Footballer Death: ಟರ್ಕಿ ಭೂಕಂಪದಲ್ಲಿ ಫುಟ್ಬಾಲ್ ಆಟಗಾರ ಅಹ್ಮತ್ ಎಯುಪ್ ಟುರ್ಕಾಸ್ಲಾನ್ ಸಾವು

Ahmet Eyup Turkaslam

ಅಂಕಾರ: ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ (Turkey earthquake death toll) ಕ್ಷಣಕ್ಷಣವೂ ಏರುತ್ತಿದೆ. ಧರೆಗೆ ಕುಸಿದ ಕಟ್ಟಡಗಳ ಅವಶೇಷಗಳನ್ನು ಹೊರತೆಗೆದಷ್ಟೂ ನೂರಾರು ಶವಗಳು ಸಿಗುತ್ತಿವೆ. ಎರಡು ದಿನದಲ್ಲಿ ಸಾವಿನ ಸಂಖ್ಯೆ 8 ಸಾವಿರ ಆಗಿದೆ. ಇದೇ ವೇಳೆ, ಟರ್ಕಿ ದೇಶದ ಫುಟ್ಬಾಲ್ ಆಟಗಾರರೊಬ್ಬರು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ. ಟರ್ಕಿಯ ಫುಟ್ಬಾಲ್ ಗೋಲ್​ಕೀಪರ್ ಅಹ್ಮತ್ ಎಯುಪ್ ಟುರ್ಕಸ್ಲಾನ್ ನಿಧನರಾಗಿರುವುದು ದೃಢಪಟ್ಟಿದೆ.

ಅಹ್ಮತ್ ಎಯುಪ್ ಟುರ್ಕಸ್ಲಾನ್ ಅವರು ಟರ್ಕಿಯ ಸೆಕೆಂಡ್ ಡಿವಿಶನ್ ಕ್ಲಬ್ ಯೇನಿ ಮಲತ್ಯಾಸ್ಪೋರ್ ಕ್ಲಬ್​ನಲ್ಲಿ ಗೋಲ್ ಕೀಪರ್ ಆಗಿ ಆಡುತ್ತಿದ್ದರು. ಕ್ಲಬ್​ನ ಅಧಿಕೃತ ಪ್ರಕಟಣೆಯಲ್ಲಿ ಈ ಸಾವಿನ ಸುದ್ದಿ ತಿಳಿಸಲಾಗಿದೆ.

ನಮ್ಮ ಗೋಲ್​ಕೀಪರ್ ಅಹಮತ್ ಎಯುಪ್ ತುರ್ಕಸ್ಲಾನ್ ಭೂಕಂಪದಲ್ಲಿ ಜೀವ ಕಳೆದುಕೊಂಡಿದ್ದಾರೆ…. ನಿಮ್ಮ ನೆನಪು ಹಸಿರಾಗಿಯೇ ಇರುತ್ತದೆ ಎಂದು ಈ ಕ್ಲಬ್ ಟ್ವೀಟ್ ಮಾಡಿದೆ.

ಅಹ್ಮತ್ ಎಯುಪ್ ಟುರ್ಕಸ್ಲಾನ್ ಅವರಿಗೆ 28 ವರ್ಷ ವಯಸ್ಸಾಗಿತ್ತು.

ಮತ್ತೊಬ್ಬ ಫುಟ್ಬಾಲರ್ ಸಾವಿನಿಂದ ಬಚಾವ್

ಘಾನಾ ಮೂಲದ ಕ್ರಿಸ್ಟಿಯನ್ ಆಟ್ಸು ಎಂಬ ಫುಟ್ಬಾಲ್ ಆಟಗಾರ ಸಾವಿನಿಂದ ಬಚಾವ್ ಆದ ಘಟನೆ ನಡೆದಿದೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿ ಬದುಕಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ 31 ವರ್ಷದ ಕ್ರಿಸ್ಟಿಯನ್ ಆಟ್ಸು ಅವರನ್ನು ರಕ್ಷಣಾ ಕಾರ್ಯಕರ್ತರು ಕಾಪಾಡಿದ್ದಾರೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

source https://tv9kannada.com/sports/turkey-footballer-ahmet-eyup-turkslam-died-to-earthquake-another-player-survives-snvs-au63-516444.html

Leave a Reply

Your email address will not be published. Required fields are marked *