ಈ ಕೆಲವು ಸಿಂಪಲ್ ಟಿಪ್ಸ್ ಅನುಸರಿಸುವುದರಿಂದ ಎಷ್ಟೇ ವರ್ಷಗಳಾದರೂ ಕೂಡ ನಿಮ್ಮ ಬಟ್ಟೆಯ ಬಣ್ಣ ಮಾಸುವುದಿಲ್ಲ. ಜೊತೆಗೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಇದಲ್ಲದೇ ನೀವು ಯಾವಾಗ ಧರಿಸಿದರೂ ಕೂಡ ಬಟ್ಟೆ ಹೊಸತರಂತೆ ಕಾಣುತ್ತದೆ.

ಎರಡು ಸಲ ಬಟ್ಟೆ ಒಗೆದ ನಂತರ ಬಟ್ಟೆಯ ಬಣ್ಣ ಮಾಸಿ ಹೋಗುತ್ತದೆ ಎಂದು ಸಾಕಷ್ಟು ಜನರು ಹೇಳುವುದುಂಟು. ಆದ್ದರಿಂದ ನೀವು ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ನೀವು ಬಟ್ಟೆ ಖರೀದಿಸುವುದರಿಂದ ಹಿಡಿದು ಬಟ್ಟೆ ಒಗೆದು ಒಣಗಿಸುವರೆಗೆ ಈ ಕೆಲವು ಸಲಹೆಗಳನ್ನು ಪಾಲಿಸುವುದು ಅಗತ್ಯ. ಈ ಸಿಂಪಲ್ ಟಿಪ್ಸ್ ಅನುಸರಿಸುವುದರಿಂದ ಎಷ್ಟೇ ವರ್ಷಗಳಾದರೂ ಕೂಡ ನಿಮ್ಮ ಬಟ್ಟೆಯ ಬಣ್ಣ ಮಾಸುವುದಿಲ್ಲ. ಜೊತೆಗೆ ನೀವು ಯಾವಾಗ ಧರಿಸಿದರೂ ಕೂಡ ಬಟ್ಟೆ ಹೊಸತರಂತೆ ಕಾಣುತ್ತದೆ.
ಬಟ್ಟೆಗಳ ಬಣ್ಣ ಮಾಸದಿರಲು ಈ ಸಲಹೆಗಳನ್ನು ಅನುಸರಿಸಿ:
ಸೂಚನೆಗಳನ್ನು ಅನುಸರಿಸಿ:
ಕಡಿಮೆ ಬೆಲೆಯ ಹತ್ತು ಬಟ್ಟೆ ಖರೀದಿಸುವ ಬದಲು, ಉತ್ತಮ ಗುಣಮಟ್ಟದ ಎರಡು ಬಟ್ಟೆ ಖರೀದಿಸಿ. ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಖರೀದಿಸಿದರೆ, ಅವುಗಳನ್ನು ಹೇಗೆ ತೊಳೆಯಬೇಕು ಎಂಬುದರ ಕುರಿತು ಕೆಲವು ರೀತಿಯ ಸೂಚನೆಗಳನ್ನು ಬಟ್ಟೆಯ ಒಳಗೆ ಬರೆದಿರುತ್ತಾರೆ. ಆದ್ದರಿಂದ ಆ ಸೂಚನೆಯ ಅನುಸಾರ ಬಟ್ಟೆಯನ್ನು ತೊಳೆಯಿರಿ.
ಪ್ರತ್ಯೇಕವಾಗಿ ತೊಳೆಯಿರಿ:
ಅನೇಕರು ಮಾಡುವ ತಪ್ಪೆಂದರೆ ಎಲ್ಲಾ ಬಟ್ಟೆಗಳನ್ನು ಒಂದೇ ಬಾರಿಗೆ ಒಗೆಯುವುದು. ಆದರೆ ಅದು ಸರಿಯಲ್ಲ. ಬಟ್ಟೆಗಳು ದೀರ್ಘಕಾಲ ಉಳಿಯಬೇಕೆಂದು ನೀವು ಬಯಸಿದರೆ, ಕಡು ಬಣ್ಣದ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ. ಕೆಲವೊಮ್ಮೆ ಬಟ್ಟೆಯ ಬಣ್ಣ ಹೋಗುವುದರಿಂದ ಒಟ್ಟಿಗೆ ಒಗೆದು ತಿಳಿ ಬಣ್ಣದ ಬಟ್ಟೆಗಳು ಕೂಡ ಹಾಳಾಗಬಹುದು.
ಹೆಚ್ಚು ಹೊತ್ತು ನೆನೆಸಿಡಬೇಡಿ:
ಹಲವರಿಗೆ ಬಟ್ಟೆ ಒಗೆಯುವಾಗ ತುಂಬಾ ಹೊತ್ತು ಬಟ್ಟೆಗಳನ್ನು ನೆನೆಸಿಡುವ ಅಭ್ಯಾಸ ಹೊಂದಿರುತ್ತಾರೆ. ಯಾವುದೇ ಬಟ್ಟೆಯನ್ನು ಅರ್ಧ ಗಂಟೆ ಅಥವಾ ಒಂದು ಗಂಟೆಗಿಂತ ಹೆಚ್ಚು ಕಾಲ ನೆನೆಸಬಾರದು. ಹೀಗೆ ಮಾಡಿದರೆ ಬಣ್ಣಗಳು ಬೇಗ ಮಾಸಿ ಹೋಗಬಹುದು.
ಬಿಸಿ ನೀರಿನಿಂದ ತೊಳೆಯಬೇಡಿ:
ಕೆಲವೊಮ್ಮೆ ಬಟ್ಟೆಯಲ್ಲಿರುವ ಜಿಡ್ಡು ಅಥವಾ ಕೊಳೆ ಬೇಗ ಹೋಗಲಿ ಎಂದು ಬಿಸಿ ನೀರಿನಿಂದ ತೊಳೆಯುತ್ತಾರೆ. ಈ ರೀತಿ ಬಿಸಿ ನೀರಿನಿಂದ ಬಟ್ಟೆ ತೊಳೆದರೆ ಬಣ್ಣ ಬೇಗ ಮಾಸಿ ಹೋಗುತ್ತದೆ. ಜೊತೆಗೆ ಬಟ್ಟೆಗಳು ಬೇಗನೆ ಸವೆಯುತ್ತವೆ.
ಹೆಚ್ಚು ಹೊತ್ತು ಬಿಸಿಲಿನಲ್ಲಿ ಒಣಗಿಸಬೇಡಿ:
ಬಣ್ಣದ ಬಟ್ಟೆಗಳನ್ನು ಹೆಚ್ಚು ಬಿಸಿಲಿನಲ್ಲಿ ಒಣಗಿಸಬೇಡಿ. ನೆರಳಿನಲ್ಲಿ ಮತ್ತು ಗಾಳಿಯಲ್ಲಿ ಒಣಗಲು ಬಿಡಿ.ದಿನವಿಡೀ ಬಿಸಿಲಿನಲ್ಲೇ ಬಟ್ಟೆಯನ್ನು ಒಣಗಿಸುವವರೂ ಇದ್ದಾರೆ. ಈ ಅಭ್ಯಾಸ ನಿಮ್ಮ ಬಟ್ಟೆಯನ್ನು ಹಾಳು ಮಾಡಬಹುದು.
ನೆನೆಸಿದ ನೀರಿಗೆ ಸೇರಿಸಿ:
ಬಣ್ಣ ಮರೆಯಾಗುವುದನ್ನು ತಡೆಯಲು ನೆನೆಸಿದ ನೀರಿಗೆ ವಿನೆಗರ್ ಅಥವಾ ಆಪಲ್ ಸೈಡರ್ ವಿನೆಗರ್ ಸೇರಿಸಿ. ಈ ವಾಸನೆಯನ್ನು ಇಷ್ಟಪಡದವರು,ಈಗ ಅನೇಕ ಪರಿಮಳಯುಕ್ತ ದ್ರವಗಳು ಮಾರುಕಟ್ಟೆಯಲ್ಲಿ ಲಭ್ಯವಿರುವದರಿಂದ ಅವುಗಳನ್ನು ಬಳಸಬಹುದಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1