಜನೆ ಹಿನ್ನೆಲೆಯಲ್ಲಿ ವಿದ್ಯಾ ನಗರದ ಅಂಜನೇಯ ಮಂದಿರದಿಂದ ಕಾರ್ಯಕ್ರಮ ನಡೆಯುವ ವೇದಿಕೆಯವರೆಗೂ ನಡೆದ ಬೃಹತ್ ಶೋಭಾ ಯಾತ್ರೆಯಲ್ಲಿ ನೂರಾರು ಪ್ರಮುಖರು, ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಭಾರತಮಾತೆ ಭಾವಚಿತ್ರ ಹಾಗೂ ಗೋಮಾತೆಯ ಪ್ರತಿಕೃತಿಯನ್ನು ಇಡಲಾಗಿತ್ತು, 

Views: 12

Leave a Reply

Your email address will not be published. Required fields are marked *