ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ  ಶಾಲಾ ಸಂಸತ್ತು ರಚನೆ.

ವಿದ್ಯಾರ್ಥಿಗಳಲ್ಲಿ ಮತದಾನ ಮತ್ತು ಸರ್ಕಾರ ರಚನೆಯ ವಿಧಾನವನ್ನು ತಿಳಿಸಿ ಕೊಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಮೆಚ್ಚಿನ ಅಭ್ಯರ್ಥಿಗೆ ಮತ ಹಾಕುವ ಮೂಲಕ ಮತದಾನಕ್ಕೆ ಸಾಕ್ಷಿಯಾದರು.

ಮತದಾನಕ್ಕೂ ಮೊದಲು ಅಭ್ಯರ್ಥಿಗಳು ತಮ್ಮ ಪರ ಮತ ಹಾಕುವಂತೆ ಪ್ರಚಾರ ನಡೆಸಿದರು. ವಿದ್ಯಾರ್ಥಿಗಳು ತುಂಬಾ ಉತ್ಸಾಹ ದಿಂದ‌ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಮತಗಟ್ಟೆ ಯ ಅಧಿಕಾರಿಗಳಾಗಿ ಶಿಕ್ಷಕರಾದ ಏಕಾಂತ್ ರೆಡ್ಡಿ, ಸೃಜನ, ಸುನೀತಾ ಮುರಳಿ  ಕರ್ತವ್ಯ ನಿರ್ವಹಿಸಿದರು. ಹೆಡ್ ಕೋ ಆರ್ಡಿನೇಟರ್ ಕೆ.ಬಸವರಾಜು ರವರ ಮಾರ್ಗದರ್ಶನದಲ್ಲಿ ಶಾಲಾ ಸಂಸತ್ತು ಚುನಾವಣೆ  ನಡೆಯಿತು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್ ಎಸ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ,  ಪ್ರಾಚಾರ್ಯರಾದ ಸಿ ಡಿ ಸಂಪತ್ ಕುಮಾರ್ ಮತ್ತು ಶಿಕ್ಷಕ/ಕಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *