Faf Du Plessis: ಪಂದ್ಯ ಮುಗಿದ ಬಳಿಕ ನೋವು ತೋಡಿಕೊಂಡ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್: ಏನು ಹೇಳಿದ್ರು ನೋಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಅವಕಾಶವನ್ನು ಈ ಬಾರಿ ಕೂಡ ಕಳೆದುಕೊಂಡಿದೆ. ಪ್ಲೇ ಆಫ್​ಗೇರಲು ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆರ್​ಸಿಬಿ ಐಪಿಎಲ್ 2023 ರಿಂದ ಹೊರಬಿದ್ದಿದೆ.ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ 197 ರನ್ ಕಲೆಹಾಕಿದರೆ, ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ 19.1 ಓವರ್​ನಲ್ಲಿ ದಡ ಮುಟ್ಟಿ 6 ವಿಕೆಟ್​ಗಳ ಜಯ ಸಾಧಿಸಿತು. ಜಿಟಿ ಪರ ಶುಭ್​ಮನ್ ಗಿಲ್ ಶತಕ ಬಾರಿಸಿದರೆ, ವಿಜಯ್ ಶಂಕರ್ ಅರ್ಧಶತಕ ಸಿಡಿಸಿದರು.ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೇಸರ ಹೊರಹಾಕಿದ್ದಾರೆ. ಈ ಸೋಲಿನಿಂದ ತುಂಬಾ ನಿರಾಸೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ.ನಿಜ ಹೇಳಬೇಕೆಂದರೆ ಈ ಸೋಲು ತುಂಬಾ ನಿರಾಸೆ ತಂದಿದೆ. ಇಂದು ನಾವು ನಮ್ಮ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದ್ದೆವು. ಆದರೆ, ಶುಭ್​ಮನ್ ಗಿಲ್ ಕಡೆಯಿಂದ ಅದ್ಭುತವಾದ ಶತಕ ಮೂಡಿಬಂತು. ಎರಡನೇ ಇನ್ನಿಂಗ್ಸ್ ವೇಳೆ ತುಂಬಾ ಒದ್ದೆ ಇತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಕೂಡ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ಹಿಡಿತ ಇರಲಿಲ್ಲ ಮತ್ತು ನಾವು ಕೆಲವು ಬಾರಿ ಚೆಂಡನ್ನು ಬದಲಾಯಿಸಬೇಕಾಗಿತ್ತು ಎಂದು ಹೇಳಿದ್ದಾರೆ.ವಿರಾಟ್ ಕೊಹ್ಲಿ ಕಡೆಯಿಂದ ಊಹಿಸಲಾಗದ ಶತಕ ಬಂತು. ಅವರು ಸೆಂಚುರಿ ಬಾರಿಸಿ ಕಠಿಣ ಟಾರ್ಗೆಟ್ ನೀಡಿದರು. ಆದರೆ, ಗಿಲ್ ಅದ್ಭುತ ಆಟ ಪ್ರದರ್ಶಿಸಿ ಗೆಲುವನ್ನು ನಮ್ಮಿಂದ ಕಸಿದುಕೊಂಡರು. ನಮ್ಮ ಅಗ್ರ ನಾಲ್ಕು ಬ್ಯಾಟರ್​ಗಳ ಕಡೆಯಿಂದ ಉತ್ತಮ ಕೊಡುಗೆ ಬಂದಿದೆ - ಫಾಫ್ ಡುಪ್ಲೆಸಿಸ್.ಈ ಸೀಸನ್​ನಲ್ಲಿ ನಮ್ಮ ಮಧ್ಯಮ ಕ್ರಮಾಂಕದಿಂದ ರನ್ ಬರಲಿಲ್ಲ. ಮುಖ್ಯವಾಗಿ ಇನ್ನಿಂಗ್ಸ್ ಅಂತಿಮ ಹಂತದಲ್ಲಿ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಜೊತೆಗೆ ಮಧ್ಯಮ ಓವರ್​ನಲ್ಲಿ ವಿಕೆಟ್ ಕೂಡ ಪಡೆದುಕೊಂಡಿಲ್ಲ ಎಂಬುದು ಫಾಫ್ ಅಭಿಪ್ರಾಯ.ವಿರಾಟ್ ಕೊಹ್ಲಿ ಈ ಸೀಸನ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮಿಬ್ಬರ ಜೊತೆಯಾಟ ಕೂಡ ಉತ್ತಮವಾಗಿತ್ತು. ಇಡೀ ಸೀಸನ್​ನಲ್ಲಿ 40ಕ್ಕಿಂತ ಕಡಿಮೆ ಜೊತೆಯಾಟ ನಾವು ಆಡಿಲ್ಲ. ಇನ್ನಿಂಗ್ಸ್​ನ ಕೊನೆಯ ಹಂತದಲ್ಲಿ ಪಂದ್ಯವನ್ನು ಫಿನಿಶ್ ಮಾಡುವ ವಿಚಾರದಲ್ಲಿ ನಾವಿನ್ನೂ ಬಲಿಷ್ಠವಾಗಬೇಕು - ಫಾಫ್ ಡುಪ್ಲೆಸಿಸ್.ಕಳೆದ ವರ್ಷ ದಿನೇಶ್ ಕಾರ್ತಿಕ್ ಪಂದ್ಯವನ್ನು ಫಿನಿಶ್ ಮಾಡುತ್ತಿದ್ದರು. ಆದರೆ ಈ ಋತುವಿನಲ್ಲಿ ಅದು ಸಾಧ್ಯವಾಗಿಲ್ಲ. ನೀವು ಯಶಸ್ವಿಯಾದ ತಂಡಗಳನ್ನು ನೋಡಿದರೆ ಅವರು ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಉತ್ತಮ ಹಿಟ್ಟರ್​ಗಳನ್ನು ಹೊಂದಿದ್ದಾರೆ. ನಮ್ಮಲ್ಲಿ ಆರೀತಿಯ ಬ್ಯಾಟರ್ ಬೇಕು ಎಂದು ಫಾಫ್ ಹೇಳಿದ್ದಾರೆ.

source https://tv9kannada.com/photo-gallery/cricket-photos/faf-du-plessis-in-post-match-presentation-after-rcb-vs-gt-clash-he-said-very-disappointed-kannada-news-vb-vb-584250.html

Views: 0

Leave a Reply

Your email address will not be published. Required fields are marked *