
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಫೆ. 17 : ಅಮೇರಿಕಾದಲ್ಲಿ ಹಲವಾರು ಬ್ಯಾಂಕ್‌ಗಳು ಅಲ್ಲಿನ ಅರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದು ಮುಚ್ಚುವಂತ ಪರಿಸ್ಥಿತಿ
ನಿರ್ಮಾಣವಾಗಿದೆ, ಆದರೆ ನಮ್ಮ ದೇಶದಲ್ಲಿ ಉತ್ತಮವಾದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಪ್ರಪಂಚದಲ್ಲಿ ಆರ್ಥಿಕವಾಗಿ ಏರು
ಪೇರಾದರೂ ಸಹಾ ನಮ್ಮ ದೇಶದಲ್ಲಿ ಯಾವ ಬ್ಯಾಂಕ್ ಸಹಾ ಮುಳುಗಿಲ್ಲ, ಗ್ರಾಹಕರಿಗೆ ಅನ್ಯಾಯ ಮಾಡಿಲ್ಲ ಎಂದು ಮಾಜಿ
ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ವಿ.ಪಿ. ಬಡಾವಣೆಯಲ್ಲಿನ ನೂತನವಾಗಿ ಪ್ರಾರಂಭವಾದ ಸಿ.ಎಸ್.ಬಿ ಬ್ಯಾಂಕ್‌ನ 56ನೇ ಶಾಖೆಯನ್ನು
ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ ಮೂಲಕ ಹಣವನ್ನು ನೀಡುವಾಗ ಸರಿಯಾದ ವ್ಯವಸ್ಥೆ ಇಲ್ಲದೆ ಆರ್ಥಿಕವಾಗಿ
ದಿವಾಳಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬೇಕಾದವರೆಗೆಲ್ಲಾ ಹಣವನ್ನು ನೀಡುವುದರ ಮೂಲಕ ಗ್ರಾಹಕರಿಗೂ ಸಹಾ
ತೊಂದರೆಯನ್ನು ಉಂಟು ಮಾಡಲಾಯಿತು. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲದೆ ಎಲ್ಲರಿಗೂ ಸಹಾ ತೊಂದರೆಯಾಗಲಿದೆ.
ಆದರೆ ನಮ್ಮ ದೇಶದಲ್ಲಿ ಯಾವೊತ್ತು ಸಹಾ ಬ್ಯಾಂಕ್‌ಗಳು ಸುಸಜ್ಜಿತವಾಗಿ ಜನರ ನಂಬಿಕೆಗೋಸ್ಕರವಾಗಿ ಕೆಲಸವನ್ನು ಮಾಡುವಂತೆ
ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರು ಸಹಾ ಬ್ಯಾಂಕಿನಲ್ಲಿ ಒಂದು ಅಕೌಂಟ್ ಮಾಡಿದ್ದಾರೆ. ಇದೇ ರೀತಿ ಉಳಿತಾಯ
ಹಾಗೂ ಸಾಲವನ್ನು ಪಡೆಯುತ್ತಿದ್ದಾರೆ ಎಂದರು.
ಬ್ಯಾಂಕ್‌ನಲ್ಲಿ ಸಾಲವನ್ನು ನೀಡುವಾ ನಮ್ಮ ಸ್ವಂತ ಹಣವನ್ನು ನೀಡುವ ರೀತಿಯಲ್ಲಿ ಸರಿಯಾದ ರೀತಿಯ ಆಧಾರವನ್ನು
ತೆಗೆದುಕೊಂಡು ಸಾಲವನ್ನು ನೀಡುವುದರಿಂದ ನಮ್ಮ ದೇಶದಲ್ಲಿ ಬ್ಯಾಂಕ್‌ಗಳು ಇನ್ನೂ ಜೀವಂತವಾಗಿ ಇವೆ. ನಮ್ಮ ದೇಶದ
ಉತ್ತಮವಾದ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳು ಬಂದಿರುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಇನ್ನೂ ಚನ್ನಾಗಿ ಇದೆ. ದೇಶದಲ್ಲಿ
ಜನಧನ್ ಅಕೌಂಟ್ ಮಾಡಬೇಕಾದರೆ ಸೊನ್ನೆ ಅಕೌಂಟ್ ನಲ್ಲಿ ಪ್ರತಿಯೊಂದು ಬ್ಯಾಂಕ್ ಸಹಾ ಜನರಿಗೆ ಅಕೌಂಟ್ ಮಾಡಿಕೊಟ್ಟಿದೆ.
ಸುಮಾರು50 ಸಾವಿರ ಅಕೌಂಟ್ ಮಾಡಿದೆ ಎಂದು ಬ್ಯಾಂಕ್ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು. ಆರ್ಥಿಕವಾಗಿ 10ನೇ ಸ್ಥಾನದಲ್ಲಿ ಇದ್ದ ನಮ್ಮ ದೇಶ ಈಗ 5ನೇ ಸ್ಥಾನಕ್ಕೆ ಬಂದಿದೆ. ಮುಂದಿನ ದಿನಮಾನದಲ್ಲಿ 3ನೇ ಸ್ಥಾನಕ್ಕೂ ಬರುವ ನಿರೀಕ್ಷೆ ಇದೆ. ಈ ಹಿಂದೆ ಕೆಲವೇ ಬ್ಯಾಂಕ್ ಗಳು ಮಾತ್ರ ಇದ್ದವು ಆದರೆ ಈಗ ರಸ್ತೆಗೆ 5 ಬ್ಯಾಂಕ್‌ನ ಶಾಖೆಗಳಿವೆ.
ಇಂದಿನ ದಿನಮಾನದಲ್ಲಿ ಬಹತೇಕ ಜನತೆ ಬ್ಯಾಂಕ್‌ನಲ್ಲಿ ವ್ಯವಹಾರವನ್ನು ಮಾಡುತ್ತಿದ್ದಾರೆ. ಅದರಲ್ಲೂ ಈಗ ಡಿಜಿಟಲ್ ಇಂಡಿಯಾ
ಆದ ಮೇಲೆ ಎಲ್ಲರು ಸಹಾ ನಗದನ್ನು ಇಟ್ಟುಕೊಳ್ಳದೆ ಎಲ್ಲ ವ್ಯವಹಾರವನ್ನು ಸಹಾ ಡಿಜಿಟಲಿಕರಣದ ಮೂಲಕ ತಮ್ಮ ಮೊಬೈಲ್
ಮೂಲಕವೇ ಅರ್ಥಿಕ ವ್ಯವಸಹಾರವನ್ನು ನಡೆಸುತ್ತಿದ್ದಾರೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ದೇಶದಲ್ಲಿ ಎಲ್ಲಾ ವ್ಯವಹಾರಗಳು ಸಹಾ ಬ್ಯಾಂಕ್ ಮೂಲಕವೇ ನಡೆಯುತ್ತಿದೆ ಈ ಹಿಂದೆ ಕೇಂದ್ರದಿಂದ 100 ರೂ ಬಂದರೆ ಅದು
ಫಲಾನುಭವಿ ತಲುಪುವಾಗ 20 ರೂ ಆಗುತ್ತಿತ್ತು ಆದರೆ ಈಗ ಕೇಂದ್ರ 100 ರೂ ನೀಡಿದರೆ ಅದು ಪೂರ್ತಿಯಾಗಿ 100 ರೂ
ತಲುವಂತೆ ಆಗುತ್ತಿದೆ. ಯಾವುದೆ ಲಂಚ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಫಲಾನುಭವಿಯನ್ನು ತಲುಪುತ್ತಿದೆ.
ಸಾರ್ವಜನಿಕರ ಉಪಯೋಗಕ್ಕಾಗಿ ಪ್ರಾರಂಭವಾಗುತ್ತಿರುವ ಸಿ.ಎಸ್.ಬಿ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು
ನೀಡಲಿ, ಚಿತ್ರದುರ್ಗದಲ್ಲಿ ಉತ್ತಮವಾದ ಸೌಲಭ್ಯವನ್ನು ನೀಡಲಿ ಇದೇ ರೀತಿ ಚಿತ್ರದುರ್ಗದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಠೇವಣಿ
ಬರಲಿ ಎಂದ ಅವರು ಬ್ಯಾಂಕ್‌ನಲ್ಲಿ ಸಾಲವನ್ನು ಪಡೆದವರು ಸಕಾಲಕ್ಕೆ ಸರಿಯಾದ ರೀತಿಯಲ್ಲಿ ಮರು ಪಾವತಿಯನ್ನು ಮಾಡುವುದರ ಮೂಲಕ ತಾವು ಪ್ರಗತಿಯಾಗುವುದರ ಮೂಲಕ ದೇಶ ಹಾಗೂ ಬ್ಯಾಂಕ್‌ನ್ನು ಆರ್ಥಿಕ ಪ್ರಗತಿಗೆ ಸಹಾ ಮಾಡುವಂತೆ ಮನವಿ ಮಾಡಿದರು.
ಚಿತ್ರದುರ್ಗ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸೈಯದ್ ನಸ್ರುಲ್ಲಾ ಮಾತನಾಡಿ, ಇಂದಿನ ದಿನಮಾನದಲ್ಲಿ ಹಲವಾರು
ಜನತೆ ಬ್ಯಾಂಕ್‌ಗಳಲ್ಲಿ ಸಾಲ ಸಿಗದೆ ಮೈಕ್ರೋ ಫೈನಾಸ್ಸ್ ಗಳ ಮೂಲಕ ಸಾಲವನ್ನು ಪಡೆಯುತ್ತಿದ್ದಾರೆ ಅವರು ಕೇಳಿದ ಬಡ್ಡಿಯನ್ನು
ಕಟ್ಟಲಾಗದೇ ಪರದಾಡುತ್ತಿದ್ದಾರೆ ಈ ಹಿನ್ನಲೆಯಲ್ಲಿ ಬ್ಯಾಂಕ್‌ಗಳು ಸಾಲ ನೀಡುವ ಪದ್ದತಿಯನ್ನು ಸರಳಿಕರಣಗೊಳಿಸಿ ಜನತೆ
ಸುಲಭವಾಗಿ ಸಾಲವನ್ನು ಸಿಗುವಂತೆ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ ಯಾದವ ಗುರುಪೀಠದ ಶ್ರೀ ಕೃಷ್ಣಾಯಾದವನಂದ ಶ್ರೀಗಳು ಮಾತನಾಡಿ, ಗ್ರಾಹಕರಿಗೂ ಹಾಗೂ
ಸಾರ್ವಜನಿಕರಿಗೂ ಕೂಡುವಾಗ ಇಡುವಾಗ ಉತ್ತಮವಾದ ಭಾಂಧವ್ಯ ಇರಲಿ, ಸಂಸ್ಥೆಯೂ ಸದಾ ಪ್ರಗತಿಯನ್ನು ಸಾಧಿಸಲಿ ಎಂದ
ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ದಿನೇಶ್‌ಕುಮಾರ್, ವರ್ತಕರಾದ ನಾಗರಾಜ್ ಬೆಳ್ಳೂಡಿ, ಕಟ್ಟಡ ಮಾಲಿಕರಾಧ ಸತ್ಯನಾರಾಯಣ,
ರಾಮಲಿಂಗರೆಡ್ಡಿ, ಸಿಎಸ್.ಬಿ. ಬ್ಯಾಂಕ್‌ನ ಪ್ರಾದೇಶಿಕ ಅಧಿಕಾರಿ ಜಿನಿತ್ ಶರ್ಮ, ಕ್ಲಸ್ಟಲ್ ಮುಖ್ಯಸ್ಥರಾದ ಪುರುಷೋತ್ತಮ
ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಸಾರ್ವಜನಿಕರು ಹಾಜರಿದ್ದರು.