ಜಾನಪದ ಉತ್ಸವ ಕಾರ್ಯಕ್ರಮ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 11 ಮದಕರಿ ಯುವ ಸಂಘ ರಿ. ಚಿತ್ರದುರ್ಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಡಿ. 13 ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಜಾನಪದ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.


ಜಾನಪದ ಉತ್ಸವವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯರಾದ ಡಾ.ಜೆ.ಕರಿಯಪ್ಪ ಮಾಳಿಗೆ, ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೆಶಕರಾದ ಎಸ್.ಕೆ.ಮಲ್ಲಿಕಾರ್ಜನ್, ವದ್ದಿಕೆರೆಯ ಶ್ರೀ ಗುರು
ಕರಿಬಸವೇಶ್ವರಸ್ವಾಮಿ ಮಠದ ವದ್ದಿಕೆರೆ ಕಾಂತರಾಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ
ಎ.ನಾಗರಾಜ್, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಡಿ.ಗೋಪಾಲಸ್ವಾಮಿ ನಾಯಕ್, ಶ್ರೀನಿವಾಸ್ ಮಳಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗಾರಡಿ ಗೊಂಬೆ, ನಾಸಿಕ್ ಡೋಲ್, ಕೀಲು ಕುದುರೆ, ನವಿಲು ಕುಣಿತ, ನಂದಿ ಧ್ವಜ, ಜಾನಪದ ಸಂಗೀತ,
ಭಜನೆ, ಕೋಲಾಟ, ಕಹಳೆ, ಗೊರವ ಕುಣಿತ ತತ್ವ ಪದಗಳ ಗಾಯನ ನಡೆಯಲಿದೆ.

Leave a Reply

Your email address will not be published. Required fields are marked *