PM Modi : ವಾರಣಾಸಿಯಲ್ಲಿ ಇಂದು (ಸೆ.23)ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ಮಾಡಲಿದ್ದಾರೆ.

Stadium : ಪ್ರಧಾನಿ ಮೋದಿ ಶನಿವಾರ ವಾರಣಾಸಿ ಭೇಟಿ ನೀಡಲಿದ್ದು, ಇಂದು ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅದರೊಂದಿಗೆ ಸಾಂಸ್ಕೃತಿಕ ಮಹೋತ್ಸವ 2023 ರ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕಾಶಿ ಸಂಸದರು ಅಂದಾಜು ₹ 1,115 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ಉತ್ತರ ಪ್ರದೇಶದಾದ್ಯಂತ 16 ಅಟಲ್ ಅವಾಸಿಯ ವಿದ್ಯಾಲಯಗಳನ್ನು (ವಸತಿ ಶಾಲೆ) ಉದ್ಘಾಟನೆ ಮಾಡಲಿದ್ದಾರೆ.
ವಾರಣಾಸಿಯಲ್ಲಿ ಸುಮಾರು 451 ರೂ ಕೋಟಿ ವೆಚ್ಚದ ʼಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂʼಗೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ಆದಿತ್ಯನಾಥ್ ಎಕ್ಸ್‌ನಲ್ಲಿ(ಹಿಂದೆ ಟ್ವಿಟರ್) ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕ್ರೀಡಾಂಗಣದ ವಾಸ್ತುಶಿಲ್ಪದ ವಿನ್ಯಾಸವು ತ್ರಿಶೂಲ-ಆಕಾರದ ಫ್ಲಡ್‌ಲೈಟ್‌ಗಳು, ಘಾಟ್ ಮೆಟ್ಟಿಲುಗಳನ್ನು ಆಧರಿಸಿದ ಆಸನಗಳು, ಮುಂಭಾಗದಲ್ಲಿ ಬಿಲ್ವಿಪಾತ್ರ-ಆಕಾರದ ಲೋಹದ ಹಾಳೆಗಳು, ಅಲ್ಲದೇ ವಿನ್ಯಾಸವು ಶಿವನಿಂದ ಪ್ರೇರಿತವಾಗಿದೆ.
ಯುಪಿ ಸರ್ಕಾರದ ಹೇಳಿಕೆಯ ಪ್ರಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 121 ಕೋಟಿ ಖರ್ಚು ಮಾಡಿದೆ. ಮತ್ತು 30,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹ 330 ಕೋಟಿ ವೆಚ್ಚ ಮಾಡಲಿದೆ.
ಇಂದು ನಡೆಯುವ ಸಮಾರಂಭದಲ್ಲಿ ಬಿಸಿಸಿಐನ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ ಮತ್ತು ಖ್ಯಾತ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ಮತ್ತು ಹಲವಾರು ದಿಗ್ಗಜರು ಭಾಗವಹಿಸುವ ನಿರೀಕ್ಷೆಯಿದೆ.
ರಿಂಗ್ ರೋಡ್ ಬಳಿಯ ರಾಜತಾಲಾಬ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕ್ರೀಡಾಂಗಣವು ಡಿಸೆಂಬರ್ 2025 ರ ವೇಳೆಗೆ ಪೂರ್ಣಗೊಳ್ಳಲಿದೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii