ಚಿತ್ರದುರ್ಗ: 95ನೇ ಶಿವನಾಮ ಸಪ್ತಾಹದ ಸ್ವಾಗತ ಸಮಿತಿ ರಚನೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 05 2025ರ ಫೆ. 20 ರಿಂದ 26ರವರೆಗೆ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ ನಡೆಯಲಿರುವ 95ನೇ ಶಿವನಾಮ ಸಪ್ತಾಹದ ಸ್ವಾಗತ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ
ಶ್ರೀಗಳ ತಿಳಿಸಿದರು.
ಚಿತ್ರದುಗ್ ನಗರದಲ್ಲಿ ಶನಿವಾರ ಸಂಜೆ ಶ್ರೀ ಕಬೀರಾನಂದಾಶ್ರಮದಲ್ಲಿ ನಡೆದ ಶಿವರಾತ್ರಿ ಸಪ್ತಾಹದ ಪೂರ್ವಬಾವಿ ಸಭೆಯ
ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕಳೆದ 94 ಶಿವರಾತ್ರಿ ಸಪ್ತಾಹಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ, ಇದೆ ರೀತಿ 95ನೇ
ಶಿವರಾತ್ರಿ ಸಪ್ತಾಹವನ್ನು ಸಹಾ ಯಶಸ್ವಿಯಾಗಿ ನಡೆಸಲು ನಿರ್ಧಾರ ಮಾಡಲಾಗಿದೆ ಇದಕ್ಕಾಗಿ ಸ್ವಾಗತ ಸಮಿತಿಯನ್ನು ರಚನೆ
ಮಾಡಲಾಗಿದೆ, ಇದರಲ್ಲಿ ಕಾರ್ಯಾಧ್ಯಕ್ಷರಾಗಿ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು,
ಗೌರಾಧ್ಯಕ್ಷರಾಗಿ ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್, ಅಧ್ಯಕ್ಷರಾಗಿ ಮೇದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ
ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್ ರವರನ್ನು
ನೇಮಕ ಮಾಡಲಾಗಿದೆ.
ಇದೇ ರೀತಿ ಮಹಿಳೆಯರಿಗೂ ಸಹಾ ಪ್ರಾತಿನಿಧ್ಯವನ್ನು ನೀಡಲಾಗಿದ್ದು, ಅಧ್ಯಕ್ಷರಾಗಿ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ
ತಿಪ್ಪಮ್ಮ ವೆಂಕಟೇಶ್, ಉಪಾಧ್ಯಕ್ಷರಾಗಿ ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀಮತಿ ರೇಖಾ ರವರನ್ನು ನೇಮಕ
ಮಾಡಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ನಗರಾಭೀವೃದ್ದಿ
ಪ್ರಾಧಿಕಾರದ ಅಧ್ಯಕ್ಷರಾದ ತಾಜ್‍ಪೀರ್, ಜೆಡಿಎಸ್‍ನ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಹಿರಿಯ
ಪತ್ರಕರ್ತರಾದ ಉಜ್ಜನಪ್ಪ, ಮಂಜುನಾಥ ಗುಪ್ತ, ನಗರಸಭಾ ಸದಸ್ಯರಾದ ವೆಂಕಟೇಶ್, ವರ್ತಕರಾದ ವೆಂಕಟೇಶ್,
ರಾಮಮೂರ್ತಿ, ಜಿ.ಪಂ.ಮಾಜಿ ಅಧ್ಯಕ್ಷರಾದ ರಘುನಾಥ್, ಗಣಪತಿಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನ ಮೂರ್ತಿ, ತಿಪ್ಪೇಶಯ್ಯ,
ಧರ್ಮ ಪ್ರಸಾದ್, ಸುರೇಂದ್ರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *