ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಮೇ. 01 ಸರ್ಕಾರ ಕಾಮೀಕರಿಗಾಗಿ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಇದನ್ನು ಪಡೆಯಲು ಕೆಲವು ನಕಲಿ ಕಾರ್ಮಿಕರು ಕಾರ್ಡಗಳನ್ನು ಪಡೆದಿದ್ದಾರೆ. ಈ ರೀತಿಯಾಗಿ ನಕಲಿ ಕಾರ್ಡಗಳನ್ನು ಪಡೆದವರನ್ನು ಪತ್ತೆ ಮಾಡಿ ಅರ್ಹರಾದವರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡುವುದರ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪದಾಧಿಕಾರಿಗಳ ಕೆಲಸವಾಗಬೇಕಿದೆ ಎಂದು ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿ ಕರೆ ನೀಡಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಮೇ, ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿ ಮಾತನಾಡಿದ ಶಾಸಕರು, ರೈತ ಯಾವ ರೀತಿ ದೇಶದ ಬೆನ್ನುಲುಬು ಅದೇ ರೀತಿ ಕಾರ್ಮಿಕನೂ ಸಹಾ ದೇಶದ ಬೆನ್ನೆಲುಬು ರೈತ ತನ್ನ ಪಾಲಿನ ಕೆಲಸ ಮಾಡದಿದ್ದರೆ ಜನರಿಗೆ ಅನ್ನ ಸಿಗವುದಿಲ್ಲ ಅದೇ ರೀತಿ ಕಾರ್ಮಿಕ ತನ್ನ ಪಾಲಿನ ಕೆಲಸ ಮಾಡದಿದ್ದರೆ ಜನರಿಗೆ ಬೇರೆ ರೀತಿಯ ಕೆಲಸಗಳು ಆಗುವುದಿಲ್ಲ, ದೇಶದ ಆರ್ಥಿಕತೆಯನ್ನು ಅಯಾ ದೇಶದ ಕಾರ್ಮೀಕರ ಸಂಖ್ಯೆಯನ್ನು ಪರಿಗಣಿಸಿ ನಿರ್ಧಾರ ಮಾಡಲಾಗುತ್ತದೆ. ಇದರಿಂದಲೇ ಜಿಡಿಪಿಯನ್ನು ಸಹಾ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾರ್ಮಿಕರಿಗಾಗಿ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿದೆ, ಇದನ್ನು ತಿಳಿದ ಕೆಲವರು ಕಾರ್ಮಿಕ ಇಲಾಖೆಯಲ್ಲಿ ನಕಲಿ ಕಾರ್ಡಗಳನ್ನು ಮಾಡಿಸಿಕೊಂಡು ಸರ್ಕಾರದ ಸೌಲಭ್ಯವನ್ನು ಪಡೆದು ಅರ್ಹರಿಗೆ ವಂಚನೆಯನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಅಂತಹ ನಕಲಿ ಕಾರ್ಡದಾರನ್ನು ಪತ್ತೇ ಮಾಡಿ ಅವರಿಂದ ಕಾರ್ಡಗಳನ್ನು ವಾಪಾಸ್ಸು ಇಲಾಖೆಗೆ ಕೊಡಿಸುವ ಕಾರ್ಯವನ್ನು ಮಾಡಬೇಕಿದೆ ಈ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಸಹಾ ಮಾಡುತ್ತಿದ್ದಾರೆ ಅವರ ಜೊತೆಗೆ ನೀವುಗಳ ಕೈ ಜೋಡಿಸಿ ಎಂದು ವಿರೇಂದ್ರ ಪಪ್ಪಿ ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಸೈಯದ್ ಚೋಟು ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿರುವ ಸಂತೋಷ ಲಾಡ್ ರವರು ಕಾರ್ಮಿಕರ ಕಷ್ಟಗಳನ್ನು ಅರಿತ್ತಿದ್ದಾರೆ.ಈ ಹಿನ್ನಲೆಯಲ್ಲಿ ಅವರಿಗೆ ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದ್ದಾರೆ. ನಮ್ಮ ಕಾರ್ಮಿಕ ವಿಭಾಗಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಸಮಾವೇಶವನ್ನು ಮುಂದಿನ ದಿನದಲ್ಲಿ ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗುವುದು, ಹಿಂದಿನ ಸರ್ಕಾರ ಕಾರ್ಮಿಕರಿಗೆ ತುಂಬಾ ಅನ್ಯಾಯವನ್ನು ಮಾಡಿತ್ತು ಅದನ್ನು ನಮ್ಮ ಸರ್ಕಾರ ಸರಿಪಡಿಸುತ್ತಿದೆ, ಕಾರ್ಮಿಕರಿಗೆ ಸರ್ಕಾರ ಇನ್ನೂ ಹೆಚ್ಚಿನ ರೀತಿಯ ಸೌಲಭ್ಯವನ್ನು ನೀಡುವಂತಾಗಬೇಕಿದೆ ಎಂದರು.
ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜಾಕಿರ್ ಹುಸೇನ್ ಮಾತನಾಡಿ, ಕಾರ್ಮಿಕರಿಗೆ ಸರ್ಕಾರ ವಿವಿಧ ರೀತಿಯ ಸೌಲಭ್ಯವನ್ನು ನೀಡಬೇಕಿದೆ, ಕಾರ್ಮಿಕರಿಗೆ ಸರ್ಕಾರದವತಿಯಿಂದ ಸಿಗುವಂತ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಕಾರ್ಮಿಕ ವಿಭಾಗದವರು ನೀಡಬೇಕಿದೆ ಎಂದರು.
ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರವ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರ್ಮಿಕ ಪಾತ್ರ ಬಹಳಷ್ಟು ಇದೆ, ಅವರು ಹಾಕಿದವ ಮತದಿಂದ ಪಕ್ಷದ ಅಧಿಕಾರ ಹಿಡಿಯಲು ಸಹಕಾರಿಯಾಗಿದೆ, ಇದನ್ನು ಮನಗಂಡು ಶಾಸಕರಾದವರು ಕಾರ್ಮಿಕರ ಹಿತವನ್ನು ಕಾಯಬೇಕಿದೆ, ಅವರನ್ನು ಎಂದಿಗೂ ಸಹಾ ಮರೆಯಬಾರದು, ಕಾರ್ಮಿಕವನ್ನು ನಮ್ಮ ಜೊತೆಯಲ್ಲಿ ಇಟ್ಟುಕೊಂಡಲ್ಲಿ ಮುಂದಿನ ಬಾರಿಯೂ ಸಹಾ ನಮ್ಮ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನವನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.
ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಟಿಪ್ಪು ಖಾಸಿಂಆಲಿ, ಪ್ರಕಾಶ ರಾಮನಾಯ್ಕ್, ಖುದ್ದುಸ್, ಮಂಜುನಾಥ್, ಅಕ್ಬರ್, ಸಮೀವುಲ್ಲಾ, ಯೂಸಿಫ್, ಹಸೀನ, ಅಬ್ದುಲ್ ರಹಿಂ, ಜ್ಯೋತಿ ಲಕ್ಷ್ಮೀ, ನಾಗರಾಜ್ ಭಾಗವಹಿಸಿದ್ದರು. ಸಂಪತ್ ಕುಮಾರ್ ಸ್ವಾಗತಿಸಿದರು, ಮೈಲಾರಪ್ಪ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸದಸ್ಯತ್ವವನ್ನು ಮಾಡಿದ ಜ್ಯೋತಿ ಲಕ್ಷ್ಮಿ, ಹಾಗೂ ಸಚಿನ್ ರವರನ್ನು ಸನ್ಮಾನಿಸಲಾಯಿತು.
Views: 16