
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಪ್ರತಿಯೊಬ್ಬರು ವರ್ಷಕ್ಕೆ ಕನಿಷ್ಠ ಐದು ಗಿಡಗಳನ್ನು ಬೆಳೆಸಲೇಬೇಕು : ಡಾ.ವಿ.ಎಲ್ ಪ್ರಶಾಂತ್
ಚಿತ್ರದುರ್ಗ ಜೂ. 05 ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯಲ್ಲಿ ಸಂಸ್ಥಾಪಕರ ದಿನ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಗಳಾದ ಡಾ.ವಿ.ಎಲ್ ಪ್ರಶಾಂತ್ ಮಾತನಾಡಿ, ಪರಿಸರದಿಂದ ನಮಗೆ ಅಗುವ ವಿವಿಧ ರೀತಿಯ
ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ, ಪರಿಸರವನ್ನು ಸಂರಕ್ಷಿಸಬೇಕು ಮತ್ತು ಗಿಡವನ್ನು ನೆಡಬೇಕು ಗಿಡದಿಂದ ನಮಗೆ
ಹಲವಾರು ರೀತಿಯ ಪ್ರಯೋಜನಗಳು ಇವೆ, ಇದರಿಂದ ಶುದ್ದವಾದ ಗಾಳಿಯ ಸೇವನೆಯಿಂದ ನಮ್ಮ ಆರೋಗ್ಯ ಚನ್ನಾಗಿ ಇರುತ್ತದೆ
ಇದಕ್ಕೆ ಪರಿಸರ ಸಹಾಯ ಮಾಡುತ್ತದೆ ನಾವೆಲ್ಲರೂ ಸೇರಿ ಪರಿಸರವನ್ನು ಸಂರಕ್ಷಿಸೋಣ ಮತ್ತು ಒಂದು ವರ್ಷಕ್ಕೆ ಕನಿಷ್ಠ ಒಬ್ಬರು
ಐದು ಗಿಡಗಳನ್ನು ಬೆಳೆಸಲೇಬೇಕು ಎಂದು ಹೇಳಿದರು ಇದೇ ಸಂದರ್ಭದಲ್ಲಿ ಸಂಸ್ಥಾಪಕ ದಿನಾಚರಣೆಯ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎನ್‍ಶಾಂತವೆಂಕಟೇಶ್, ಆಡಳಿತಾಧಿಕಾರಿಗಳಾದ ವಿ ಎಲ್
ಪ್ರವೀಣ್,ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಗೌರಿ ಪ್ರಶಾಂತ್, ಶ್ರೀಮತಿ ಕಾವ್ಯ ಪ್ರವೀಣ್ ಹಾಗೂ ಶಾಲೆಯ ಎಲ್ಲಾ ಶಿಕ್ಷಕ
ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
Views: 55