ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 04
ನಗರದ ನಗರಸಭೆಯ ಮಾಜಿ ಸದಸ್ಯರಾಗಿದ್ದ ಚಂದ್ರಮ್ಮ (76) ಆನಾರೋಗ್ಯದ ನಿಮ್ಮಿತ್ತ ಇಂದು ಮಧ್ಯಾಹ್ನ 2.30ರ ಸಮಯದಲ್ಲಿ ಬೆಂಗಳೂರಿನ ರಿ ಹ್ಯಾಬಿಲಿಟೆಷನ್ ಸೆಂಟರ್ನಲ್ಲಿ ನಿಧನರಾಗಿದಾರೆ.
ಚಂದ್ರಮ್ಮನವರು ವಾಜಿಪೇಯವರು ಬಿಜೆಪಿ ಅಧ್ಯಕ್ಷರಾಗಿದ್ದಾಗ ಬಿ.ಜೆ.ಪಿ.ಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ಮತ್ತು ಚಿತ್ರದುರ್ಗ ನಗರದ 5ನೇವಾರ್ಡ್ನ ಸದಸ್ಯರಾಗಿ ಹಿಂದೂಪರ ಹೋರಾಟಗಾರಾಗಿ ವಕೀಲರಾಗಿ ಜನಾನುರಾಗಿಯಾಗಿದ್ದರು. ಮೃತರು ಸಹೋದರಿ, ಸಹೋದರರು ಸೇರಿದಂತೆ ಆಪಾರವಾದ ಬಂಧು ಬಳಗವನ್ನು ಆಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯೂ ಫೆ. 5ರ ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ : ನಗರಸಭೆಯ ಮಾಜಿ ಸದಸ್ಯರಾದ ಚಂದ್ರಮ್ಮ ರವರ ನಿಧನಕ್ಕೆ ಚಿತ್ರದುರ್ಗ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಮುಖಂಡರು, ಪದಾಧಿಕಾರಿಗಳು ಸಂತಾಪವನ್ನು ಸೂಚಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ಧಾರೆ.