Faf Duplessis: ಹೈದರಾಬಾದ್ ವಿರುದ್ಧದ ಗೆಲುವಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದೇನು ನೋಡಿ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುರುವಾರ ನಡೆದ ಸನ್​ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ ರೋಚಕತೆಯಿಂದ ಕೂಡಿತ್ತು. ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ 8 ವಿಕೆಟ್​ಗಳ ಅಮೋಘ ಗೆಲುವು ಕಂಡಿತು.ವಿರಾಟ್ ಕೊಹ್ಲಿ ನಾಲ್ಕು ವರ್ಷಗಳ ಬಳಿಕ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಜೊತೆಗೆ ಐಪಿಎಲ್ 2023 ರಲ್ಲಿ ಆರ್​ಸಿಬಿ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ.ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಖುಷಿ ಹಂಚಿಕೊಂಡಿದ್ದಾರೆ. ನಾವು ಗುರಿ ಬೆನ್ನಟ್ಟಿದ್ದು ಅದ್ಭುತವಾಗಿತ್ತು. ಇದುವೇ ನನ್ನ ಮೊದಲ ಪ್ರತಿಕ್ರಿಯೆ. ಮೊದಲ ಇನ್ನಿಂಗ್ಸ್ ಮುಗಿಸಿದಾಗ ತಿಳಿಯಿತು ಇದೊಂದು ಅತ್ಯುತ್ತಮ ವಿಕೆಟ್ ಎಂಬುದು ಎಂದು ಹೇಳಿದ್ದಾರೆ.200 ರನ್ ಇಲ್ಲಿ ಸುಲಭವಾಗಿ ಕಲೆಹಾಕಬಹುದು. ಸ್ಪಿನ್ನರ್​ಗಳಿಗೆ ಹೆಚ್ಚು ಬಾಲ್ ಅನ್ನು ಟರ್ನ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬ್ಯಾಟಿಂಗ್ ದೃಷ್ಟಿಕೋನದಿಂದ ನಾವು ಸರಿಯಾದ ಕೆಲಸಗಳನ್ನು ಮಾಡುತ್ತಿದ್ದೇವೆ. ಹಿಂದಿನ ಪಂದ್ಯದಲ್ಲೂ ನಮ್ಮ ಬೌಲಿಂಗ್ ಅದ್ಭುತವಾಗಿತ್ತು - ಫಾಫ್ ಡುಪ್ಲೆಸಿಸ್.ನಾನು ಮತ್ತು ಕೊಹ್ಲಿ ಪರಸ್ಪರ ಚೆನ್ನಾಗಿ ಮಾತನಾಡಿಕೊಳ್ಳುತ್ತೇವೆ. ನಾವಿಬ್ಬರು ಬೇರೆ ಬೇರೆ ಜಾಗದಲ್ಲಿ ಹೊಡೆತಗಳನ್ನು ಹೊಡೆಯುವುದರಿಂದ ಬೌಲರ್​ಗೆ ಬೌಲಿಂಗ್ ಮಾಡಲು ಕಷ್ಟವಾಗುತ್ತದೆ. ನನ್ನ ಮತ್ತು ಕೊಹ್ಲಿ ಮಧ್ಯೆ ಆನ್​ಫೀಲ್ಡ್ ಮತ್ತು ಆಫ್ ಫೀಲ್ಡ್​ನಲ್ಲಿ ಉತ್ತಮ ಬಾಂಧವ್ಯವಿದೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.ಮುಂದಿನ ಪಂದ್ಯ ಚಿನ್ನಸ್ವಾಮಿಯಲ್ಲಿ ಆಡಲಿದ್ದೇವೆ. ಅದು ಅದ್ಭುತ ಪಂದ್ಯ ಆಗಲಿದೆ. ಅಲ್ಲಿ ಸಾಕಷ್ಟು ಅಭಿಮಾನಿಗಳಿರುತ್ತಾರೆ. ಅದುಕೂಡ ನಮಗೆ ಗೆಲ್ಲಲೇ ಬೇಕಾದ ಪಂದ್ಯ. ಇಂದು ನಾವು ನೀಡಿದ ಪ್ರದರ್ಶನ ಖುಷಿ ನೀಡಿದೆ ಎಂಬುದು ಫಾಫ್ ಡುಪ್ಲೆಸಿಸ್ ಮಾತು.ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್​ರೈಸರ್ಸ್ ಹೆನ್ರಿಚ್ ಕ್ಲಾಸೆನ್ ಅವರ 104 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ 19.2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 187 ರನ್ ಸಿಡಿಸಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ 100 ರನ್ ಚಚ್ಚಿದರೆ ಡುಪ್ಲೆಸಿಸ್ 71 ರನ್ ಸಿಡಿಸಿದರು.

source https://tv9kannada.com/photo-gallery/cricket-photos/faf-duplessis-in-post-match-presentation-after-srh-vs-rcb-match-he-said-amazing-chase-isnt-it-vb-582080.html

Views: 0

Leave a Reply

Your email address will not be published. Required fields are marked *