Finn Allen: 37 ಎಸೆತಗಳಲ್ಲಿ 78 ರನ್; ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದ ಆರ್​ಸಿಬಿ ಆಟಗಾರ!

Finn allen scored 78 runs just 37 balls in super smash rcb retain him in ipl 2023 psr

ಸದ್ಯ ನ್ಯೂಜಿಲೆಂಡ್ ನಲ್ಲಿ ಸೂಪರ್ ಸ್ಮ್ಯಾಶ್ (Super Smash) ಟೂರ್ನಿ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಫಿನ್ ಅಲೆನ್ (Finn Allen) ಬಿರುಸಿನ ಇನ್ನಿಂಗ್ಸ್ ಆಡಿದ್ದಾರೆ. ಅವರ ಇನ್ನಿಂಗ್ಸ್‌ನ ಆಧಾರದ ಮೇಲೆ, ವೆಲ್ಲಿಂಗ್ಟನ್ ಕ್ಯಾಂಟರ್ಬರಿ ತಂಡ ಎಂಟು ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದೆ. ಚುಟುಕು ಮಾದರಿಯಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿರುವ ಅಲೆನ್ ಹೊಸ ವರ್ಷದಂದೆ ಆರ್​ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಾಸ್ತವವಾಗಿ ಫಿನ್ ಅಲೆನ್ ಐಪಿಎಲ್​ನಲ್ಲಿ ಆರ್​ಸಿಬಿ (RCB) ಪರ ಕಣಕ್ಕಿಳಿಯುತ್ತಾರೆ. ಕಳೆದ ಬಾರಿಯ ಮೆಗಾ ಹರಾಜಿನಲ್ಲಿ ಆರ್​ಸಿಬಿ ಅವರನ್ನು ಖರೀದಿಸಿತ್ತು. ಆದರೆ ಹೋದ ಸೀಸನ್​ನಲ್ಲಿ ಅವರಿಗೆ ತಂಡದಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಆದರೂ ಈ ಬಾರಿ ನಡೆದ ಮಿನಿ ಹರಾಜಿನಲ್ಲಿ ಅವರನ್ನು ತಂಡದಿಂದ ಕೈಬಿಡದೆ, ತಂಡದಲ್ಲಿ ಉಳಿಸಿಕೊಂಡಿದ್ದ ಆರ್​ಸಿಬಿಗೆ ಫಿನ್ ಅಲೆನ್ ಅದ್ಭುತ ಫಾರ್ಮ್​ ಕಪ್ ಜಯಿಸುವ ಆಶಾಭಾವ ತಂದುಕೊಟ್ಟಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಕ್ಯಾಂಟರ್ಬರಿ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ತಂಡಕ್ಕೆ ದೊಡ್ಡ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ತಂಡ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 132 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ವೆಲ್ಲಿಂಗ್ಟನ್ ತಂಡ ಕೇವಲ 11.5 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

IPL Auction 2023: ಧೋನಿ ಕೈಬಿಟ್ಟ ಈ ದೇಶೀ ಸೂಪರ್​ಸ್ಟಾರ್ ಖರೀದಿಗೆ ಮುಂದಾದ ಆರ್​ಸಿಬಿ..!

210 ಸ್ಟ್ರೈಕ್‌ನೊಂದಿಗೆ ಬ್ಯಾಟ್ ಬೀಸಿದ ಅಲೆನ್

ಕ್ಯಾಂಟರ್ಬರಿ ನೀಡಿದ ಸರಳ ಗುರಿ ಬೆನ್ನಟ್ಟಿದ ವೆಲ್ಲಿಂಗ್ಟನ್ ತಂಡ ಅಲೆನ್ ಅವರ ಅತ್ಯುತ್ತಮ ಇನ್ನಿಂಗ್ಸ್ ನೆರವಿನಿಂದ ಸುಲಭವಾಗಿ ಗುರಿ ಬೆನ್ನಟ್ಟಿತು. ಅಲೆನ್ ಮೊದಲು ನಿಕ್ ಕೆಲ್ಲಿಯೊಂದಿಗೆ 58 ರನ್ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ನಿಕ್ 12 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ್ದ ಫಿನ್ ಅಲೆನ್ ಬಿರುಸಿನ ಬ್ಯಾಟಿಂಗ್ ಮಾಡಿ ರನ್ ಗಳಿಸುತ್ತಲೇ ಇದ್ದರು. ಒಟ್ಟು ತಂಡದ ಮೊತ್ತ 123 ಸ್ಕೋರ್‌ನಲ್ಲಿ ಫಿನ್ ಅಲೆನ್ ವಿಕೆಟ್ ಒಪ್ಪಿಸಿ ಪೆವಿಲಿಯನ್​ಗೆ ಮರಳಿದರು. ತಮ್ಮ ಇನ್ನಿಂಗ್ಸ್​ನಲ್ಲಿ 37 ಎಸೆತಗಳನ್ನು ಎದುರಿಸಿದ ಅಲೆನ್​ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ ಸಹಿತ 78 ರನ್ ಚಚ್ಚಿದರು.

ಕ್ಯಾಂಟರ್ಬರಿಯ ಇನ್ನಿಂಗ್ಸ್ ಹೀಗಿತ್ತು

ಮೊದಲು ಬ್ಯಾಟಿಂಗ್ ಮಾಡಿದ ಕ್ಯಾಂಟರ್ಬರಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಬೋವ್ಸ್ ಮೊದಲ ಎಸೆತದಲ್ಲಿಯೇ ಔಟಾದರು. ಬಳಿಕ ಲಿಯೊ ಕಾರ್ಟರ್ ಕೂಡ ಮೂರು ರನ್ ಗಳಿಸಿ ಔಟಾದರು. ಮ್ಯಾಥ್ಯೂ ಬೋಯ್ಲ್ ಆರು ರನ್‌ಗಳನ್ನು ದಾಟಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಮೆಕಾಂಚಿ ಮತ್ತು ವಿಕೆಟ್‌ಕೀಪರ್ ಕ್ಯಾಮ್ ಫ್ಲೆಚರ್ ತಂಡವನ್ನು ನಿಭಾಯಿಸಲು ಯತ್ನಿಸಿದರು. ನಾಯಕ 36 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 35 ರನ್ ಗಳಿಸಿದರೆ, ಫ್ಲೆಚರ್ 23 ಎಸೆತಗಳಲ್ಲಿ 29 ರನ್ ಗಳಿಸಿದರು. ಕೊನೆಯಲ್ಲಿ ಟಾಡ್ ಆಸ್ಲೆ 18 ಮತ್ತು ಬ್ಲ್ಯಾಕ್ ಕೋಬರ್ನ್ 12 ರನ್ ಕೊಡುಗೆ ನೀಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/finn-allen-scored-78-runs-just-37-balls-in-super-smash-rcb-retain-him-in-ipl-2023-psr-au14-494091.html

Leave a Reply

Your email address will not be published. Required fields are marked *