ಚಿತ್ರದುರ್ಗ ನ. 28
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಹೊಳಲ್ಕೆರೆ ಅರೇಹಳ್ಳಿಯಲ್ಲಿನ ಸ್ನೇಹ ಪಬ್ಲಿಕ್ ಸ್ಕೂಲ್‍ನಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕನ್ನಡ ನುಡಿ ಹಬ್ಬವನ್ನು ಅಚರಣೆ ವಿಜೃಂಭಣೆಯಿಂದ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಜೆ.ಎಸ್.ವಸಂತ್ ಮಾತನಾಡಿ, ಕನ್ನಡ ಭಾಷೆಯು ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿದೆ ಹಾಗೂ 1956ರ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಕನ್ನಡ ಮಾತನಾಡುವ ಜನರನ್ನ ಒಗ್ಗೂಡಿಸಿ ಮೈಸೂರು ಪ್ರಾಂತ್ಯ ಎಂದು, ತದನಂತರದಲ್ಲಿ 1973 ನವಂಬರ್ ಒಂದರಂದು ಕರ್ನಾಟಕ ಎಂದು ನಾಮಕರಣ ಮಾಡಿ ಪ್ರತಿ ವರ್ಷವೂ ಕನ್ನಡ ನಾಡು-ನುಡಿಯ ಬಗ್ಗೆ ಜನಮಾನ ಸದಲ್ಲಿ ಕನ್ನಡತನವನ್ನು ಬೆಳೆಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಕೊಟ್ರೆ ನಂಜಪ್ಪ ಕಾಲೇಜ್ ಉಪನ್ಯಾಸಕರಾದ ಜಿ.ವಿ ಮಂಜುನಾಥ್ ಕನ್ನಡದ ಮೊದಲ ರಾಜ ಮನೆತನವಾದ ಕಂದಂಬರಿಂದ ಹಿಡಿದು ಇಂದಿನ ಪೀಳಿಗೆಯವರೆಗೂ ಈ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಬಂದಿದ್ದಾರೆ. ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಜಿ ಸಿ ವೇಣುಗೋಪಾಲ್ ಹಾಗೂ ಸಂಸ್ಥೆಯ ಸಲಹೆಗಾರರಾದ ಶ್ರೀಮತಿ ಛಾಯಾ ಮಂಜುನಾಥ್ ಹಾಗೂ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಮತಿ ಜಾನಕಮ್ಮ ಹಾಜರಿದ್ದರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಮೆರಗನ್ನು ತಂದು ಕೊಟ್ಟರು.
Views: 125