Faf Duplessis: 112 ರನ್​ಗಳ ಗೆಲುವಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದೇನು ನೋಡಿ

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಆಟಗಾರರ ಪ್ರದರ್ಶನ ಪಂದ್ಯದಿಂದ ಪಂದ್ಯಕ್ಕೆ ಹೇಗಿರುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಐಪಿಎಲ್ 2023 ರಲ್ಲಿ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ.ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಆರ್​ಆರ್​-ಆರ್​ಸಿಬಿ ನಡುವಣ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಪಡೆ ಬೌಲಿಂಗ್​ನಲ್ಲಿ ಊಹಿಸಲಾಗದ ರೀತಿಯ ಪ್ರದರ್ಶನ ತೋರಿತು. ಸ್ಯಾಮ್ಸನ್ ಪಡೆಯನ್ನು ಕೇವಲ 59 ರನ್​ಗೆ ಆಲೌಟ್ ಮಾಡಿ ಬರೋಬ್ಬರಿ112 ರನ್​ಗಳ ಜಯ ಸಾಧಿಸಿತು.ಈ ಗೆಲುವಿನ ಮೂಲಕ ಬೆಂಗಳೂರು ತಂಡ ಐಪಿಎಲ್ 2023 ರಲ್ಲಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಖುಷಿ ಹಂಚಿಕೊಂಡಿದ್ದಾರೆ.ನಮ್ಮ ನೆಟ್​ರನ್​ರೇಟ್ ಹೆಚ್ಚಳ ಆಗಿರುವುದು ಒಳ್ಳೆಯ ವಿಷಯ. ಈ ಪಿಚ್ ತುಂಬಾ ಕಷ್ಟಕರವಾಗಿತ್ತು. ನಾವು ಮೊದಲು ಬ್ಯಾಟಿಂಗ್ ಮಾಡಿ ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅರಿತೆವು. ಪವರ್ ಪ್ಲೇನಲ್ಲಿ ರನ್ ಕಲೆಹಾಕುವಾಗ ನಾವು ಇಲ್ಲಿ 160 ಉತ್ತಮ ಸ್ಕೋರ್ ಎಂದು ಭಾವಿಸಿದೆವು - ಫಾಫ್ ಡುಪ್ಲೆಸಿಸ್.ನಾವು 15 ಓವರ್ ತನಕ ಉತ್ತಮ ಅಡಿಪಾಯ ಹಾಕಿಕೊಟ್ಟೆವು. ಅಂತಿಮ ಹಂತದಲ್ಲೂ ಪಂದ್ಯದ ಸ್ಥಿತಿಯನ್ನು ನಮ್ಮ ಕಡೆ ಮಾಡಿದೆವು. ಎಲ್ಲ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ. ಬ್ರೇಸ್​ವೆಲ್ ಪ್ರತಿ ಬಾರಿ ನೆಟ್​ನಲ್ಲಿ ಬೌಲಿಂಗ್ ಮಾಡುತ್ತಾರೆ. ನಮಗೆ ಲೆಫ್ಟ್ ಆರ್ಮ್ ಸ್ಪಿನ್ನರ್​ನ ಅವಶ್ಯಕತೆಯಿತ್ತು. ಶಹ್ಬಾಜ್ ಮುಂದಿನ ಪಂದ್ಯದಲ್ಲಿ ಆಡುತ್ತಾರೆ ಎಂದು ಫಾಫ್ ಹೇಳಿದ್ದಾರೆ.ಈ ಗೆಲುವು ನಮಗೆ ತುಂಬಾ ಮುಖ್ಯವಾಗಿತ್ತು. ನಮ್ಮ ಆಟಗಾರರಲ್ಲಿ ಈ ಜಯ ಆತ್ಮವಿಶ್ವಾಸ ತುಂಬಿದೆ. ಮುಂದಿನ ಎರಡು ಪಂದ್ಯಗಳಿಗೆ ಇದು ತುಂಬಾ ಸಹಕಾರಿ ಆಗಲಿದೆ ಎಂಬುದು ಫಾಫ್ ಡುಪ್ಲೆಸಿಸ್ ಮಾತು.ಸೋತ ತಂಡದ ನಾಯಕ ಸಂಜು ಸ್ಯಾಮ್ಸನ್ ಮಾತನಾಡಿ, ಪ್ರತಿ ಪಂದ್ಯದಲ್ಲಿ ನಾವು ಪವರ್ ಪ್ಲೇಯಲ್ಲಿ ಉತ್ತಮ ಆರಂಭ ಪಡೆದುಕೊಳ್ಳುತ್ತಿದ್ದೆವು. ಆದರೆ, ಅದು ಈ ಬಾರಿ ಬರಲಿಲ್ಲ. ಆರ್​ಸಿಬಿ ಬೌಲರ್​ಗಳಿಗೆ ಕ್ರೆಡಿಟ್ ಸಲ್ಲಬೇಕು ಎಂದು ಸ್ಯಾಮ್ಸನ್ ಹೇಳಿದ್ದಾರೆ.

source https://tv9kannada.com/photo-gallery/cricket-photos/faf-du-plessis-in-post-match-presentation-after-rr-vs-rcb-ipl-2023-match-he-said-really-good-for-our-nrr-vb-578899.html

Views: 0

Leave a Reply

Your email address will not be published. Required fields are marked *