ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 14
ನಗರದ ಧರ್ಮಶಾಲಾ ರಸ್ತೆಯಲ್ಲಿನ ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆವತಿಯಿಂದ ಶಾಲೆಯಲ್ಲಿನ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನವನ್ನು ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಈ ಕಾಠ್ಯಕ್ರಮದಲ್ಲಿ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಸುಮಾರು 70ಕ್ಕೂ ಹೆಚ್ಚು ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು. ಚಂದ್ರಯಾನ, ಋತುಮಾನ, ಸೌರಶಕ್ತಿ, ಜ್ವಾಲಾಮುಖಿ, ಜಲಮಾಲಿನ್ಯ, ವಾಯುಮಾಲಿನ್ಯ, ಕೃಷಿಮಾದರಿ, ಗಾಳಿಯಂತ್ರ, ಡ್ರಮ್, ಹೃದಯ, ಮದುಳು, ಸ್ಮಾರ್ಟ್ ಸಿಟಿ, ಮಳೆ ನೀರು ಕೊಯ್ದು, ಶ್ವಾಸಕೋಶ ಇಂತಹ ಇನ್ನೂ ಹೆಚ್ಚು ಮಾದರಿಗಳನ್ನು ಪ್ರಸರ್ಶಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗುರುಜೀ ಮಹಾರಾಜ್ ಆರ್ಯಶೇಖರ್ ವಿಜಯ್ ಜೀ ದಿವ್ಯ ಸಾನಿಧ್ಯವಹಿಸಿದ್ದರು. ಶಾಲಾ ಅಧ್ಯಕ್ಷರು ಬಾಬುಲಾಲ್ ಜೀ ಪಟಿಯಾತ್, ಶಾಲಾ ಕಾರ್ಯದರ್ಶಿ ಸುರೇಶ್ ಕುಮಾರ್ ಸಿಸೋಡಿಯಾ, ನಿರ್ದೇಶಕ ರಾದ ಜವೇರಿಲಾಲ್, ವಿಕ್ರಾಂತ್,ವಿಶಾಲ್‍ಜೀ, ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಜಿಮಾ ಸ್ವಾಲಹಾ, ಜನಕರೆಡ್ಡಿ ಹಾಗೂ ಶಿಕ್ಷಕರು, ಪೋಷಕರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಶಾಲಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.