ಚಿತ್ರದುರ್ಗ|ನಗರಸಭಾ ಮಾಜಿ ಸದಸ್ಯ ಬಾಂಡ್ ತಿಪ್ಪೇಸ್ವಾಮಿ ಅಗಲಿಕೆ: ಸಾರ್ವಜನಿಕರಿಂದ ಅಂತಿಮ ನಮನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 27

ನಗರಸಭಾ ಮಾಜಿ ಸದಸ್ಯರು ಹಾಗೂ ಜನತಾದಳದ ಹಿರಿಯ ಮುಖಂಡರಾದ ಬಾಂಡ್ ತಿಪ್ಪೇಸ್ವಾಮಿ [86] ಅನಾರೋಗ್ಯದ ಕಾರಣದಿಂದ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿರುತ್ತಾರೆ.

ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರು ಬಿಜೆಪಿ ಕಾರ್ಯಕರ್ತ ಯಶ್ವಂತ್ ಕುಮಾರ್ ಅವರ ತಂದೆಯವರಾಗಿದ್ದಾರೆ. ನಗರದ ಕರುವಿನಕಟ್ಟೆ ಬಳಿಯಲ್ಲಿನ ಕಬೀರಾನಂದ ಶಾಲೆ ಹತ್ತಿರ ಇರುವ ಅವರ ನಿವಾಸಕ್ಕೆ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ತದ ನಂತರ 5 ಗಂಟೆಯಿಂದ ಜೋಗಿಮಟ್ಟಿ ರಸ್ತೆಯಲ್ಲಿನ ಕೆಂಚಮ್ಮನ ಕಟ್ಟೆ ಬಳಿಯಲ್ಲಿನ ಈಶ್ವರ ದೇವಸ್ಥಾನದ ಬಳಿಯಲ್ಲಿ ಮೃತರ ಅಂತ್ಯಕ್ರಿಯೆಯನ್ನು ನಡೆಸಲಾಯಿತು.

ಸಂತಾಪ : ನಗರಸಭಾ ಮಾಜಿ ಸದಸ್ಯರು ಹಾಗೂ ಜನತಾದಳದ ಹಿರಿಯ ಮುಖಂಡರಾದ ಬಾಂಡ್ ತಿಪ್ಪೇಸ್ವಾಮಿರವರ ನಿಧನಕ್ಕೆ ಸಂಸದರಾದ ಗೋವಿಂದ ಕಾರಜೋಳರವರು ಸಂತಾಪವನ್ನು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *