
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 25: ನಗರದ ಹೊಳಲ್ಕೆರೆ ರಸ್ತೆಯ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿನ ವೀರಶೈವ ಸಮಾಜ (ರಿ.)ದವತಿಯಿಂದ ದಾವಣಗೆರೆ ರಸ್ತೆಯ ಜೆ.ಎಂ.ಐ.ಟಿ. ವೃತ್ತದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ವೃತ್ತದ ನಾಮಫಲಕ ಉದ್ಘಾಟನಾ ಸಮಾರಂಭವು ಫೆ. 26 ರ
ಮಧ್ಯಾಹ್ನ 11.30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ದಾವಣಗೆರೆಯ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಹಾಗೂ ಶ್ರೀ ಜಗದ್ಗುರು
ಮುರುಘರಾಜೇಂದ್ರ ವಿದ್ಯಾಪೀಠ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ವಹಿಸಲಿದ್ದಾರೆ.
ಜಗದ್ಗುರು ಮುರುಘರಾಜೇಂದ್ರ ವೃತ್ತದ ನಾಮಫಲಕ ಉದ್ಘಾಟನೆಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ನಡೆಸಲಿದ್ದು,
ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಅಧ್ಯಕ್ಷರಾದ ಎಚ್.ಎನ್.ತಿಪ್ಪೇಸ್ವಾಮಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ
ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ವೀರಶೈವ ಸಮಾಜದ ಉಪಾಧ್ಯಕ್ಷರಾದ ಕೆ.ಸಿ.ನಾಗರಾಜ್, ನಗರಸಭಾ ಸದಸ್ಯರಾದ
ಕೆ.ಬಿ. ಸುರೇಶ್ ಭಾಗವಹಿಸಲಿದ್ದಾರೆ.