ಚಿತ್ರದುರ್ಗ ನ. 04
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ನಿವೃತ್ತ ನೌಕರರ ಸಂಘ ಬೆಂಗಳೂರು ಇವರಿಂದ ಹೊಳಲ್ಕೆರೆ ರಸ್ತೆಯಲ್ಲಿನ ಚಿತ್ರದುರ್ಗ ಪ್ರಧಾನ ಅಂಚೆ ಕಚೇರಿಯಲ್ಲಿಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕೇಂದ್ರ ರಾಜ್ಯ ಹಾಗೂ ಸಾರ್ವಜನಿಕ ಕ್ಷೇತ್ರದ ನಿವೃತ್ತ ನೌಕರರಿಗೆ, ಪಿಂಚಣಿಯನ್ನು ಮುಂದುವರೆಸುವ ಸಲುವಾಗಿ ಉಚಿತವಾಗಿ ಜೀವನ ಪ್ರಮಾಣ ಪತ್ರ ಅಭಿಯಾನವನ್ನು ನಡೆಸಲಾಯಿತು.

ಈ ಅಭಿಯಾನದಲ್ಲಿ ನಿವೃತ್ತ ಉಪ ಅಂಚೆ ಪಾಲಕರು (ಲೆಕ್ಕ) ದಾವಣಗೆರೆ ಭಾರತೀಯ ಅಂಚೆ ಇಲಾಖೆ, ಸ್ವಯಂಸೇವಕರು ಸಂಘದ ಸದಸ್ಯರು ಹಾಗೂ ಕೊ ಆರ್ಡಿನೇಟರಾದ ಬಿ. ಟಿ.ಚಂದ್ರಶೇಖರ್, ನಿವೃತ್ತ ಅಂಚೆ ಲೆಕ್ಕಾಧಿಕಾರಿ ಪಿ.ಎಂ.ಕೊಟ್ರಬಸಪ್ಪ, ಮಂಜುನಾಥ್ ಮತ್ತು ಮಹೇಶ್ ಭಾಗವಹಿಸಿದ್ದರು.
ಚಿತ್ರದುರ್ಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿವೃತ್ತ ನೌಕರರು ಹಾಗೂ ಕೇಂದ್ರ ಸಾರ್ವಜನಿಕ ಸಂಸ್ಥೆಯ 60 ನಿವೃತ್ತ ನೌಕರರು ಅಭಿಯಾನದ ಸದುಪಯೋಗ ಪಡೆದುಕೊಂಡು ತಮ್ಮ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಿದರು
Views: 189