ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆ ನೆಲಮಂಗಲ ತಾಲ್ಲೂಕಿನ ವಿವಿಧೆಡೆ ಕುರಿ-ಮೇಕೆ ಕಳ್ಳತನ ಹೆಚ್ಚಾಗಿದೆ. ಸುಮಾರು 25 ರಿಂದ 30 ಸಾವಿರ ರೂ. ಬೆಲೆ ಬಾಳುವ ಒಂದೊಂದು ಮೇಕೆಗಳನ್ನು ಕಳದುಕೊಂಡ ರೈತರು ಕಂಗಾಲಾಗಿದ್ದಾರೆ.
ನೆಲಮಂಗಲ: ಇನ್ನೇನು ಕೆಲವೇ ದಿನಗಳಲ್ಲಿ ಬಕ್ರೀದ್ (Bakrid) ಹಬ್ಬ ಸಮೀಪಿಸುತ್ತಿದೆ. ಈದ್-ಉಲ್-ಅಧಾ ಹಬ್ಬ ಹಿನ್ನೆಲೆ ನೆಲಮಂಗಲ ತಾಲ್ಲೂಕಿನ ವಿವಿಧೆಡೆ ಕುರಿ (Sheep) ಮೇಕೆ ಕಳ್ಳತನ ಹೆಚ್ಚಾಗಿದೆ. ರಾತ್ರಿ 2 ಗಂಟೆ ಸಮಯದಲ್ಲಿ ಹೆಚ್ಚಾಗಿ ಕಳ್ಳತನ ನಡೆಯುತ್ತಿದೆ. ರೈತ ರಾಮಯ್ಯ ಎಂಬುವವರಿಗೆ ಸೇರಿದ ನಾಲ್ಕು ಮೇಕೆಗಳನ್ನ ಖದೀಮರು ಕಳ್ಳತನ ಮಾಡಿದ್ದಾರೆ. ಕಳೆದ 15 ದಿನದ ಹಿಂದಷ್ಟೇ ಒಂದು ಮೇಕೆ ಕದ್ದೊಯ್ದಿದ್ದರು. ಒಂದೊಂದು ಮೇಕೆಗಳು 25 ರಿಂದ 30 ಸಾವಿರ ರೂ. ಬೆಲೆ ಬಾಳುತ್ತವೆ.
ನೆಲಮಂಗಲ ತಾಲೂಕು ಸೇರಿದಂತೆ ಮಾದನಾಯಕನಹಳ್ಳಿ ಠಾಣ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ನೂರಕ್ಕೂ ಹೆಚ್ಚು ಕುರಿ ಮೇಕೆ ಕಳ್ಳತನ ಆಗಿದೆ. ಕುರಿ ಕಳ್ಳತನದಿಂದ ವ್ಯಾಪಾರ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.