ನಿವೃತ್ತ ಶಿಕ್ಷಕರಿಗೆ ಉಚಿತವಾಗಿ ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆ ಶಿಬಿರ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 19 ಸ್ಪರ್ಶ್ ಫೌಂಡೇಶನ್‍ವತಿಯಿಂದ ನಿವೃತ್ತ ಶಿಕ್ಷಕರಿಗೆ ಉಚಿತವಾಗಿ ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆ.22ರಂದು ದಾವಣಗೆರೆಯ ಗುಂಡಿ ವೃತ್ತದ ಬಳಿಯ ಮೋದಿ ಕಾಂಪೌಂಡ್‍ನ ಎಸ್.ಎಸ್.ಸ್ಪೆಷಾಲಿಟಿ ಕ್ಲಿನಿಕ್‍ನಲ್ಲಿ ಆಯೋಜಿಸಲಾಗಿದೆ.

ಸೆ, 5 ಶಿಕ್ಷಕರ ದಿನಾಚಣೆಯ ಅಂಗವಾಗಿ ಬೆಂಗಳೂರಿನ ಸ್ಪರ್ಶ್ ಗ್ರೋಪ್ ಆಸ್ಪತ್ರೆಯ ದತ್ತಿ ವಿಭಾಗದ ಸ್ಪರ್ಶ್ ಫೌಂಡೇಶನ್ ದಾವಣಗೆರೆಯಲ್ಲಿ ನಿವೃತ್ತ ಶಿಕ್ಷಕರಿಗೆ ಉಚಿತ ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಿದೆ ಈ ಉಪಕ್ರಮವೂ ಸ್ಪರ್ಶ್ ಫೌಂಡೇಶನ್‍ನ ಸ್ಪರ್ಶ್ ಗುರುನಮನ ಕಾರ್ಯಕ್ರಮದ ಒಂದು ಭಾಗವಾಗಿದೆ. ಇದು ಗ್ರಾಮೀಣ ಹಿನ್ನಲೆಯ ನಿವೃತ್ತ ಶಿಕ್ಷಕರ ಜೀವನದ ದಿಕ್ಕನ್ನು ಬದಲಾಯಿಸಬಲ್ಲ ಕೀಲು ಬದಲಿ ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. ಇದರಲ್ಲಿ ಶಸ್ತ್ರ ಚಿಕಿತ್ಸಕರು, ಆಪರೇಷನ್ ಥೀಯೇಟರ್ ಸಿಬ್ಬಂದಿ, ಶುಶೂಷಾ ಸಿಬ್ಬಂದಿ, ಆರೆ ವೈದ್ಯಕೀಯ ಸಿಬ್ಬಂದಿ, ಫಿಸಿಯೋಥೇರೇಪಿಸ್ಟ್‍ಗಳು, ಔದ್ಯೋಗಿಕ ಚಿಕಿತ್ಸಕರು ಮತ್ತು ಆಹಾರ ಒಳಗೊಂಡ ಸಮರ್ಪಿತ ತಂಡವು ಯಾವುದೇ ಶುಲ್ಕ ಇಲ್ಲದೆ ಸೇವೆಗಳನ್ನು ನೀಡಲಿದೆ.

ಶಿಬಿರಕ್ಕೆ ಆಗಮಿಸುವವರು ನಾಗರಾಜ್ 8904243944, ಚೇತನ ಕುಮಾರ್ 9980033277 ಈ ದೂರವಾಣಿ ಸಂಖ್ಯೆ ತಮ್ಮ ಹೆಸರನ್ನು ನೊಂದಾಯಿ ಸಬೇಕಿದೆ. ಆ. 22 ರಂದು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *