
ನಮ್ಮ ದೇಶದ ಶ್ರೀಮಂತ ಮಹಿಳಾ ಸಿಇಒ ಪೈಕಿ ಫಲ್ಗುಣಿ ನಾಯರ್ ಕೂಡಾ ಒಬ್ಬರಾಗಿದ್ದಾರೆ. ಬಹಳಷ್ಟು ಮಂದಿ ಅವರ ವಯಸ್ಸಿನಲ್ಲಿ ನಿವೃತ್ತಿ ಬಗ್ಗೆ ಯೋಚಿಸುವಾಗ, ಫಲ್ಗುಣಿ ನಾಯರ್ ಅವರು ವಿಭಿನ್ನವಾಗಿ ವ್ಯಾಪಾರ ಜಗತ್ತಿಗೆ ಕಾಲಿರಿಸುವ ಬಗ್ಗೆ ಯೋಚಿಸಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಸೇವೆ ಸಲ್ಲಿಸಿದ ನಂತರ ಫಲ್ಗುಣಿ ನಾಯರ್ ತಮ್ಮ 50 ನೇ ವಯಸ್ಸಿನಲ್ಲಿ ಆನ್‌ಲೈನ್ ಪ್ಲಾಟ್‌ಫಾರ್ಮ್ Nykaa ಕಟ್ಟಿ ಬೆಳೆಸಿ ಬ್ಯೂಟಿ ಅಂಡ್ ವೆಲ್‌ನೆಸ್‌ಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿದರು.
ಭಾರತದ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ ಅವರನ್ನು “ಭಾರತೀಯ ಸ್ಟಾರ್ಟ್‌ಅಪ್‌ಗಳ ರಾಣಿ” ಎಂದು ಕರೆಯಲಾಗುತ್ತದೆ. ಫೋರ್ಬ್ಸ್ ಪ್ರಕಾರ, ಫಲ್ಗುಣಿ ಅವರ ನಿವ್ವಳ ಮೌಲ್ಯ 3.3 ಬಿಲಿಯನ್ ಡಾಲರ್, ಅಂದರೆ ಅಂದಾಜು 27,300 ಕೋಟಿ ರೂಪಾಯಿ ಆಗಿದ್ದು ಅವರು ವಿಶ್ವದ ಅತ್ಯಂತ ಶ್ರೀಮಂತರಲ್ಲಿ 929 ನೇ ಸ್ಥಾನದಲ್ಲಿದ್ದಾರೆ. Dilip Shanghvi: ಔಷಧ ಮಾರಾಟಕ್ಕೆ ಅಲೆಯುತ್ತಿದ್ದ ವ್ಯಕ್ತಿ ಈಗ 1.46 ಲಕ್ಷ ಕೋಟಿ ರೂಪಾಯಿ ಆಸ್ತಿ ಒಡೆಯ ಫಲ್ಗುಣಿ ನಾಯರ್ ಅವರು ತಮ್ಮ ಕಂಪನಿ ಎಫ್‌ಎಸ್‌ಎನ್ ಇ-ಕಾಮರ್ಸ್ ವೆಂಚರ್ಸ್ ಲಿಮಿಟೆಡ್ (FSN E-Commerce Ventures Ltd) ನಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ಅವರು ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ, ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೆತ್ತವರಿಂದ ಬಂದ ಬ್ಯುಸಿನೆಸ್ ಸಂಭಾಳಿಸುವುದು ಅಥವಾ ಅನುವಂಶಿಕವಾಗಿ ಸಂಪತ್ತನ್ನು ಪಡೆದುಕೊಂಡವರ ಕಥೆಗಳಿಗಿಂತ ಭಿನ್ನವಾಗಿ ಫಲ್ಗುಣಿ ಅವರು ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ತನ್ನ ಯಶಸ್ಸನ್ನು ರೂಪಿಸಿಕೊಂಡಿದ್ದಾರೆ. ಫಲ್ಗುಣಿ ನಾಯರ್ ಅವರು 1963ರ ಫೆಬ್ರವರಿ 19ರಂದು ಮುಂಬೈನಲ್ಲಿ ಜನಿಸಿದ್ದಾರೆ. ಅವರ ಕುಟುಂಬವು ಗುಜರಾತ್ ಮೂಲದವರು. ಫಲ್ಗುಣಿ ನಾಯರ್ ಅವರು ಅಹಮದಾಬಾದ್ ನಲ್ಲಿ ಎಂಬಿಎ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಫಲ್ಗುಣಿ ನಾಯರ್ ಅವರು ಸಂಜಯ್ ನಾಯರ್ ಅವರನ್ನು ಮದುವೆಯಾಗಿದ್ದಾರೆ. ಸಂಜಯ್ ಅವರು ಕೆಕೆಆರ್ ಅಂಡ್ ಕೋ ಇಕ್ವಿಟಿ ಕಂಪನಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫಲ್ಗುಣಿ ನಾಯರ್ ಅವರು ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಸುಮಾರು ಎರಡು ದಶಕಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. 2012ರಲ್ಲಿ ಕೋಟಕ್ ಮಹೀಂದ್ರಾ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ನಲ್ಲಿ ಮ್ಯಾನೇಜಿಂಗ್ ಡೈರಕ್ಟರ್ ಆಗಿದ್ದರು. ಅದಕ್ಕೂ ಮೊದಲು ಎಎಫ್ ಫರ್ಗುಸನ್ ಅವರೊಂದಿಗೆ ನಿರ್ವಹಣಾ ಸಲಹೆಗಾರರಾಗಿ ಕೆಲಸ ಮಾಡಿದರು. ಫಲ್ಗುಣಿ ಅವರ ವೃತ್ತಿಜೀವನದ ಸಮಯದಲ್ಲೇ ಐಐಎಂ ಅಹಮದಾಬಾದ್‌ನಿಂದ ಎಂಬಿಎ ವ್ಯಾಸಂಗ ಮಾಡಿದರು. ಇದು ಅವರ ಜೀವನದಲ್ಲಿ ದೊಡ್ಡ ತಿರುವು ಪಡೆದುಕೊಂಡಿತು. ನೈಕಾ ಆರಂಭಿಸಿದ ಫಲ್ಗುಣಿ ವ್ಯಾಸಂಗದ ಬಳಿಕ ಅವರು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಯೋಚಿಸತೊಡಗಿದರು. ಆ ಕಾರಣಕ್ಕಾಗಿಯೇ ಫಲ್ಗುಣಿ ಅವರು 2012ರಲ್ಲಿ ಅಂದರೆ ತಮ್ಮ 50 ನೇ ವಯಸ್ಸಿನಲ್ಲಿ ಅತ್ಯುನ್ನತ ಹುದ್ದೆಯನ್ನು ತೊರೆದು ಬ್ಯೂಟಿ ಅಂಡ್ ವೆಲ್ನೆಸ್ ಉತ್ಪನ್ನಗಳಿಗಾಗಿ ಆನ್‌ಲೈನ್ ವೇದಿಕೆಯಾದ “ನೈಕಾ ಕಂಪನಿ” (Nykaa) ಆರಂಭಿಸಿದರು. ನಟಿ ಅಥವಾ ಜನಮಾನಸಕ್ಕೆ ಹತ್ತಿರವಾದರು ಎಂಬ ಅರ್ಥ ಕೊಡುವ, “ನಾಯಕ” ಎಂಬ ಸಂಸ್ಕೃತ ಪದದಿಂದ ಪ್ರೇರಿತರಾದ ಅವರು “ನೈಕಾ” ಆರಂಭಿಸಿದರು. ಇದು ತ್ವರಿತವಾಗಿ ಫ್ಯಾಶನ್ ಉತ್ಪನ್ನ ವೇದಿಕೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. 2014 ರಲ್ಲಿ, ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ ನೈಕಾದಲ್ಲಿ 1 ಮಿಲಿಯನ್ ಡಾಲರ್ ಹೂಡಿಕೆ ಮಾಡಿತು. ಇಂದು ನೈಕಾ ಸಂಸ್ಥೆ ಮಹಿಳೆ ನೇತೃತ್ವದ ಭಾರತದ ಮೊದಲ ಯುನಿಕಾರ್ನ್ ಕಂಪನಿಯಾಗಿ ಇತಿಹಾಸ ನಿರ್ಮಿಸಿದೆ. ಕಂಪನಿಯು ಸರಿಸುಮಾರು ಎರಡು ವರ್ಷಗಳ ಹಿಂದೆ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಗಮನಾರ್ಹ ಗಮನವನ್ನು ಗಳಿಸಿ, ಮಾರುಕಟ್ಟೆಯ ಕ್ಯಾಪ್ ಅನ್ನು 50,484.15 ಕೋಟಿ ರೂಪಾಯಿ ಲಿಸ್ಟ್ ಮಾಡಿತು. ಫಲ್ಗುಣಿ ನಾಯರ್ ಅವರು ಭಾರತದಲ್ಲಿ ಸೌಂದರ್ಯ ಉತ್ಪನ್ನಗಳ ವಿಭಾಗದಲ್ಲಿ “ನೈಕಾ”ವನ್ನು ನಾಯಕ ಸ್ಥಾನದಲ್ಲಿ ಇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಾಟಾ ಮತ್ತು ರಿಲಯನ್ಸ್ ಸೌಂದರ್ಯ ಮಾರುಕಟ್ಟೆ ವಿಭಾಗಕ್ಕೆ ಪ್ರವೇಶಿಸಿ ಸ್ಥರ್ಧೆಗಿಳಿದರೂ ನೈಕಾ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಶಕ್ತಿಯಾಗಿ ಉಳಿದುಕೊಂಡಿದೆ. ಇದು ರಾಷ್ಟ್ರವ್ಯಾಪಿ 152 ಸ್ಟೋರ್‌ಗಳನ್ನು ಹೊಂದಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1