ಚಿತ್ರದುರ್ಗ| ಸೆ.01ರಂದು ವಿಶ್ವ ಹಿಂದು ಪರಿಷದ್ ಸ್ಥಾಪನ ದಿನ ಹಾಗೂ “ಷಷ್ಠಿಪೂರ್ತಿ ಸಮಾರೋಪ ಸಮಾರಂಭ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ.30 : ವಿಶ್ವ ಹಿಂದು ಪರಿಷದ್ ಸ್ಥಾಪನ ದಿನ ಹಾಗೂ “ಷಷ್ಠಿಪೂರ್ತಿ ಸಮಾರೋಪ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂಶ್ರೀಕೃಷ್ಣನ ವೇಷಭೂಷಣ ಕಾರ್ಯಕ್ರಮದ ಪ್ರಯುಕ್ತ ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದ ಆವರಣದಲ್ಲಿ ಸೆ. 01ನೇ ಭಾನುವಾ,ರ ಬೆಳಿಗ್ಗೆ 11ಕ್ಕೆ ನಡೆಯಲಿದೆ.

ಧರ್ಮೋ ರಕ್ಷತಿ ರಕ್ಷಿತ: ಅನ್ನುವ ಧೈಯ ವಾಕ್ಯದೊಂದಿಗೆ 1964ರ “ಶ್ರೀ ಕೃಷ್ಣ ಜನ್ಮಾಷ್ಟಮಿಯ” ಪರ್ವ ಕಾಲದಲ್ಲಿ ಸ್ಥಾಪಿಸಲ್ಪಟ್ಟ ವಿಶ್ವ ಹಿಂದೂ ಪರಿಷದ್ ಈಗ ಷಷ್ಟಿಪೂರ್ತಿ ಸಂಭ್ರಮ, ಸಮಸ್ತ ಹಿಂದೂ ಸಮಾಜದ ಅಸಮಾನತೆಯ ಭಾವನೆ ತೊಲಗಿಸಿ ನಾವೆಲ್ಲ ಹಿಂದು,ನಾವೆಲ್ಲ ಒಂದು ಎಂಬ ಭಾವನೆ ಮೂಡಿಸಿ ವಿಶ್ವದೆಲ್ಲೆಡೆ ಸನಾತನ ಧರ್ಮದ ಹಿರಿಮೆಯನ್ನು ಪಸರಿಸಿ, ಸಂರಕ್ಷಣೆಯನ್ನು ಮಾಡಿ ನಿರಂತರ ಸೇವೆ ಸಲ್ಲಿಸುತ್ತಿರುವ ಈ ಸಂಘಟನೆಯ 60ನೇ ವರ್ಷದ ಆಚರಣೆ ನಡೆಯಲಿದೆ. ಕಾಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಶಾರದ ಬ್ರಾಸ್ ಬ್ಯಾಂಡ್‌ನ ಹಿರಿಯ ಸಂಗೀತ ಕಲಾವಿದರಾದ ಎಸ್.ವಿ. ಗುರುಮೂರ್ತಿ ವಹಿಸಲಿದ್ದಾರೆ.

ಮುಖ್ಯ ಭಾಷಣಗಾರರಾಗಿ ಕರ್ನಾಟಕ ದಕ್ಷಿಣದ ಬಜರಂಗದಳದ ಪ್ರಾಂತ ಸಂಯೋಜಕರಾದ ಪ್ರಭಂಜನ್ ನೆವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀಮತಿ ಮಂಜುಳಮ್ಮ. ಯೋಗ ಆಚಾರ್ಯರು ಮತ್ತು ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಎಲ್.ಎಸ್. ಚಿನ್ಮಯಾನಂದ. ಟಾರ್ಗೆಟ್ ಯುವ ವೇದಿಕೆಯ ಅಧ್ಯಕ್ಷರಾದ ಸಿದ್ದರಾಜ್ ಜೋಗಿ, ವಿಗ್ರಹ ಶಿಲ್ಪಿಗಳಾದ ಕೀರ್ತಿ ನಂಜುಂಡಸ್ವಾಮಿ, ವಿಶ್ವ ಹಿಂದು ಪರಿಷದ್‌ನ ಚಿತ್ರದುರ್ಗ ನಗರ ಅಧ್ಯಕ್ಷರಾದ ಅಶೋಕ್ ಕುಮಾರ್ ಈ. ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕೃಷ್ಣನ ವೇಷಭೂಷಣವನ್ನು ಸಹಾ ಏರ್ಪಡಿಸಲಾಗಿದೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಹಿಂದು ಸಮಾಜವನ್ನು ಸದೃಡಗೊಳಿಸುವ ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಉಪಸ್ಥಿತಿಯನ್ನು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ವಿಶ್ವ ಹಿಂದು ಪರಿಷದ್ ಬಯಸಿದ್ದಾರೆ.

Leave a Reply

Your email address will not be published. Required fields are marked *