ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗದಲ್ಲಿ ಶುಕ್ರವಾರ ಕೆಲವೊತ್ತು ಸಾಧಾರಣ ಮಳೆ ಆಯಿತು. ಈ ವರ್ಷ ಆರಂಭದಿಂದಲೂ ತೀವ್ರ ಬಿಸಿಲಿದ್ದು ಕಳೆದ ಕೆಲದಿನಗಳಿಂದ ಉಷ್ಣಾಂಶ ತೀವ್ರತೆ, ಬಿಸಿಲಿನ ದಗೆಯಿಂದ ಸಾರ್ವಜನಿಕರನ್ನು ಹೈರಾಣಾಗಿಸಿದೆ.
ಮಧ್ಯಾಹ್ನದಿಂದಲೇ ವಾತಾವರಣ ಮಳೆಯ ಮುನ್ಸೂಚನೆ ನೀಡಿತ್ತು. ಸಂಜೆ ಆಗುತ್ತಿದ್ದಂತೆ ತುಂತುರು ಮಳೆ ಸುರಿಯಿತು. ತುಂತುರು ಮಳೆಯ ಸಿಂಚನ ಕಂಡು ಜನರು ಕೊಂಚ ನಿರಾಳರಾದರು.
ಜಿಲ್ಲೆಯಲ್ಲಿ ಶುಕ್ರವಾರ ಈ ವರ್ಷದ ಮೊದಲ ವರ್ಷಧಾರೆಯಾಗಿದ್ದು ರೈತರು ಸೇರಿದಂತೆ ಸಾರ್ವಜನಿಕರಲ್ಲಿ ಒಂದಷ್ಟು ಭರವಸೆ ಮೂಡಿಸಿದೆ. ಇದು ಈ ವರ್ಷದ ಮೊದಲ ಮಳೆಯಾದ್ದರಿಂದ ಕಾದ ಕಬ್ಬಿಣದಂತಾಗಿದ್ದ ಇಳೆಯನ್ನು ತಂಪಾಗಿಸಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನೂ ನಾಲ್ಕೈದು ದಿನ ಮಳೆಯಾಗುವ ಲಕ್ಷಣ ಸಾಧ್ಯತೆಗಳಿವೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1