ವರ್ಕ್ ಇಂಡಿಯಾ ಆಯಫ್ ಮುಖಾಂತರ ಯುವಕ-ಯುವತಿಯರ ನಂಬರ್ ಪಡೆದು ತಲಾ 60 ಸಾವಿರ ಹಣ ಪಡೆದು ಮೋಸ ಮಾಡಲಾಗಿದೆ. ‘CYL FACTION MARKETING’ ಎಂಬ ಕಂಪನಿಯೊಂದು ನೆಟ್‌ವರ್ಕ್ ಮಾರ್ಕೆಟಿಂಗ್ ಹೆಸರಲ್ಲಿ ವಂಚಿಸಿದೆ. ಸದ್ಯ ಈ ಘಟನೆ ಸಂಬಂಧ 4 ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನೆಲಮಂಗಲ : ಎಸ್ಎಸ್ಎಲ್ಸಿ (SSLC), ಪಿಯುಸಿ (PUC) ಮುಗಿಸಿ ಕೆಲಸಕ್ಕಾಗಿ ಅಲೆಯುತ್ತಿರುವ ಯುವಕರೇ ಕೆಲಸಕ್ಕೆ ಸೇರುವ ಮುನ್ನ ಇರಲಿ ಎಚ್ಚರ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನಲ್ಲಿ ನಕಲಿ ಚೈನ್ ಲಿಂಕ್ ಕಂಪನಿ ತಲೆ ಎತ್ತಿದೆ. SSLC, PUC ಮುಗಿಸಿರುವ ವಿದ್ಯಾರ್ಥಿಗಳೇ ಈ ಕಂಪನಿಯ ಮೈನ್ ಟಾರ್ಗೆಟ್. ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ನಿರುದ್ಯೋಗಿಗಳಿಗೆ ಗಾಳ ಹಾಕಿ ಮೋಸ ಮಾಡಲಾಗುತ್ತಿದೆ. ‘CYL FACTION MARKETING’ ಎಂಬ ಕಂಪನಿಯೊಂದು ನೆಟ್‌ವರ್ಕ್ ಮಾರ್ಕೆಟಿಂಗ್ ಹೆಸರಲ್ಲಿ ಕೆಲಸ ನೀಡಿ ಯುವಕ-ಯುವತಿಯರಿಗೆ ಮೋಸ ಮಾಡಿದೆ.
ವರ್ಕ್ ಇಂಡಿಯಾ ಆಯಫ್ ಮುಖಾಂತರ ಯುವಕ-ಯುವತಿಯರ ನಂಬರ್ ಪಡೆದು ತಲಾ 60 ಸಾವಿರ ಹಣ ಪಡೆದು ನೂರಾರು ಯುವಕ ಯುವತಿಯರಿಗೆ ಲಕ್ಷಾಂತರ ರೂಪಾಯಿ ನಾಮ ಹಾಕಲಾಗಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಚೇರಿ ನಡೆಸುತ್ತಿದ್ದ 9 ಜನರ ಪೈಕಿ ಅಭಿಷೇಕ್(21),ಅದಿತ್ಯ(22), ಹೇಮಂತ್(26), ಜಗದೀಶ್(28)ನನ್ನು ಬಂಧಿಸಲಾಗಿದೆ. ತುಮಕೂರು, ನೆಲಮಂಗಲ, ಕೋಲಾರ, ಮೈಸೂರು ಸೇರಿದಂತೆ ಹಲವಾರು ಜಿಲ್ಲೆಯಲ್ಲಿ ತಲೆ ಎತ್ತಿರುವ ಫ್ರಾಡ್ ಕಂಪನಿ ವಿರುದ್ಧ ತನಿಖೆ ಚುರುಕುಗೊಂಡಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1