ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಮೇ.08) : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಪರವಾಗಿ ಮಾಜಿ ಸಂಸದ ಜನಾರ್ಧನಸ್ವಾಮಿ ವಿವಿಧೆಡೆ ಸೋಮವಾರ ಮತ ಯಾಚಿಸಿದರು.
ವಡ್ಡರಪಾಳ್ಯ, ಕಳ್ಳಿಹಟ್ಟಿ, ಮೆದೇಹಳ್ಳಿ, ವಡ್ಡರಸಿದ್ದವ್ವನಹಳ್ಳಿ ಹಾಗೂ ನಗರದ ಎಲ್ಲಾ ಭೋವಿ ಕಾಲೋನಿಗಳಲ್ಲಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಪರ ಮತ ಯಾಚಿಸಿ ಮಾತನಾಡಿದ ಮಾಜಿ ಸಂಸದ ಜನಾರ್ಧನಸ್ವಾಮಿ ಚಿತ್ರದುರ್ಗ ಕ್ಷೇತ್ರ ಸಾಕಷ್ಟು ಅಭಿವೃದ್ದಿಯಾಗಿದ್ದು, ಇನ್ನು ಅಭಿವೃದ್ದಿಯಾಗಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ದೇಶದ ಪ್ರಧಾನಿ ಮೋದಿರವರ ಕೈಬಲಪಡಿಸಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ. ಸರ್ಕಾರ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.
ನಗರಸಭೆ ನಾಮನಿರ್ದೇಶಕ ಸದಸ್ಯ ತಿಮ್ಮಣ್ಣ, ನಗರಸಭೆ ಮಾಜಿ ಸದಸ್ಯ ಮಂಜುನಾಥ್, ವಡ್ಡರಸಿದ್ದವ್ವನಹಳ್ಳಿ ಪ್ರಕಾಶ್, ಬಿಜೆಪಿ.ಯುವ ಮೋರ್ಚಾದ ಚಂದ್ರಶೇಖರಯ್ಯ ವಿ.ಎಸ್. ಭರತ್ ಇನ್ನು ಅನೇಕರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.
The post ಜಿ.ಹೆಚ್.ತಿಪ್ಪಾರೆಡ್ಡಿ ಪರ ಮಾಜಿ ಸಂಸದ ಜನಾರ್ಧನಸ್ವಾಮಿ ಮತಯಾಚನೆ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/GjIsRSP
via IFTTT