Skip to content
  • Friday, March 27, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • WTC Final 2023: ಫೈನಲ್​ ಪಂದ್ಯಕ್ಕೆ ಗ್ರೀನ್ ಪಿಚ್: ಬ್ಯಾಟರ್​ಗಳಿಗೆ ನಡುಕ ಶುರು..!
Sports

WTC Final 2023: ಫೈನಲ್​ ಪಂದ್ಯಕ್ಕೆ ಗ್ರೀನ್ ಪಿಚ್: ಬ್ಯಾಟರ್​ಗಳಿಗೆ ನಡುಕ ಶುರು..!

June 6, 2023
samagrasuddi

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ನಾಳೆಯಿಂದ (ಜೂ.7) ಆರಂಭವಾಗಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.ಇದೀಗ ಓವಲ್​ ಸ್ಟೇಡಿಯಂನಲ್ಲಿ ಫೈನಲ್​ ಪಂದ್ಯಕ್ಕಾಗಿ ಸಜ್ಜುಗೊಳಿಸಲಾಗಿರುವ ಪಿಚ್​ನ ಮೇಲ್ಮೈ ಅನಾವರಣಗೊಂಡಿದೆ. ಹಸಿರು ಹುಲ್ಲಿನಿಂದ ಕೂಡಿರುವ ಪಿಚ್​ ಇದೀಗ ಟೀಮ್ ಇಂಡಿಯಾ ಆಟಗಾರರ ಚಿಂತೆಯನ್ನು ಹೆಚ್ಚಿಸಿದೆ.ಏಕೆಂದರೆ ಗ್ರೀನ್ ಪಿಚ್​ ಎಂಬುದು ಬೌಲರ್​ಗಳಿಗೆ ಸಹಕಾರಿಯಾಗಿರುತ್ತದೆ. ಅದರಲ್ಲೂ ವೇಗದ ಬೌಲರ್​ಗಳಿಗೆ ಹಸಿರು ಮೇಲ್ಮೈ ಪಿಚ್ ಒಂದು ರೀತಿಯ ಸ್ವರ್ಗ. ಏಕೆಂದರೆ ಗ್ರೀನ್​ ಪಿಚ್​ನಲ್ಲಿ ವೇಗಿಗಳು ಉತ್ತಮವಾಗಿ ಸ್ವಿಂಗ್ ಮಾಡಬಲ್ಲರು. ಹಾಗೆಯೇ ಅನಿರೀಕ್ಷಿತ ಬೌನ್ಸರ್​ಗಳು ಎದುರಾಗಲಿದೆ. ಇದರ ಜೊತೆಗೆ ಚೆಂಡು ವೇಗವಾಗಿ ಪುಟಿದೇಳುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ಕ್ರಿಸ್​ ಕಚ್ಚಿ ನಿಲ್ಲುವುದೇ ದೊಡ್ಡ ಸವಾಲಾಗಿರುತ್ತದೆ.ಇತ್ತ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನೇ ನೆಚ್ಚಿಕೊಂಡಿರುವ ತಂಡ. ಏಕೆಂದರೆ ತಂಡದಲ್ಲಿ ಅತ್ಯುತ್ತಮ ವೇಗಿಗಳಾಗಿರುವುದು ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್. ಇನ್ನು ಪ್ರಮುಖ ವೇಗಿ ಜಸ್​​ಪ್ರೀತ್ ಬುಮ್ರಾ ಗಾಯದ ಕಾರಣ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.ಆದರೆ ಅತ್ತ ಎಡಗೈ ವೇಗಿಯಾಗಿ ಮಿಚೆಲ್ ಸ್ಟಾರ್ಕ್ ಇದ್ದು, ಬಲಗೈ ವೇಗಿ ಪ್ಯಾಟ್ ಕಮಿನ್ಸ್ ಸಾಥ್ ನೀಡಲಿದ್ದಾರೆ. ಇದರ ಜೊತೆಗೆ ಸ್ಕಾಟ್ ಬೋಲ್ಯಾಂಡ್​ ಕೂಡ ಕಣಕ್ಕಿಳಿಯುವುದು ಖಚಿತ. ಹಾಗೆಯೇ ಆಲ್​ರೌಂಡರ್​ ಆಗಿ ಕಾಣಿಸಿಕೊಳ್ಳಲಿರುವ ಕ್ಯಾಮರೋನ್ ಗ್ರೀನ್ ಕೂಡ ವೇಗದ ಬೌಲರ್.ಅಂದರೆ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ನಾಲ್ವರು ವೇಗಿಗಳು ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಹೀಗಾಗಿಯೇ ಗ್ರೀನ್ ಪಿಚ್​ನಲ್ಲಿ ಆಸ್ಟ್ರೇಲಿಯಾ ವೇಗಿಗಳನ್ನು ಎದುರಿಸುವುದು ಟೀಮ್ ಇಂಡಿಯಾ ಬ್ಯಾಟರ್​ಗಳಿಗೆ ಸವಾಲಾಗಿರಲಿದೆ. ಈ ಸವಾಲನ್ನು ಮೆಟ್ಟಿ ನಿಂತು ಭಾರತ ತಂಡ ವಿಶ್ವ ಚಾಂಪಿಯನ್ ಆಗಲಿದೆಯಾ ಕಾದು ನೋಡಬೇಕಿದೆ.

source https://tv9kannada.com/photo-gallery/cricket-photos/wtc-final-2023-lush-green-first-look-of-oval-kannada-news-zp-595394.html

Tags: Cricket, samagrasuddi, ಸಮಗ್ರ ಸುದ್ದಿ

Post navigation

Indian Economy: ಪ್ರಬಲ ಆರ್ಥಿಕತೆಯ ಸಂಕೇತ ನೀಡುತ್ತಿವೆ GDP ಅಂಕಿ-ಅಂಶಗಳು, ಕೃಷಿ-ಸೇವಾ ವಲಯಗಳಲ್ಲಿ ಭಾರಿ ಉತ್ಕರ್ಷ
‘ಅದರ ಬಗ್ಗೆ ಮಾತನಾಡಬಾರದು’ ಎಂದು ಹೇಳಿದ್ದಾರೆ: ಅಮಿತ್ ಶಾ ಭೇಟಿ ಬಗ್ಗೆ ಕುಸ್ತಿಪಟು ಬಜರಂಗ್ ಪುನಿಯಾ

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 10 | ದಿನ 82

March 27, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 9 | ದಿನ 81

March 26, 2026
samagrasuddi
Spiritual

2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ

March 25, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
  • ಐಪಿಎಲ್ 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಂಪೂರ್ಣ ವೇಳಾಪಟ್ಟಿ ಪ್ರಕಟ.
  • ಕಲ್ಲುಗಣಿಗಾರಿಕೆ ವಿರೋಧಿಸಿ ರೈತಸಂಘ ಪ್ರತಿಭಟನೆ.
  • Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 10 | ದಿನ 82
  • ಛಲವಾದಿ ನಾರಾಯಣಸ್ವಾಮಿ ಅವರಿಗೆ ಮಾತನಾಡಲು ಅಡ್ಡಿ; ಕಾಂಗ್ರೆಸ್ ವಿರುದ್ಧ ಸಮುದಾಯದ ಮುಖಂಡರ ಆಕ್ರೋಶ.
  • ಚಿತ್ರದುರ್ಗ: ಶ್ರೀ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದ ಶತಮಾನೋತ್ಸವ ಸಂಭ್ರಮ; ಮೂರು ದಿನಗಳ ಕಾಲ ಶ್ರೀ ರಾಮೋತ್ಸವ.
Copyright © 2026
CONTACT US
Theme by: Theme Horse
Proudly Powered by: WordPress