ಮಾರುಕಟ್ಟೆಗೆ ಕಾಲಿಟ್ಟಿದೆ ‘ನಕಲಿ ಆಲೂಗಡ್ಡೆ’ ! ನೀವು ತರುತ್ತಿರುವ ಆಲೂಗಡ್ದೆಯನ್ನೊಮ್ಮೆ ಚೆಕ್ ಮಾಡಿಕೊಳ್ಳಿ

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಲೂಗಡ್ಡೆ ಚಂದ್ರಮುಖಿ ಆಲೂಗಡ್ಡೆ. ನಕಲಿ ಆಲೂಗಡ್ಡೆ   ಹೇಮಾಂಗಿನಿ ಆಲೂಗಡ್ಡೆ. ಆದರೆ ಮಾರುಕಟ್ಟೆಯಲ್ಲಿ ರಾಶಿಯಲ್ಲಿರುವ ಆಲೂಗಡ್ಡೆಯಲ್ಲಿ ಯಾವುದೇ ಚಂದ್ರಮುಖಿ ಯಾವುದು ಹೆಮಾಂಗಿನಿ ಎಂದು ಗುರುತಿಸುವುದು ಅಷ್ಟು ಸುಲಭವಲ್ಲ.  

  • ಮಾರುಕಟ್ಟೆಗೆ ನಕಲಿ ಆಲೂಗಡ್ಡೆ ಕಾಲಿಟ್ಟಿವೆ.
  • ಅಸಲಿ ಆಲೂಗಡ್ಡೆಯೊಂದಿಗೆ ಇದನ್ನೂ ಬೆರೆಸಿ ಮಾರಾಟ ಮಾಡಲಾಗುತ್ತಿದೆ.
  • ಅಸಲಿ ನಕಲಿಯನ್ನು ಗುರುತಿಸುವುದು ಹೇಗೆ ?

ಬೆಂಗಳೂರು : ಮಾರುಕಟ್ಟೆಗೆ ನಕಲಿ ಆಲೂಗಡ್ಡೆ ಕಾಲಿಟ್ಟಿವೆ.  ಅಸಲಿ ಆಲೂಗಡ್ಡೆಯೊಂದಿಗೆ ಇದನ್ನೂ ಬೆರೆಸಿ ಮಾರಾಟ  ಮಾಡಲಾಗುತ್ತಿದೆ.  ಆದರೆ ಈ ಆಲೂಗಡ್ಡೆಯ ರುಚಿಯೇ ಬೇರೆ.  ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಲೂಗಡ್ಡೆ ಚಂದ್ರಮುಖಿ ಆಲೂಗಡ್ಡೆ. ನಕಲಿ ಆಲೂಗಡ್ಡೆ   ಹೇಮಾಂಗಿನಿ ಆಲೂಗಡ್ಡೆ. ಆದರೆ ಮಾರುಕಟ್ಟೆಯಲ್ಲಿ ರಾಶಿಯಲ್ಲಿರುವ ಆಲೂಗಡ್ಡೆಯಲ್ಲಿ ಯಾವುದೇ ಚಂದ್ರಮುಖಿ ಯಾವುದು ಹೆಮಾಂಗಿನಿ ಎಂದು ಗುರುತಿಸುವುದು ಅಷ್ಟು ಸುಲಭವಲ್ಲ.  ಚಂದ್ರಮುಖಿ ಆಲೂಗಡ್ಡೆ ಕೆಜಿಗೆ 20ರಿಂದ 25 ರೂ.ಗೆ ಮಾರಾಟವಾಗುತ್ತದ್ದರೆ, ಹೇಮಾಂಗಿನಿ ಆಲೂವನ್ನು ಕೆಜಿಗೆ 10ರಿಂದ 12 ರೂ.ಗೆ ಮಾರಲಾಗುತ್ತಿದೆ. 

ನಕಲಿ ಆಲೂಗೆಡ್ಡೆ ಮಾರಾಟ ಮಾಡುವ ಮೂಲಕ ಸಂಪಾದನೆ :
ಹೇಮಾಂಗಿನಿ ಆಲೂಗಡ್ಡೆ ಮೂಲತಃ ಮಿಶ್ರ ವಿಧದ ಆಲೂಗಡ್ಡೆ ಎನ್ನುತ್ತಾರೆ ವ್ಯವಸಾಯ ಸಹಕಾರಿ ಸಂಘದ ಸದಸ್ಯರು. ಈ ಆಲೂಗಡ್ಡೆಯನ್ನು ಪಂಜಾಬ್ ಮತ್ತು ಜಲಂಧರ್‌ನ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಆಲೂಗೆಡ್ಡೆಯ ಈ ಕೃಷಿಯಲ್ಲಿ ಇಳುವರಿ ಹೆಚ್ಚು.  ಒಂದು ಇಳುವರಿಯಲ್ಲಿ ಚಂದ್ರಮುಖಿ ಆಲೂಗೆಡ್ಡೆ  50 ರಿಂದ 60 ಚೀಲ ಉತ್ಪಾದನೆಯಾಗುತ್ತಿದ್ದರೆ,  ಹೇಮಾಂಗಿನಿ  ಉತ್ಪಾದನೆ ಸುಮಾರು 90 ರಿಂದ 95 ಚೀಲಗಳಷ್ಟಾಗಿರುತ್ತದೆ. ಈ ಆಲೂಗೆಡ್ಡೆಯ ಉತ್ಪಾದನೆ ಪ್ರಮಾಣ ಹೆಚ್ಚಿದ್ದರೂ, ಬೇಡಿಕೆ ತೀರಾ ಕಡಿಮೆ. ಈ ಆಲೂಗಡ್ಡೆಯನ್ನು ಸರಿಯಾಗಿ ಬೇಯಿಸಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ  ಈ ಆಲೂಗಡ್ಡೆಗಳ ರುಚಿ ಕೂಡಾ ಉತ್ತಮವಾಗಿಲ್ಲ.

ಗುರುತಿಸುವುದು ಕಷ್ಟ :
ಹೇಮಾಂಗಿನಿ ಆಲೂಗಡ್ಡೆ ಮತ್ತು ಚಂದ್ರಮುಖಿ ಆಲೂಗಡ್ಡೆಯನ್ನು ಹೊರಗಿನಿಂದ ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಚಂದ್ರಮುಖಿ ಆಲೂಗೆಡ್ಡೆಯೊಂದಿಗೆ ಕ್ರಾಸ್ ಬ್ರೀಡಿಂಗ್ ಮೂಲಕ ಹೇಮಾಂಗಿನಿ ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ಈ ಆಲೂಗೆಡ್ಡೆ ಹೈಬ್ರಿಡ್ ಆಗಿರುವುದರಿಂದ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುವುದು ಸಾಧ್ಯ. ಚಂದ್ರಮುಖಿ ಆಲೂಗಡ್ಡೆ ಬೆಳೆಯಲು ಮೂರ್ನಾಲ್ಕು ತಿಂಗಳು ತೆಗೆದುಕೊಳ್ಳುತ್ತದೆ. ಆದರೆ ಈ ಹೈಬ್ರಿಡ್ ಆಲೂಗಡ್ಡೆಗಳು ಒಂದೂವರೆ ಎರಡು ತಿಂಗಳೊಳಗೆ  ಇಳುವರಿ ನೀಡುತ್ತದೆ.  

ಯಾವುದು ಚಂದ್ರಮುಖಿ ಯಾವುದು ಹೇಮಾಂಗಿನಿ ಆಲೂಗಡ್ಡೆ ಎಂದು ತಿಳಿಯುವುದು ಹೇಗೆ?
ಈ ಆಲೂಗಡ್ಡೆಯನ್ನು ಎರಡು ರೀತಿಯಲ್ಲಿ ಗುರುತಿಸಬಹುದು. ಮೊದಲನೆಯದಾಗಿ, ಎರಡು ರೀತಿಯ ಆಲೂಗಡ್ಡೆಗಳನ್ನು ಸಿಪ್ಪೆ ಸುಲಿದ ನಂತರ, ಒಳಗೆ ಬಣ್ಣಗಳು ವಿಭಿನ್ನವಾಗಿವೆ. ಚಂದ್ರಮುಖಿ ಆಲೂಗೆಡ್ಡೆಯ ಒಳಭಾಗವು  ಮಂದ ಹಳದಿ ಬಣ್ಣದ್ದಾಗಿದ್ದರೆ  ಹೇಮಾಂಗಿನಿ ಆಲೂಗಡ್ಡೆಯ ಒಳಭಾಗವು ಬಿಳಿಯಾಗಿರುತ್ತದೆ. ಎರಡನೆಯದಾಗಿ, ಯಾವ ಆಲೂಗೆಡ್ಡೆ ಎನ್ನುವುದನ್ನು  ರುಚಿ ನೋಡುವ ಮೂಲಕ ಅರ್ಥಮಾಡಿಕೊಳ್ಳಬಹುದು. 

Source: https://zeenews.india.com/kannada/health/how-to-find-defference-between-real-and-fake-potato-117837

Leave a Reply

Your email address will not be published. Required fields are marked *