ಬೇಸಿಗೆಯೆಂದರೆ ಬಹುತೇಕರಿಗೆ ಅಲರ್ಜಿ. ಯಾಕಾದ್ರೂ ಈ ಬೇಸಿಗೆ ಬರುತ್ತದೆ ಎಂದು ಗೊಣಗುತ್ತಲೇ ಮಳೆಗಾಲವನ್ನು ಎದುರು ನೋಡುತ್ತಿರುತ್ತಾರೆ. ಈ ಬೇಸಿಗೆಯ ಸಮಯದಲ್ಲಿ ಕಾಯಿಲೆಗಳು ಅಧಿಕ. ಚರ್ಮ ರೋಗ ಸೇರಿದಂತೆ ಇನ್ನಿತ್ತರ ಆರೋಗ್ಯ ಸಮಸ್ಯೆಗಳಿಂದ ಬಳಲುವವರೇ ಹೆಚ್ಚು. ಮೈ ಸುಡುವ ಬಿಸಿಲಿನ ನಡುವೆ ಕೆಲವರು ಪಾದದ ಉರಿಯನ್ನು ಅನುಭವಿಸುತ್ತಾರೆ. ನಡೆಯಲು ಸಾಧ್ಯವಾಗದೇ ಪಾದದ ಅಡಿಯಲ್ಲಿ ಸುಡುವ ಅನುಭವವು ಕಿರಿಕಿರಿಯನ್ನುಂಟು ಮಾಡುತ್ತದೆ. ನಿಮಗೂ ಈ ಸಮಸ್ಯೆಯಿದ್ದರೆ ಮನೆಯಲ್ಲೇ ಈ ಕೆಲವು ಮನೆ ಮದ್ದಿನಿಂದ ಪಾದಗಳ ಉರಿಯುವಿಕೆಯನ್ನು ಗುಣ ಪಡಿಸಿಕೊಳ್ಳಬಹುದು.

ಬೇಸಿಗೆಯಲ್ಲಿ ಪಾದಗಳ ಉರಿಯುವಿಕೆ ಸಮಸ್ಯೆಯು ಅನೇಕರಲ್ಲಿ ಕಾಡುತ್ತದೆ. ಆದರೆ ಕೆಲವರಿಗೆ ಈ ಸಮಸ್ಯೆಯು ವರ್ಷದ ಎಲ್ಲಾ ಋತುವಿನಲ್ಲಿ ಕಾಣಿಸಿಕೊಳ್ಳುತ್ತವೆ. ಹೆಚ್ಚಿನವರು ಈ ಪಾದಗಳ ಉರಿ ಸಮಸ್ಯೆಯಿಂದ ಈ ಸುಡುವಂತಹ ಅನುಭವವನ್ನು ಸಹಿಸಲಾರದೇ ನೀರಿನಲ್ಲಿ ಪಾದಗಳನ್ನು ಇಟ್ಟುಕೊಳ್ಳುವವರು ಇದ್ದಾರೆ. ಕಾಲಿನಲ್ಲಿ ರಕ್ತ ಸಂಚಾರ ಸರಿಯಿಲ್ಲದ್ದಿದ್ದಾಗ, ಮಧುಮೇಹ, ರಕ್ತದೊತ್ತಡ, ಮದ್ಯಪಾನ, ವಿಟಮಿನ್ ಸಿಯ ಕೊರತೆಯಿಂದಾಗಿ ಪಾದಗಳಲ್ಲಿ ಉರಿಯಂತಹ ಅನುಭವವಾಗುತ್ತದೆ.
ಪಾದಗಳ ಉರಿಗೆ ಸರಳ ಮನೆ ಮದ್ದುಗಳು
- ಪಾದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ರಕ್ತ ಸಂಚಾರದ ಸಮಸ್ಯೆಯು ನಿವಾರಣೆಯಾಗಿ ಉರಿಯ ಅನುಭವವು ಕಡಿಮೆಯಾಗುತ್ತದೆ.
- ದೇಹಕ್ಕೆ ತಂಪಾಗಿರುವ ಈ ಮದರಂಗಿಯನ್ನು ಉಷ್ಣದಿಂದ ಪಾದದಲ್ಲಿ ಉರಿ ಉಂಟಾಗುತ್ತಿದ್ದರೆ, ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಪಾದವನ್ನು ತೊಳೆಯುವುದರಿಂದ ತಂಪಿನ ಅನುಭವವಾಗುತ್ತದೆ.
- ಒಂದು ಚಮಚ ಸೋಂಪು ಕಾಳು ಹಾಗೂ ಒಂದು ಚಮಚ ಸಕ್ಕರೆಯನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಂಡು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
- ಅರಿಶಿನ ನೀರಿನಲ್ಲಿ ಪಾದವನ್ನು ಸ್ವಲ್ಪ ಹೊತ್ತು ಇಡುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.
- ಒಂದು ಗ್ಲಾಸ್ ನೀರಿಗೆ ವಿನೆಗರ್ ಒಂದು ಚಮಚ ಬೆರೆಸಿ ಕುಡಿಯುವುದರಿಂದ ಪಾದದ ಉರಿಯು ಕಡಿಮೆಯಾಗುತ್ತದೆ.
- ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಕಪ್ ಕಲ್ಲು ಉಪ್ಪನ್ನು ಬೆರೆಸಿ, ಹತ್ತು ಹದಿನೈದು ನಿಮಿಷಗಳ ಕಾಲ ಪಾದವನ್ನಿಟ್ಟರೆ ಉರಿ ಅನುಭವವು ಕಡಿಮೆಯಾಗುತ್ತದೆ.
- ಸಾಸಿವೆ ಎಣ್ಣೆಯಿಂದ ಪಾದವನ್ನು ಸಾಸಿವೆ ಎಣ್ಣೆಯನ್ನು ಹಚ್ಚಿಕೊಂಡು, ಸ್ವಲ್ಪ ಸಮಯದ ನಂತರದಲ್ಲಿ ಐಸ್ ತುಂಡುಗಳಿಂದ ಮಸಾಜ್ ಮಾಡುವುದರಿಂದ ಪರಿಣಾಮಕಾರಿಯಾಗಿದೆ.
- ಮುಲ್ತಾನಿ ಮಿಟ್ಟಿಯ ಮಿಶ್ರಣವನ್ನು ಪಾದಕ್ಕೆ ಹಚ್ಚುವುದರಿಂದಲೂ ಈ ಪಾದದ ಉರಿಯಿಂದ ಪರಿಹಾರ ಕಂಡುಕೊಳ್ಳಬಹುದು.
- ಸೋರೆ ಕಾಯಿಯ ತಿರುಳನ್ನು ಪಾದದ ಅಡಿಗೆ ಉಜ್ಜಿಕೊಳ್ಳುವುದರಿಂದಲೂ ಪಾದದ ಉರಿಯು ನಿವಾರಣೆಯಾಗುತ್ತದೆ.
- ಈ ಮನೆ ಮದ್ದನ್ನೊಮ್ಮೆ ತಯಾರಿಸುವ ಮುನ್ನ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಉತ್ತಮ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0